Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಕೊಣಾಜೆ

ಮಂಗಳೂರು ವಿವಿಯಲ್ಲಿ ಎಲ್ಲರೂ ಅತ್ಯುತ್ತಮ ಶಿಕ್ಷಕರು, ಹಾಗಾಗಿ ಬೆಸ್ಟ್ ಟೀಚರ್ ಅವಾರ್ಡ್‍ಗೆ ಖೊಕ್ : ಪ್ರೊ. ಪಿ.ಎಸ್.ಯಡಪಡಿತ್ತಾಯ

UllalaVaniBy UllalaVaniJuly 6, 2019No Comments3 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

UN NETWORKS

ಕೊಣಾಜೆ : ಮಂಗಳೂರು ವಿಶ್ವವಿದ್ಯಾಲಯದಲ್ಲಿ ಈ ಶೈಕ್ಷಣಿಕ ಸಾಲಿನಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿತರಿಸುವ ಪದ್ಧತಿಗೆ ಪೂರ್ಣ ವಿರಾಮ ಹಾಕುವ ಚಿಂತನೆ ಇದ್ದು ಪ್ರಶಸ್ತಿ ಕೊಡಲೇ ಬೇಕು ಎಂದು ಶಿಕ್ಷಕರು ಒತ್ತಾಯಿಸಿದರೆ ಕೊಡುವ ಕ್ರಮಕ್ಕೆ ನನ್ನದೇನು ಅಭ್ಯಂತರ ಇಲ್ಲ ಎಂದು ಮಂಗಳೂರು ವಿಶ್ವವಿದ್ಯಲಯದ ಕುಲಪತಿ ಪ್ರೊ. ಪಿ.ಎಸ್. ಯಡಪಡಿತ್ತಾಯ ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯ ಶಿಕ್ಷಕರ ಎಸೋಸಿಯೇಶನ್ (ಮುಟಾ) ಹಾಗೂ ವಿಶ್ವವಿದ್ಯಾಲಯದ ಎಸ್‍ಸಿ- ಎಸ್‍ಟಿ ಉದ್ಯೋಗಿಗಳ ಸಂಘದ ಸಹಯೋಗದಲ್ಲಿವಿವಿಯ ಉಪನ್ಯಾಸ ಸಭಾಂಗಣದಲ್ಲಿ ಗುರುವಾರ ನಡೆದ ನೂತನ ಕುಲಪತಿ ಪ್ರೊ. ಪಿ.ಎಸ್.ಯಡಪಡಿತ್ತಾಯ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಎಲ್ಲ ಶಿಕ್ಷಕರು ಅತ್ಯುತ್ತಮ ಶಿಕ್ಷಕರೇ ಆಗಿರುವುದರಿಂದ ಉತ್ತಮ ಶಿಕ್ಷಕರ ಅಯ್ಕೆ ಕಠಿಣ ಸವಾಲಾಗಿದೆ. ಇದುವರೆಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದವರು ಶ್ರೇಷ್ಠ ಶಿಕ್ಷಕರು ಎಂಬದುರಲ್ಲಿ ಎರಡು ಮಾತಿಲ್ಲ. ಅದರ ಜೊತೆಗೆ ನಿವೃತ್ತಿ ಹೊಂದಿದ ಶಿಕ್ಷಕರು ಅತ್ಯುತ್ತಮ ಶಿಕ್ಷಕರು ಎಂಬುದನ್ನು ನೆನೆಪಿಸಬೇಕಾದುದು ಅತಿ ಮುಖ್ಯ. ಆ ಪ್ರಶಸ್ತಿಗೆ ನ್ಯಾಯ ಕೊಡಿಸುವುದು ಕಷ್ಟ. ಉಪನ್ಯಾಸಕರೇ ಪ್ರಶಸ್ತಿ ಬೇಕೇ ಬೇಡವೇ ಎಂದು ನಿರ್ಧರಿಸಿ. ಆ ಬಗ್ಗೆ ಚಿಂತಿಸಲೆಂದೆ ಪಶಸ್ತಿ ಕೊಡುವ ಪರಿಪಾಠ ನಿಲ್ಲಿಸುವ ವಿಷಯದ ಕುರಿತಾಗಿ ನಿಮ್ಮ ತಲೆಗೆ ಹುಳ ಬಿಟ್ಟಿದ್ದೇನೆ. ಯಾಕೆಂದರೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಆನ್‍ಲೈನ್ ಮೂಲಕ ಆಯ್ಕೆಯೋ, ಯಾರನ್ನಾದರೂ ಎತ್ತಿಕಟ್ಟಿಯೋ, ಯಾರನ್ನೋ ಖುಷಿ ಪಡಿಸಲಿರುವುದೋ ಗೊತ್ತಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ವಿದ್ಯಾರ್ಥಿಗಳ ಅಭಿಪ್ರಾಯ ಅತಿ ಮುಖ್ಯ ಎಂದರು.

