UN NETWORKS
ಕೊಣಾಜೆ : ಮಂಗಳೂರು ವಿಶ್ವವಿದ್ಯಾಲಯದಲ್ಲಿ ಈ ಶೈಕ್ಷಣಿಕ ಸಾಲಿನಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿತರಿಸುವ ಪದ್ಧತಿಗೆ ಪೂರ್ಣ ವಿರಾಮ ಹಾಕುವ ಚಿಂತನೆ ಇದ್ದು ಪ್ರಶಸ್ತಿ ಕೊಡಲೇ ಬೇಕು ಎಂದು ಶಿಕ್ಷಕರು ಒತ್ತಾಯಿಸಿದರೆ ಕೊಡುವ ಕ್ರಮಕ್ಕೆ ನನ್ನದೇನು ಅಭ್ಯಂತರ ಇಲ್ಲ ಎಂದು ಮಂಗಳೂರು ವಿಶ್ವವಿದ್ಯಲಯದ ಕುಲಪತಿ ಪ್ರೊ. ಪಿ.ಎಸ್. ಯಡಪಡಿತ್ತಾಯ ಹೇಳಿದರು.
ಮಂಗಳೂರು ವಿಶ್ವವಿದ್ಯಾಲಯ ಶಿಕ್ಷಕರ ಎಸೋಸಿಯೇಶನ್ (ಮುಟಾ) ಹಾಗೂ ವಿಶ್ವವಿದ್ಯಾಲಯದ ಎಸ್‍ಸಿ- ಎಸ್‍ಟಿ ಉದ್ಯೋಗಿಗಳ ಸಂಘದ ಸಹಯೋಗದಲ್ಲಿವಿವಿಯ ಉಪನ್ಯಾಸ ಸಭಾಂಗಣದಲ್ಲಿ ಗುರುವಾರ ನಡೆದ ನೂತನ ಕುಲಪತಿ ಪ್ರೊ. ಪಿ.ಎಸ್.ಯಡಪಡಿತ್ತಾಯ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಎಲ್ಲ ಶಿಕ್ಷಕರು ಅತ್ಯುತ್ತಮ ಶಿಕ್ಷಕರೇ ಆಗಿರುವುದರಿಂದ ಉತ್ತಮ ಶಿಕ್ಷಕರ ಅಯ್ಕೆ ಕಠಿಣ ಸವಾಲಾಗಿದೆ. ಇದುವರೆಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದವರು ಶ್ರೇಷ್ಠ ಶಿಕ್ಷಕರು ಎಂಬದುರಲ್ಲಿ ಎರಡು ಮಾತಿಲ್ಲ. ಅದರ ಜೊತೆಗೆ ನಿವೃತ್ತಿ ಹೊಂದಿದ ಶಿಕ್ಷಕರು ಅತ್ಯುತ್ತಮ ಶಿಕ್ಷಕರು ಎಂಬುದನ್ನು ನೆನೆಪಿಸಬೇಕಾದುದು ಅತಿ ಮುಖ್ಯ. ಆ ಪ್ರಶಸ್ತಿಗೆ ನ್ಯಾಯ ಕೊಡಿಸುವುದು ಕಷ್ಟ. ಉಪನ್ಯಾಸಕರೇ ಪ್ರಶಸ್ತಿ ಬೇಕೇ ಬೇಡವೇ ಎಂದು ನಿರ್ಧರಿಸಿ. ಆ ಬಗ್ಗೆ ಚಿಂತಿಸಲೆಂದೆ ಪಶಸ್ತಿ ಕೊಡುವ ಪರಿಪಾಠ ನಿಲ್ಲಿಸುವ ವಿಷಯದ ಕುರಿತಾಗಿ ನಿಮ್ಮ ತಲೆಗೆ ಹುಳ ಬಿಟ್ಟಿದ್ದೇನೆ. ಯಾಕೆಂದರೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಆನ್‍ಲೈನ್ ಮೂಲಕ ಆಯ್ಕೆಯೋ, ಯಾರನ್ನಾದರೂ ಎತ್ತಿಕಟ್ಟಿಯೋ, ಯಾರನ್ನೋ ಖುಷಿ ಪಡಿಸಲಿರುವುದೋ ಗೊತ್ತಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ವಿದ್ಯಾರ್ಥಿಗಳ ಅಭಿಪ್ರಾಯ ಅತಿ ಮುಖ್ಯ ಎಂದರು.
