UN NETWORKS
ಉಳ್ಳಾಲ: ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗ ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಸಾರ್ವಜನಿಕರು ಹಾಗೂ ಉದ್ದಿಮೆ/ ವ್ಯಾಪಾರಸ್ಥರು ಅವರವರ ಮನೆ, ಪರಿಸರ, ಕಟ್ಟಡಗಳಿರುವ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳಬೇಕೆಂದು ಉಳ್ಳಾಲ ನಗರಸಭೆ ಪೌರಾಯುಕ್ತೆ ತಿಳಿಸಿದ್ದಾರೆ.

ಉಪಯೋಗವಿಲ್ಲದ ಡಬ್ಬ, ಟಿನ್, ಬಕೆಟ್, ಬಾಟಲುಗಳು, ಟಯರುಗಳಲ್ಲಿ ಎಳನೀರಿನ ಚಿಪ್ಪುಗಳಲ್ಲಿ ಮಳೆ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗದಂತೆ ಎಚ್ಚರ ವಹಿಸಬೇಕಾಗಿದೆ. ನೀರು ತುಂಬಿದ ಟ್ಯಾಂಕ್ ಗಳು, ಓವರ್ ಹೆಡ್ ಟ್ಯಾಂಕುಗಳನ್ನು ಮುಚ್ಚಿಡುವುದು ಮತ್ತು ವಾರಕ್ಕೊಮ್ಮೆ ಖಾಲಿ ಮಾಡಿ ಸ್ವಚ್ಛಗೊಳಿಸಬೇಕಿದೆ. ಹೊಟೇಲ್ ಉದ್ಯಮಿಗಳು ಗ್ರಾಹಕರಿಗೆ ಕುದಿಸಿ ಆರಿಸಿದ ಶುದ್ಧ ಕುಡಿಯುವ ನೀರು ಪೂರೈಸಬೇಕು. ಗ್ಲಾಸಿನ ತಟ್ಟೆಗಳನ್ನು ಬಿಸಿ ನೀರಿನಲ್ಲಿ ತೊಳೆಯಬೇಕು. ಹೊಟೇಲ್, ಬೇಕರಿ, ಅಂಗಡಿಗಳಲ್ಲಿ ತಾಜಾ ಹಾಗೂ ಶುಚಿಯಾದ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವುದು , ನೊಣ ಸಂಪರ್ಕದಿಂದ ಸಾಂಕ್ರಾಮಿಕ ರೋಗಗಳು ಹರಡದಂತೆ ಕಡ್ಡಾಯವಾಗಿ ಆಹಾರಪದಾರ್ಥಗಳನ್ನು ಮುಚ್ಚಿಟ್ಟು ವ್ಯಾಪಾರ ನಡೆಸಬೇಕು. ಗ್ರಾಹಕರಿಗೆ ಪ್ಲಾಸ್ಟಿಕ್ ಕೈಚೀಲಗಳು, ಪ್ಲಾಸ್ಟಿಕ್ ಲೋಟಗಳನ್ನು ನೀಡುವುದನ್ನು ನಿಲ್ಲಿಸಲು ಸೂಚಿಸಲಾಗಿದೆ.
ರಾತ್ರಿ ನಿದ್ರಿಸುವಾಗ ಸೊಳ್ಳೆ ಪರದೆ ಕಡ್ಡಾಯವಾಗಿ ಬಳಸುವಂತೆ ಅಥವಾ ಸೊಳ್ಳೆ ನಶಕ ವಿಧಾನಗಳನ್ನು ಉಪಯೋಗಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.