ಅಧಿಕಾರ ಸ್ವೀಕರಿಸಿದ ಬಳಿಕ ಸ್ಥಳೀಯ ವ್ಯಕ್ತಿ ಕುಲಪತಿಯಾಗಿರುವುದರಿಂದ ಬಹಳಷ್ಟು ಜವಬ್ದಾರಿ ಇದೆ. ಪ್ರಸಾರಾಂಗದ ಮೂಲಕ ಬಹಳಷ್ಟು ಸ್ಥಳೀಯ ಸಾಧಕರ ಕೃತಿಗಳನ್ನು ಹೊರತರಬೇಕಾಗಿದೆ. ಬಹಳಷ್ಟು ಕಠಿಣ ಕ್ರಮಗಳ ಕಡೆಗೆ ಗಮನ ಹರಿಸಿದ್ದೇನೆ. ಪ್ಲಾಸ್ಟಿಕ್ ಮುಕ್ತ ವಿವಿ, ಹೋಟೆಲ್, ಇ ಗವರ್ನೆನ್ಸ್, ನಾಲ್ಕು ವರ್ಷದಲ್ಲಿ ವಿವಿಯನ್ನು ಪೇಪರ್ ಲೆಸ್ ಮಾಡುವ ಬಹಳಷ್ಟು ಯೋಜನೆಗಳಿದ್ದು 12 ಜನರ ಥಿಂಕ್ ಟ್ಯಾಂಕ್ ಅಡ್ವೈಸರಿ ಕಮಿಟಿ ಮಾಡಿದ್ದು ಅವರ ಎಲ್ಲರ ಸಹಕಾರ ಪಡೆಯಲಿದ್ದೇನೆ ಎಂದು ನುಡಿದರು.

