UN NETWORKS
ಮಂಗಳೂರು : ಫೈವ್ ಟ್ರಿಲಿಯನ್ ಇಕಾನಮಿ ಉದ್ದೇಶವನ್ನು ಇಟ್ಟುಕೊಂಡಿರುವುದರಿಂದ ದೇಶ ಸರ್ವತೋಮುಖ ಅಭಿವೃದ್ಧಿಯಾಗಲಿದೆ. ದೇಶದ ಮೂಲಸೌಕರ್ಯ ಅಭಿವೃದ್ಧಿಗೆ 100 ಲಕ್ಷ ಕೋಟಿಯನ್ನು ಮೀಸಲಿರಿಸಲಾಗಿದೆ. ಇದರಿಂದ ಕಟ್ಟಡ ಹಾಗೂ ಇತರೆ ಸಾಮಗ್ರಿ ತಯಾರಿಕಾ ಘಟಕಗಳಿಗೆ ಬಹಳ ಲಾಭದಾಯಕವಾಗಲಿದೆ. ಎಂದು ಕೆನರಾ ಸಣ್ಣ ಕೈಗಾರಿಕೆಗಳ ಅಸೋಸಿಯೇಷನ್ ಅಧ್ಯಕ್ಷ ಗೌರವ್ ಹೆಗ್ಡೆ ಅಭಿಪ್ರಾಯಪಟ್ಟರು.



ಅವರು ಬೈಕಂಪಾಡಿಯ ಕೆನರಾ ಸಣ್ಣ ಕೈಗಾರಿಕೆಗಳ ಅಸೋಸಿಯೇಷನ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಬಜೆಟ್ -2019 ಚರ್ಚಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು. ಕಾನ್ಫಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರೀ ( ಸಿಐಐ ) ಕಾರ್ಯಕ್ರಮ ಆಯೋಜಿಸಿತ್ತು. ಸಾಮಗ್ರಿಗಳ ಸಾಗಾಟ ಲಾಜಸ್ಟಿಕ್ ಗಳ ವ್ಯವಹಾರವೂ ಅಭಿವೃದ್ಧಿಯಾಗುವುದು. ಕಾರ್ಮಿಕರಿಗೆ ಕೆಲಸವಾಗಲಿದೆ. ಜಿಎಸ್ ಟಿಯಲ್ಲೂ ಸರಳೀಕರಣ ನೀತಿಯನ್ನು ಜಾರಿಗೊಳಿಸುವ ಉದ್ದೇಶ ಇದೆ. ಸಹಜ್ ಮತ್ತು ಸರಳ್ ಫೈಲಿಂಗ್ ಉದ್ದಿಮೆದಾರರಿಗೆ ಉಪಯುಕ್ತವಾಗಲಿದೆ. ಕಾರ್ಖಾನೆ ಕಾರ್ಮಿಕರಿಗೆ ಲೇಬರ್ ಕೋಡ್ ನೀತಿ ಜಾರಿಗೊಳಿಸುವ ಮೂಲಕ ಲೇಬರ್ ಮ್ಯಾನೇಜ್ ಮಂಟ್ ಸುಲಭವಾಗಲಿದೆ. ಗ್ರಾಮೀಣ ಜನರಿಗೆ ಕೌಶಲ್ಯವೃದ್ಧಿಗೆ ಒತ್ತು ಹಾಗೂ ಕಡಿಮೆ ವೆಚ್ಚದ ಮನೆ ನಿರ್ಮಾಣ ಹಾಗೂ ಇಲೆಕ್ಟ್ರಾನಿಕ್ ವಾಹನಗಳ ಮೇಲಿನ ಜಿಎಸ್ ಟಿಯನ್ನು ಕಡಿಮೆಗೊಳಿಸಲಾಗುವುದು. ಕೊಟ್ಟಿರುವ ಸ್ಕೀಂಗಳನ್ನು ಶೀಘ್ರವೇ ಜಾರಿಗೊಳಿಸಿದಲ್ಲಿ ಮಧ್ಯಮ ವರ್ಗದವರ ಜೀವನ ಉತ್ತಮವಾಗಲಿದೆ. 100 ಲಕ್ಷ ಕೋಟಿ ಬಜೆಟ್ ಇರಿಸಲಾಗಿದೆ. ಕಟ್ಟಡ ಸಾಮಗ್ರಿ ತಯಾರಿಕಾ ಘಟಕಗಳಿಗೆ ಬಹಳಷ್ಟು ಲಾಭದಾಯಕ. ಲಾಜಿಸ್ಟಿಕ್ಸ್ ನಿಂದ ಸರಕು ಸಾಗಾಟ ವ್ಯವಹಾರವೂ ಅಭಿವೃದ್ಧಿಯಾಗಲಿದೆ. ಜಿಸ್ ಟಿಯಲ್ಲೂ ಸರಳೀಕರಣ ನೀತಿಯಿದೆ. ಸಹಜ್ ಮತ್ತು ಸರಳ್ ಫೈಲಿಂಗ್ ರೀತಿ ಬಹಳ ಲಾಭದಾಯಕವಾಗಿದೆ. ಸುಲಭವಾಗಿ ಫೈಲಿಂಗ್ ಮಾಡುವ ವಿಧಾನವಾಗಿದೆ ಎಂದರು.