ಅಧಿಕಾರ ಸ್ವೀಕರಿಸಿದ ಬಳಿಕ ಸ್ಥಳೀಯ ವ್ಯಕ್ತಿ ಕುಲಪತಿಯಾಗಿರುವುದರಿಂದ ಬಹಳಷ್ಟು ಜವಬ್ದಾರಿ ಇದೆ. ಪ್ರಸಾರಾಂಗದ ಮೂಲಕ ಬಹಳಷ್ಟು ಸ್ಥಳೀಯ ಸಾಧಕರ ಕೃತಿಗಳನ್ನು ಹೊರತರಬೇಕಾಗಿದೆ. ಬಹಳಷ್ಟು ಕಠಿಣ ಕ್ರಮಗಳ ಕಡೆಗೆ ಗಮನ ಹರಿಸಿದ್ದೇನೆ. ಪ್ಲಾಸ್ಟಿಕ್ ಮುಕ್ತ ವಿವಿ, ಹೋಟೆಲ್, ಇ ಗವರ್ನೆನ್ಸ್, ನಾಲ್ಕು ವರ್ಷದಲ್ಲಿ ವಿವಿಯನ್ನು ಪೇಪರ್ ಲೆಸ್ ಮಾಡುವ ಬಹಳಷ್ಟು ಯೋಜನೆಗಳಿದ್ದು 12 ಜನರ ಥಿಂಕ್ ಟ್ಯಾಂಕ್ ಅಡ್ವೈಸರಿ ಕಮಿಟಿ ಮಾಡಿದ್ದು ಅವರ ಎಲ್ಲರ ಸಹಕಾರ ಪಡೆಯಲಿದ್ದೇನೆ ಎಂದು ನುಡಿದರು.
ಕುಲಪತಿ ಸರ್ವಜ್ಞನಲ್ಲ, ಎಲ್ಲರ ಸಹಕಾರ ಪಡೆದು ಮುಂದುವರಿಯಬೇಕಾಗುತ್ತದೆ. ದುಂದುವೆಚ್ಚ ಕಡಿಮೆ ಮಾಡೋದು ಮಾತಿನಿಂದ ಅಲ್ಲ ಕೃತಿಯಿಂದ ಅಲ್ಲ. ವಾಚ್‍ಮೆನ್‍ನಿಂದ ಕುಲಪತಿಗೆ ಅಲ್ಲ. ಕುಲಪತಿಯಿಂದಲೆ ಆರಂಭವಾಗಬೇಕು ಎಂದು ಬೆಂಗಳೂರಿನಲ್ಲಿ ವಿಂಡ್ಸರ್ ಮ್ಯಾನರ್, ಲಲಿತ್‍ನಲ್ಲಿ ತಂಗುವ ಅವಕಾಶವಿದ್ದರೂ ಸಾಧಾರಣ ಬಾಡಿಗೆ ಇರುವ ಮೌರ್ಯದಲ್ಲಿ ನಿಲ್ಲುವ ಮೂಲಕ 15ಸಾವಿರದಿಂದ 3ಸಾವಿರ ಬಾಡಿಗೆಯ ಹೋಟೆಲ್ ಕೊಠಡಿಯಲ್ಲಿ ಉಳಿದುಕೊಳ್ಳುವ ಮೂಲಕ ದುಂದುವೆಚ್ಚಕ್ಕೆ ಕಡಿವಾಣ ನನ್ನಿಂದಲೇ ಆರಂಭಿಸಿದ್ದೇನೆ. ಉಪಯೋಗಕ್ಕಿಲ್ಲದ ವಾಹನಗಳನ್ನು ಹರಾಜು ಹಾಕುವ ಮೂಲಕ ವೆಚ್ಚಕಡಿತಗೊಳಸಲು, ಅನಗತ್ಯ ಸಿಬ್ಬಂದಿಯನ್ನು ನೇಮಕಕ್ಕೆ ಕಡಿವಾಣ ಹಾಕಲಾಗಿದೆ ಎಂದರು. ಮಂಗಳೂರು ವಿವಿಯಲ್ಲಿ ಈ ಹಿಂದೆ ಎಂಟು ಕುಲಪತಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಅವರು ಮಾಡಿದ ಒಳ್ಳೆಯ ಕೆಲಸ ಮುಂದುವರಿಸುತ್ತೇನೆ. ಸ್ವಲ್ಪ ಬದಲಾವಣೆ ತರುತ್ತೇನೆ. ವಿವಿಯ ಯಾವುದೇ ಸಮಿತಿಯಲ್ಲಿ ನನ್ನ ಪ್ರಶ್ನಿಸುವ ಒಬ್ನರನ್ನಾದರೂ ಆಯ್ಕೆ ಮಾಡಿದ್ದು ಕುಲಪತಿಗಳನ್ನೂ ಪ್ರಶ್ನಿಸಿದರೆ ಮಾತ್ರ ವಿವಿಯ ಆಡಳಿತ ಸುಸೂತ್ರವಾಗಿ ಮುಂದುವರಿಯಲು ಸಾಧ್ಯ ಎಂದು ನುಡಿದರು. ವಿವಿಯ ಆಡಳಿತದಲ್ಲಿ ಹಳಿ ತಪ್ಪಿದೆ ಎಂಬ ಮಾತು ಕೇಳಿ ಬಂದಿದೆ. ವಾಸ್ತವದಲ್ಲಿ ಹಳಿ ತಪ್ಪುವುದು ಬಿಡಿ, ಹಳಿಯೇ ಇರಲಿಲ್ಲ. ಅದಕ್ಕೆ ಹಳಿ ರಚಿಸಿ ಮತ್ತೆ ಓಡಿಸುತ್ತೇವೆ. ವಿವಿಯ ಎಲ್ಲ ಸಿಬ್ಬಂದಿಯ ಮನಸ್ಸು ಮನಸ್ಸು ಕೂಡಿಸುವ ಕೆಲಸವಾದರೆ ಮುಗೀತು. ವಿವಿಯ ವಿಶ್ರಾಂತ ಕುಲಪತಿ ಪ್ರೊ. ಬಿ. ಶೇಕ್ ಆಲಿ ಅವರ ಮನೆಗೆ ಹೋಗಿ ಅವರಲ್ಲಿ ಮಾತನಾಡಿ ಮಂಗಳೂರು ವಿವಿ ಸಂಸ್ಥಾಪಕರ ದಿನಾಚರಣೆಗೆ ಕರೆದು ತರುವ ಯೋಚನೆ ಇದೆ. ವಿವಿಯಲ್ಲಿ ಯಾರೂ ಕೂಡಾ ಉದ್ಯೋಗಿಗಳಲ್ಲ, ಎಲ್ಲ ಪಾಲುದಾರರು. ಅಭಿವೃದ್ಧಿಯ ನೆಲೆಯಲ್ಲಿ ಎಲ್ಲರ ಪಾತ್ರ ಮುಖ್ಯ ಎಂದರು.