ಕುಲಪತಿ ಸರ್ವಜ್ಞನಲ್ಲ, ಎಲ್ಲರ ಸಹಕಾರ ಪಡೆದು ಮುಂದುವರಿಯಬೇಕಾಗುತ್ತದೆ. ದುಂದುವೆಚ್ಚ ಕಡಿಮೆ ಮಾಡೋದು ಮಾತಿನಿಂದ ಅಲ್ಲ ಕೃತಿಯಿಂದ ಅಲ್ಲ. ವಾಚ್‍ಮೆನ್‍ನಿಂದ ಕುಲಪತಿಗೆ ಅಲ್ಲ. ಕುಲಪತಿಯಿಂದಲೆ ಆರಂಭವಾಗಬೇಕು ಎಂದು ಬೆಂಗಳೂರಿನಲ್ಲಿ ವಿಂಡ್ಸರ್ ಮ್ಯಾನರ್, ಲಲಿತ್‍ನಲ್ಲಿ ತಂಗುವ ಅವಕಾಶವಿದ್ದರೂ ಸಾಧಾರಣ ಬಾಡಿಗೆ ಇರುವ ಮೌರ್ಯದಲ್ಲಿ ನಿಲ್ಲುವ ಮೂಲಕ 15ಸಾವಿರದಿಂದ 3ಸಾವಿರ ಬಾಡಿಗೆಯ ಹೋಟೆಲ್ ಕೊಠಡಿಯಲ್ಲಿ ಉಳಿದುಕೊಳ್ಳುವ ಮೂಲಕ ದುಂದುವೆಚ್ಚಕ್ಕೆ ಕಡಿವಾಣ ನನ್ನಿಂದಲೇ ಆರಂಭಿಸಿದ್ದೇನೆ. ಉಪಯೋಗಕ್ಕಿಲ್ಲದ ವಾಹನಗಳನ್ನು ಹರಾಜು ಹಾಕುವ ಮೂಲಕ ವೆಚ್ಚಕಡಿತಗೊಳಸಲು, ಅನಗತ್ಯ ಸಿಬ್ಬಂದಿಯನ್ನು ನೇಮಕಕ್ಕೆ ಕಡಿವಾಣ ಹಾಕಲಾಗಿದೆ ಎಂದರು. ಮಂಗಳೂರು ವಿವಿಯಲ್ಲಿ ಈ ಹಿಂದೆ ಎಂಟು ಕುಲಪತಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಅವರು ಮಾಡಿದ ಒಳ್ಳೆಯ ಕೆಲಸ ಮುಂದುವರಿಸುತ್ತೇನೆ. ಸ್ವಲ್ಪ ಬದಲಾವಣೆ ತರುತ್ತೇನೆ. ವಿವಿಯ ಯಾವುದೇ ಸಮಿತಿಯಲ್ಲಿ ನನ್ನ ಪ್ರಶ್ನಿಸುವ ಒಬ್ನರನ್ನಾದರೂ ಆಯ್ಕೆ ಮಾಡಿದ್ದು ಕುಲಪತಿಗಳನ್ನೂ ಪ್ರಶ್ನಿಸಿದರೆ ಮಾತ್ರ ವಿವಿಯ ಆಡಳಿತ ಸುಸೂತ್ರವಾಗಿ ಮುಂದುವರಿಯಲು ಸಾಧ್ಯ ಎಂದು ನುಡಿದರು. ವಿವಿಯ ಆಡಳಿತದಲ್ಲಿ ಹಳಿ ತಪ್ಪಿದೆ ಎಂಬ ಮಾತು ಕೇಳಿ ಬಂದಿದೆ. ವಾಸ್ತವದಲ್ಲಿ ಹಳಿ ತಪ್ಪುವುದು ಬಿಡಿ, ಹಳಿಯೇ ಇರಲಿಲ್ಲ. ಅದಕ್ಕೆ ಹಳಿ ರಚಿಸಿ ಮತ್ತೆ ಓಡಿಸುತ್ತೇವೆ. ವಿವಿಯ ಎಲ್ಲ ಸಿಬ್ಬಂದಿಯ ಮನಸ್ಸು ಮನಸ್ಸು ಕೂಡಿಸುವ ಕೆಲಸವಾದರೆ ಮುಗೀತು. ವಿವಿಯ ವಿಶ್ರಾಂತ ಕುಲಪತಿ ಪ್ರೊ. ಬಿ. ಶೇಕ್ ಆಲಿ ಅವರ ಮನೆಗೆ ಹೋಗಿ ಅವರಲ್ಲಿ ಮಾತನಾಡಿ ಮಂಗಳೂರು ವಿವಿ ಸಂಸ್ಥಾಪಕರ ದಿನಾಚರಣೆಗೆ ಕರೆದು ತರುವ ಯೋಚನೆ ಇದೆ. ವಿವಿಯಲ್ಲಿ ಯಾರೂ ಕೂಡಾ ಉದ್ಯೋಗಿಗಳಲ್ಲ, ಎಲ್ಲ ಪಾಲುದಾರರು. ಅಭಿವೃದ್ಧಿಯ ನೆಲೆಯಲ್ಲಿ ಎಲ್ಲರ ಪಾತ್ರ ಮುಖ್ಯ ಎಂದರು.