ಕಲಾಯಿ ಸಾಕ್ರೇಟ್ಸ್ ಮಾತನಾಡಿ ದೇಶದಲ್ಲಿ ನಿರುದ್ಯೋಗ ದೊಡ್ಡ ಸಮಸ್ಯೆಯಾಗಿದೆ. ಎಂಎಸ್ಎಇ ಸೆಕ್ಟರ್ ಗಳು ಮಾತ್ರ ಉದ್ಯೋಗಗಳನ್ನು ಸೃಷ್ಟಿಸುತ್ತಾ ಬಂದಿದೆ. ಆದರೆ ಅಂತಹ ಸೆಕ್ಟರ್ ಅಭಿವೃದ್ಧಿಗಾಗಿ ಬಜೆಟಿನಲ್ಲಿ ಯಾವುದೇ ನೀತಿಯನ್ನು ಜಾರಿಗೊಳಿಸಿಲ್ಲ. ನಿರೀಕ್ಷೆ ಹುಸಿಯಾಗಿದೆ. ಫೇಸ್ಲೆಸ್ ಅಸೆಸ್ಮೆಂಟ್ ಹಾಗೂ ವಾರ್ಷಿಕ ಆದಾಯ 5 ಲಕ್ಷ ಹಾಗೂ ಕಡಿಮೆ ಇರುವವರಿಗೆ ತೆರಿಗೆ ಪಾವತಿಸಬೇಕಾಗಿಲ್ಲ ಅನ್ನುವುದು ದೊಡ್ಡ ನಿರ್ಧಾರ. ಪಾನ್ಕಾರ್ಡು ಇಲ್ಲದೇ ಇದ್ದಲ್ಲಿಯೂ ಆಧಾರ್ ಉಪಯೋಗಿಸಬಹುದು. ಪೆಟ್ರೋಲ್ -ಡಿಸೀಲ್ ಗೆ ಸೆಸ್ ತೆರಿಗೆಯನ್ನು ಜಾಸ್ತಿ ಮಾಡಿರುವುದರಿಂದ ದಿನಬಳಕೆ ವಸ್ತುಗಳಿಗೂ ಬೆಲೆ ಹೆಚ್ಚಾಗಲಿದೆ. ವಿದ್ಯುತ್ ವಾಹನಗಳ ಉಪಯೋಗಕ್ಕೆ ಹೆಚ್ಚಿನ ಪ್ರೋತ್ಸಾಹವನ್ನು ನೀಡಲು ಇಚ್ಛಿಸಿರುವ ಸರಕಾರದ ಕ್ರಮದಿಂದ 2020ರ ಒಳಗೆ ರಸ್ತೆಯಲ್ಲಿ ವಿದ್ಯುತ್ ವಾಹನಗಳ ಓಡಾಟ ಹೆಚ್ಚು ಕಾಣಬಹುದು. ಇಲೆಕ್ಟ್ರಾನಿಕ್ ಇನ್ ವಾಯ್ಸ್ ನ ಬದಲು ಆನ್ ಲೈನ್ ಇನ್ವಾಯ್ಸ್ ಮಾಡುವ ಕ್ರಮ ಲಾಭದಾಯಕ. ದೇಶದಲ್ಲಿ ವಸ್ತುವಿದ್ದರೂ, ಬೇರೆ ದೇಶಗಳಿಂದ ಕಚ್ಚಾ ರೂಪದಲ್ಲಿ ಅತಿ ಕಡಿಮೆ ದರದಲ್ಲಿ ಅದೇ ವಸ್ತು ಸಿಗುತ್ತದೆ. ಇದರಿಂದ ದೇಶದಲ್ಲಿ ಬೆಳೆದ ಸೊತ್ತುಗಳಿಗೆ ಬೆಲೆ ಇಲ್ಲ. ಈ ನಿಟ್ಟಿನಲ್ಲಿ ಶೇ.70 ರಷ್ಟು ಡ್ಯೂಟಿ ತೆರಿಗೆ ಜಾರಿಗೊಳಿಸಿರುವ ಕ್ರಮ ಉತ್ತಮವಾದುದು ಎಂದರು.
ಹೆನ್ರಿ ಬ್ರಿಟ್ಟೋ ಮಾತನಾಡಿ . 5 ಟ್ರಿಲಿಯನ್ ಡಾಲರ್ ಇಕಾನಾಮಿ, ಮಲ್ಟಿ ನ್ಯಾಷನಲ್ ಕಂಪೆನಿಗಳನ್ನು ಆಹ್ವಾನಿಸಿರುವುದು, ಏಂಜಲ್ ಟ್ಯಾಕ್ಸ್ ಸಂಪೂರ್ಣ ಕಡಿತ ಮಾಡಿದೆ. ಒಂಭತ್ತು ನಿಮಿಷಗಳಲ್ಲಿ 1 ಕೋಟಿ ರೂ.ವರೆಗೂ ಸಾಲ , ಮೇಕ್ ಇನ್ ಇಂಡಿಯಾ ನೀತಿಯ ಜತೆಗೆ ಮೆಗಾ ಪ್ರಾಡಕ್ಷನ್ ಪಾರ್ಟ್ ಅದಕ್ಕಾಗಿ ಓಪನ್ ಟೆಂಡರ್ ಪ್ರಕ್ರಿಯೆ ಕರೆಯುವ ನಿರ್ಧಾರ ಬಹಳ ಉಪಯುಕ್ತವಾದುದು. ಈ ಮೂಲಕ ಉತ್ಪಾದನಾ ರಂಗ ಪ್ರಾಮುಖ್ಯತೆ ಪಡೆಯುವುದರ ಜೊತೆಗೆ ನಿರುದ್ಯೋಗ ಸುಧಾರಣೆಯಾಗಲಿದೆ ಎಂದರು. ಈ ಸಂದರ್ಭ ರಮೇಶ್ ರಾವ್, ವಿದ್ಯಾರ್ಥಿ ಜಾಶ್ವಿನ್ ಎಂ.ಡಿಸೋಜ, ಎಂ.ಜೆ.ಶೆಟ್ಟಿ ಉಪಸ್ಥಿತರಿದ್ದರು.