ಪುತ್ತೂರು ಕಾಲೇಜಿನ ಪ್ರಕರಣದ ಬಳಿಕ 210ಕಾಲೇಜುಗಳಲ್ಲಿ ಶಿಸ್ತಿಗಾಗಿ ತಂಡ ರಚಿಸುತ್ತೇವೆ. ಮಾಹಿತಿ ಅಭಾವ ಕೊರತೆ ಇದೆ. ಕಠಿಣ ಕಾನೂನು ಕ್ರಮಕ್ಕೂ ವ್ಯವಸ್ಥೆ ಮಾಡುತ್ತೇವೆ. ರ್ಯಾಗಿಂಗ್ ಮುಕ್ತ ವಿವಿಗಾಗಿ ತಂಡ ರಚಿಸುತ್ತೇವೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮೂಟಾ ಅಧ್ಯಕ್ಷ ಪ್ರೊ. ವಿಶ್ವನಾಥ್ ಮಾತನಾಡಿ ಹಿಂದಿನ ಕುಲಪತಿಗಳಿಗೆ ಎಸ್‍ಸಿ ಎಸ್‍ಟಿ ಉಪನ್ಯಾಸಕ ಮೇಲಾಗುತ್ತಿದ್ದ ತೊಂದರೆಗಳ ಕುರಿತು ಮಾತನಾಡಿದ್ದು ಅವರು ಪಥ್ಯವಾಗಲಿಲ್ಲ. ಮೂವತ್ತು ಲಕ್ಷ ರೂ. ಶುಲ್ಕ ಸಿಗುವ ವಿದೇಶಿ ವಿದ್ಯಾರ್ಥಿಗಳಿಗೆ 40ಕೋಟಿ ರೂ. ವೆಚ್ಚದಲ್ಲಿ ಇಂಟರ್ ನ್ಯಾಶನಲ್ ಹಾಸ್ಟೆಲ್ ಕಟ್ಟಡ ಬೇಕಾ.? ಹಾಗಿದ್ದರೆ ಇತರ ವಿದ್ಯಾರ್ಥಿಗಳಿಗೆ ಏನು ಕೊಟ್ಟಿದ್ದೇವೆ. ಹಾಗಾಗಿ ನೂತನ ಕುಲಪತಿಗಳು ಹಳೆಯ ಬಹಳಷ್ಟು ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂದರು. ಪ್ರೊ. ಮಲ್ಲಿಕಾರ್ಜುನ, ಪ್ರೊ. ಕಿಶೋರಿ ನಾಯಕ್ ಸೇರಿದಂತೆ ಪ್ರಮುಖರು ಕುಲಪತಿಗಳ ಕುರಿತಾಗಿ ಮಾತನಾಡಿದರು. ಪ್ರೊ. ದೇವೇಂದ್ರಪ್ಪ ಉಪಸ್ಥಿತರಿದ್ದರು. ಪ್ರೊ. ಜಗದೀಶ್ ಪ್ರಸಾದ್ ಸ್ವಾಗತಿಸಿದರು. ಕನ್ನಡ ವಿಭಾಗ ಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು.
ಉಪನ್ಯಾಸಕ ವಿಜಯರಾಜ್ ವಂದಿಸಿದರು.
ಮಂಗಳೂರು ವಿಶ್ವವಿದ್ಯಾಲಯ ರಾಜ್ಯದ ನಂ. ಒನ್ ವಿವಿ ಆಗಿ ಮೂಡಿಬರಬೇಕು. ಆ ನಿಟ್ಟಿನಲ್ಲಿ ವಿವಿಯ ಒಳಿತಿಗಾಗಿ ಯಾವ ರೀತಿಯ ಪ್ರೋತ್ಸಾಹಕ್ಕೂ, ಅನ್ಯಾಯವಾಗುವುದಾದರೆ ಯಾವುದೇ ರೀತಿಯ ಹೋರಾಟಕ್ಕೂ ಸಿದ್ಧ.