ಪುತ್ತೂರು ಕಾಲೇಜಿನ ಪ್ರಕರಣದ ಬಳಿಕ 210ಕಾಲೇಜುಗಳಲ್ಲಿ ಶಿಸ್ತಿಗಾಗಿ ತಂಡ ರಚಿಸುತ್ತೇವೆ. ಮಾಹಿತಿ ಅಭಾವ ಕೊರತೆ ಇದೆ. ಕಠಿಣ ಕಾನೂನು ಕ್ರಮಕ್ಕೂ ವ್ಯವಸ್ಥೆ ಮಾಡುತ್ತೇವೆ. ರ್ಯಾಗಿಂಗ್ ಮುಕ್ತ ವಿವಿಗಾಗಿ ತಂಡ ರಚಿಸುತ್ತೇವೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮೂಟಾ ಅಧ್ಯಕ್ಷ ಪ್ರೊ. ವಿಶ್ವನಾಥ್ ಮಾತನಾಡಿ ಹಿಂದಿನ ಕುಲಪತಿಗಳಿಗೆ ಎಸ್‍ಸಿ ಎಸ್‍ಟಿ ಉಪನ್ಯಾಸಕ ಮೇಲಾಗುತ್ತಿದ್ದ ತೊಂದರೆಗಳ ಕುರಿತು ಮಾತನಾಡಿದ್ದು ಅವರು ಪಥ್ಯವಾಗಲಿಲ್ಲ. ಮೂವತ್ತು ಲಕ್ಷ ರೂ. ಶುಲ್ಕ ಸಿಗುವ ವಿದೇಶಿ ವಿದ್ಯಾರ್ಥಿಗಳಿಗೆ 40ಕೋಟಿ ರೂ. ವೆಚ್ಚದಲ್ಲಿ ಇಂಟರ್ ನ್ಯಾಶನಲ್ ಹಾಸ್ಟೆಲ್ ಕಟ್ಟಡ ಬೇಕಾ.? ಹಾಗಿದ್ದರೆ ಇತರ ವಿದ್ಯಾರ್ಥಿಗಳಿಗೆ ಏನು ಕೊಟ್ಟಿದ್ದೇವೆ. ಹಾಗಾಗಿ ನೂತನ ಕುಲಪತಿಗಳು ಹಳೆಯ ಬಹಳಷ್ಟು ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂದರು. ಪ್ರೊ. ಮಲ್ಲಿಕಾರ್ಜುನ, ಪ್ರೊ. ಕಿಶೋರಿ ನಾಯಕ್ ಸೇರಿದಂತೆ ಪ್ರಮುಖರು ಕುಲಪತಿಗಳ ಕುರಿತಾಗಿ ಮಾತನಾಡಿದರು. ಪ್ರೊ. ದೇವೇಂದ್ರಪ್ಪ ಉಪಸ್ಥಿತರಿದ್ದರು. ಪ್ರೊ. ಜಗದೀಶ್ ಪ್ರಸಾದ್ ಸ್ವಾಗತಿಸಿದರು. ಕನ್ನಡ ವಿಭಾಗ ಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು.
ಉಪನ್ಯಾಸಕ ವಿಜಯರಾಜ್ ವಂದಿಸಿದರು.

ಮಂಗಳೂರು ವಿಶ್ವವಿದ್ಯಾಲಯ ರಾಜ್ಯದ ನಂ. ಒನ್ ವಿವಿ ಆಗಿ ಮೂಡಿಬರಬೇಕು. ಆ ನಿಟ್ಟಿನಲ್ಲಿ ವಿವಿಯ ಒಳಿತಿಗಾಗಿ ಯಾವ ರೀತಿಯ ಪ್ರೋತ್ಸಾಹಕ್ಕೂ, ಅನ್ಯಾಯವಾಗುವುದಾದರೆ ಯಾವುದೇ ರೀತಿಯ ಹೋರಾಟಕ್ಕೂ ಸಿದ್ಧ.
ಪ್ರೊ. ಕೆ.ಕೆ. ಆಚಾರ್

