UN NETWORKS
ಉಳ್ಳಾಲ : ಪವಿತ್ರ ಹಜ್ಜ್ ಯಾತ್ರೆಗೆ ತೆರಳುತ್ತಿರುವ ಕೋಡಿ ಜುಮಾ ಮಸೀದಿಯ ಖತೀಬ್ ಅಬ್ದುಲ್ ಮಜೀದ್ ಮದನಿ ಹಾಗೂ ಸದರ್ ಉಸ್ತಾದ್ ಮುಹಿಯುದ್ದೀನ್ ಮುಸ್ಲಿಯಾರ್ ಇವರಿಗೆ ಬೀಳ್ಕೊಡುಗೆ ಸಮಾರಂಭ ಕೋಡಿ ಮಸೀದಿಯ ವಠಾರದಲ್ಲಿ ಶುಕ್ರವಾರ ನಡೆಯಿತು.

ಇದೇ ಸಂದರ್ಭದಲ್ಲಿ ಮಸೀದಿಯ ಖಾದಿಮಿ ಉಮ್ಮರ್ ಮುಸ್ಲಿಯಾರ್ ಅವರನ್ನು ಸನ್ಮಾನಿಸಲಾಯಿತು.
ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಯು.ಕೆ.ಮೋನು ಇಸ್ಮಾಯಿಲ್, ಅರಬಿಕ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಅಮೀರ್, ದರ್ಗಾ ಲೆಕ್ಕ ಪರಿಶೋಧಕ ಯು.ಟಿ.ಇಲ್ಯಾಸ್ ತೋಟ, ಚಾರಿಟೇಬಲ್ ಟ್ರಸ್ಟ್ ಜೊತೆಕಾರ್ಯದರ್ಶಿ ಎ.ಕೆ.ಮೊಯಿದಿನ್, ಉಳ್ಳಾಲ ಲೋಕೋಪಯೋಗಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಯು.ಕೆ.ಯೂಸುಫ್, ಪೇಟೆ ಜುಮಾ ಮಸೀದಿಯ ಅಧ್ಯಕ್ಷ ಮೊಯಿದಿನಬ್ಬ, ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ಹಮೀದ್ ಎ.ಆರ್, ಮಾಜಿ ಅಧ್ಯಕ್ಷ ಅಶ್ರಫ್, ಉಪಾಧ್ಯಕ್ಷ ಯು.ಸಿ.ಖಾಸಿಂ, ಕೋಶಾಧಿಕಾರಿ ಮೂಸ ಕುಂಞ, ಕಾರ್ಯದರ್ಶಿ ಇಸ್ಮಾಯಿಲ್, ಜೊತೆ ಕಾರ್ಯದರ್ಶಿ ಮೊಹಮ್ಮದ್, ಉಳ್ಳಾಲ ನಗರಸಭೆ ಸದಸ್ಯರಾದ ಅಝೀಝ್, ರಮೀಝ್, ಮೊಹಮ್ಮದ್ ಮುಕ್ಕಚ್ಚೇರಿ, ಬಶೀರ್, ಮಾಜಿ ಅಧ್ಯಕ್ಷ ಹುಸೈನ್ ಕುಂಞಮೋನು, ಮಾಜಿ ಸದಸ್ಯ ಉಸ್ಮಾನ್ ಕಲ್ಲಾಪು ಉಪಸ್ಥಿತರಿದ್ದರು.
ಉಳ್ಳಾಲ ನಗರಸಭೆ ಸದಸ್ಯ ಅಯ್ಯೂಬ್.ಯು.ಪಿ ಮಂಚಿಲ ಸ್ವಾಗತಿಸಿದರು. ಮಸೀದಿಯ ಇಮಾಮ್ ಲತೀಫ್ ಕಾರ್ಯಕ್ರಮ ನಿರೂಪಿಸಿದರು.