ಪ್ರೊ. ಕೆ.ಕೆ. ಆಚಾರ್
ವಿವಿಯನ್ನು ಹಸಿರು ಕ್ಯಾಂಪಸ್ ಮಾಡುವ ಯೋಜನೆ ಇಟ್ಡುಕೊಂಡಿದ್ದಾರೆ. ಮಂಗಳೂರು ವಿವಿ ಈ ಊರಿಗೆ ಇದುವರೆಗೆ ಬಹುದೊಡ್ಡ ಕೊಡುಗೆ ಕೊಟ್ಟಿಲ್ಲ. ವಿವಿಯಲ್ಲಿ ಡಿಫರೆನ್ಸ್ ಎಂಬ ಪದ ಹೋಗಬೇಕು. ವಿಶ್ವವಿದ್ಯಾಲಯದಲ್ಲಿ ಯಾವುದೇ ವ್ಯತ್ಯಾಸ ಇಲ್ಲ ಎಂಬ “ನೊ ಢಿಫರೆನ್ಸಸ್” ಥೀಸಿಸ್ ಮೂಡಿಬರಬೇಕಿದೆ. ಹಾಗೆಯೇ ಹಿರಿಯ ಪ್ರಾಧ್ಯಾಪಕರು ನಿವೃತ್ತಿಯಾಗುತ್ತಿದ್ದಂತೆಯೇ ಸಾಗಿದಂತೆ ವಿವಿಯ ಬೆಳವಣಿಗೆಯ ಸಾಧ್ಯವೇ ಎಂಬ ಆತಂಕಕ್ಕೆ ತಾವು ನೂತನ ಕುಲಪತಿಗಳಾಗಿ ಬಂದಿರುವ ತಮಗೆ ಅಭಿನಂದನೆಗಳು ಎಂದರು.
ಪ್ರೊ.ಪಿ.ಎಲ್. ಧರ್ಮ
ಮಂಗಳೂರು ವಿವಿಗೆ ಒಂದು ಅವಧಿಯಲ್ಲಿ ಎಸ್‍ಸಿ, ಎಸ್‍ಟಿಗೆ ಸೇರಿದ ಬಹಳಷ್ಟು ಸಂಖ್ಯೆಯ ಉಪನ್ಯಾಸಕರು ಬಂದಾಗ ಕೆಲವರು ಒಂಥರಾ ಕೀಳಾಗಿ ಕಂಡಾಗ ಎಲ್ಲರನ್ನು ಪ್ರೀತಿಯಿಂದ ಬರಮಾಡಿಕೊಂಡಿದ್ದು ಪಿ.ಎಸ್. ಯಡಪಡಿತ್ತಾಯರು. ಎಲ್ಲೂ ಕೂಡಾ ಅಂತರ ಕಾಪಾಡದೆ ಸಮಾನವಾಗಿ ಕಂಡವರು. ನನ್ನ ಮೇಲೆ ಬಹಳಷ್ಟು ಆರೋಪಗಳು ಬರುವ ಹುನ್ನಾರ ಇದ್ದಾಗಲೂ ಸತ್ಯದ ಪರವಾಗಿ ಹೋರಾಡಿದವರು. ನನಗೆ ಆಗುತ್ತಿದ್ದ ಮಾನಸಿಕ ಕಿರುಕುಳಕ್ಕೆ ಪರಿಹಾರ ಕೊಟ್ಟವರು.
ಪ್ರೊ. ಉಮೇಶ್ ಚಂದ್ರ ,
ಮುಟಾ ಅಧ್ಯಕ್ಷ ಪ್ರೊ. ದೇವೇಂದ್ರಪ್ಪ
ಮೂಡ ಪ್ರಧಾನ ಕಾರ್ಯದರ್ಶಿ ಉಪಸ್ಥಿತರಿದ್ದರು. ಪ್ರಾಧ್ಯಾಪಕ ಪ್ರೊ. ಜಗದೀಶ್ ಪ್ರಸಾದ್ ಸ್ವಾಗತಿಸಿದರು.
ಕನ್ನಡ ವಿಭಾಗದ ಡಾ. ಧನಂಜಯ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು.
ಪ್ರೊ.ವಿಶ್ವನಾಥ್