ವಿವಿಯನ್ನು ಹಸಿರು ಕ್ಯಾಂಪಸ್ ಮಾಡುವ ಯೋಜನೆ ಇಟ್ಡುಕೊಂಡಿದ್ದಾರೆ. ಮಂಗಳೂರು ವಿವಿ ಈ ಊರಿಗೆ ಇದುವರೆಗೆ ಬಹುದೊಡ್ಡ ಕೊಡುಗೆ ಕೊಟ್ಟಿಲ್ಲ. ವಿವಿಯಲ್ಲಿ ಡಿಫರೆನ್ಸ್ ಎಂಬ ಪದ ಹೋಗಬೇಕು. ವಿಶ್ವವಿದ್ಯಾಲಯದಲ್ಲಿ ಯಾವುದೇ ವ್ಯತ್ಯಾಸ ಇಲ್ಲ ಎಂಬ “ನೊ ಢಿಫರೆನ್ಸಸ್” ಥೀಸಿಸ್ ಮೂಡಿಬರಬೇಕಿದೆ. ಹಾಗೆಯೇ ಹಿರಿಯ ಪ್ರಾಧ್ಯಾಪಕರು ನಿವೃತ್ತಿಯಾಗುತ್ತಿದ್ದಂತೆಯೇ ಸಾಗಿದಂತೆ ವಿವಿಯ ಬೆಳವಣಿಗೆಯ ಸಾಧ್ಯವೇ ಎಂಬ ಆತಂಕಕ್ಕೆ ತಾವು ನೂತನ ಕುಲಪತಿಗಳಾಗಿ ಬಂದಿರುವ ತಮಗೆ ಅಭಿನಂದನೆಗಳು ಎಂದರು.
ಪ್ರೊ.ಪಿ.ಎಲ್. ಧರ್ಮ

ಮಂಗಳೂರು ವಿವಿಗೆ ಒಂದು ಅವಧಿಯಲ್ಲಿ ಎಸ್‍ಸಿ, ಎಸ್‍ಟಿಗೆ ಸೇರಿದ ಬಹಳಷ್ಟು ಸಂಖ್ಯೆಯ ಉಪನ್ಯಾಸಕರು ಬಂದಾಗ ಕೆಲವರು ಒಂಥರಾ ಕೀಳಾಗಿ ಕಂಡಾಗ ಎಲ್ಲರನ್ನು ಪ್ರೀತಿಯಿಂದ ಬರಮಾಡಿಕೊಂಡಿದ್ದು ಪಿ.ಎಸ್. ಯಡಪಡಿತ್ತಾಯರು. ಎಲ್ಲೂ ಕೂಡಾ ಅಂತರ ಕಾಪಾಡದೆ ಸಮಾನವಾಗಿ ಕಂಡವರು. ನನ್ನ ಮೇಲೆ ಬಹಳಷ್ಟು ಆರೋಪಗಳು ಬರುವ ಹುನ್ನಾರ ಇದ್ದಾಗಲೂ ಸತ್ಯದ ಪರವಾಗಿ ಹೋರಾಡಿದವರು. ನನಗೆ ಆಗುತ್ತಿದ್ದ ಮಾನಸಿಕ ಕಿರುಕುಳಕ್ಕೆ ಪರಿಹಾರ ಕೊಟ್ಟವರು.
ಪ್ರೊ. ಉಮೇಶ್ ಚಂದ್ರ ,
ಮುಟಾ ಅಧ್ಯಕ್ಷ ಪ್ರೊ. ದೇವೇಂದ್ರಪ್ಪ

ಮೂಡ ಪ್ರಧಾನ ಕಾರ್ಯದರ್ಶಿ ಉಪಸ್ಥಿತರಿದ್ದರು. ಪ್ರಾಧ್ಯಾಪಕ ಪ್ರೊ. ಜಗದೀಶ್ ಪ್ರಸಾದ್ ಸ್ವಾಗತಿಸಿದರು.
ಕನ್ನಡ ವಿಭಾಗದ ಡಾ. ಧನಂಜಯ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು.
ಪ್ರೊ.ವಿಶ್ವನಾಥ್

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಪಿಲಾರು ಕೆಸರಿನ ಗದ್ದೆಯಲ್ಲೊಂದು ದಿನ ಹಳ್ಳಿ ಸೊಗಡನ್ನು ನೆನಪಿಸಿದೆ: ಹರ್ಷರಾಜ್‌ ಮುದ್ಯ

August 12, 2026

ಅಂಬ್ಲಮೊಗರು ಗ್ರಾ.ಪಂ.ನಲ್ಲಿ ಅಭಿವೃದ್ಧಿ ಅಧಿಕಾರಿ ಇಲ್ಲ; ಜನರ ಪರದಾಟ

August 12, 2026

ಉಳ್ಳಾಲ ಬ್ಲಾಕ್ ಯುವ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆಯ್ಕೆಯಾದ ಆಸೀಫ್ ಸಾಮಣಿಗೆ ಅವರನ್ನು ಅಭಿನಂದಿಸಿದ ಸಚಿವ ಯು.ಟಿ. ಖಾದರ್

August 12, 2026
Leave A Reply

Advertise
ಸಂಪರ್ಕಿಸಿ

ಸ್ತನ್ಯಪಾನದ ಮಹತ್ವದ ಬಗ್ಗೆ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸುವ ಅಗತ್ಯವಿದೆ : ರೋಟರಿ ಡೌನ್‌ಟೌನ್ ಕ್ಲಬ್ ಅಧ್ಯಕ್ಷ ಉಮೇಶ್‌ ಗಟ್ಟಿ

August 8, 2026

ಹಣ ಇಲ್ಲದಿದ್ದರೆ ಯಾರೂ ಸಾಯಬಾರದು – ಸಂವಿಧಾನದ ಪರಿಚ್ಛೇದ 21ರ ಬೆಳಕಿನಲ್ಲಿ ತುರ್ತಾಗಿ ಆರೋಗ್ಯ ಸಚಿವ ಯು.ಟಿ ಖಾದರ್ ಕೂಡಲೇ ಸ್ಪಂದಿಸುವ ಅಗತ್ಯ ಇದೆ.

August 1, 2026

ತಂದೆಯ ಸಾವು; ವಿಧವೆ ತಾಯಿಯ ಜವಾಬ್ದಾರಿ ಹೊತ್ತಿದ್ದ ಯುವತಿ ಈಗ ಐಸಿಯುನಲ್ಲಿ….! ಸುಮಾರು ₹20 ಲಕ್ಷ ಚಿಕಿತ್ಸಾ ವೆಚ್ಚ; ಆರೋಗ್ಯ ಸಚಿವ ಯು.ಟಿ.ಖಾದರ್‌ ಸಹಕಾರ ಅಗತ್ಯ

July 31, 2026

ಸಾವಿರ ವರ್ಷ ಕಳೆದರೂ ಕೊರೋನಾ ವೈರಸ್ ಇರುತ್ತೆ- ಭಯ ಬೇಡ ಎಚ್ಚರವಿರಲಿ: ಆರೋಗ್ಯ ಸಚಿವ ಯು.ಟಿ. ಖಾದರ್

July 22, 2026
suddi

ಪಿಲಾರು ಕೆಸರಿನ ಗದ್ದೆಯಲ್ಲೊಂದು ದಿನ ಹಳ್ಳಿ ಸೊಗಡನ್ನು ನೆನಪಿಸಿದೆ: ಹರ್ಷರಾಜ್‌ ಮುದ್ಯ

By UllalaVaniAugust 12, 20260

ಉಳ್ಳಾಲ: ಸಾಂಪ್ರದಾಯಿಕವಾಗಿ ನಡೆಯುವ ‘ಕೆಸರಿನ ಗದ್ದೆಯಲ್ಲೊಂದು ದಿನ’ ಕಾರ್ಯಕ್ರಮವು ಹಳ್ಳಿಯ ಸೊಗಡನ್ನು ಮತ್ತೆ ನೆನಪಿಸಿದ್ದು, ಈ ಮೂಲಕ ಜನರಿಗೆ ಹಿಂದಿನ…

ಅಂಬ್ಲಮೊಗರು ಗ್ರಾ.ಪಂ.ನಲ್ಲಿ ಅಭಿವೃದ್ಧಿ ಅಧಿಕಾರಿ ಇಲ್ಲ; ಜನರ ಪರದಾಟ

August 12, 2026

ದಿವ್ಯಜ್ಯೋತಿ ಕ್ರಿಕೆಟರ್ಸ್‌ನ 20ನೇ ವರ್ಷದ ಕಲಾ ಕಾಣಿಕೆ

August 12, 2026

ಉಳ್ಳಾಲ ಬ್ಲಾಕ್ ಯುವ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆಯ್ಕೆಯಾದ ಆಸೀಫ್ ಸಾಮಣಿಗೆ ಅವರನ್ನು ಅಭಿನಂದಿಸಿದ ಸಚಿವ ಯು.ಟಿ. ಖಾದರ್

August 12, 2026
1 2 3 … 2,057 Next
Automatic YouTube Gallery

ಕಾಸರಗೋಡು: ನೀರಿನಲ್ಲಿ ಮು#*ಳುಗಿ ಸಾವ*ನ್ನ#ಪ್ಪಿದ 8ನೇ ತರಗತಿ ವಿದ್ಯಾರ್ಥಿ

ಸ್ನೇಹಿತರೊಂದಿಗೆ ಕೆರೆಗೆ ಸ್ನಾನಕ್ಕೆ ತೆರಳಿದ್ದ ಬಾಲಕ ಸಾ#ವು: ಅಬೂಬಕರ್ ಅಸನ್ ಮೃ#ತ ವಿದ್ಯಾರ್ಥಿ

ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ ...
Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಕಾಸರಗೋಡು: ನೀರಿನಲ್ಲಿ ಮು#*ಳುಗಿ ಸಾವ*ನ್ನ#ಪ್ಪಿದ 8ನೇ ತರಗತಿ ವಿದ್ಯಾರ್ಥಿ
Now Playing
ಕಾಸರಗೋಡು: ನೀರಿನಲ್ಲಿ ಮು#*ಳುಗಿ ಸಾವ*ನ್ನ#ಪ್ಪಿದ 8ನೇ ತರಗತಿ ವಿದ್ಯಾರ್ಥಿ
ಸ್ನೇಹಿತರೊಂದಿಗೆ ಕೆರೆಗೆ ಸ್ನಾನಕ್ಕೆ ತೆರಳಿದ್ದ ಬಾಲಕ ಸಾ#ವು: ಅಬೂಬಕರ್ ಅಸನ್ ಮೃ#ತ ...
ಸ್ನೇಹಿತರೊಂದಿಗೆ ಕೆರೆಗೆ ಸ್ನಾನಕ್ಕೆ ತೆರಳಿದ್ದ ಬಾಲಕ ಸಾ#ವು: ಅಬೂಬಕರ್ ಅಸನ್ ಮೃ#ತ ವಿದ್ಯಾರ್ಥಿ

ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ ...
Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಇಲ್ಲಿನ ಶಾಸಕರ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೆ
Now Playing
ಇಲ್ಲಿನ ಶಾಸಕರ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೆ
ಶಾಸಕರು ಅಂದ್ರೆ ಹೀಗಿರಬೇಕು..? ಎಂದ ಸಾರ್ವಜನಿಕರು 📍 Ullal | Dakshina Kannada ...
ಶಾಸಕರು ಅಂದ್ರೆ ಹೀಗಿರಬೇಕು..? ಎಂದ ಸಾರ್ವಜನಿಕರು

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for ...
trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version