UN NETWORKS
ಉಳ್ಳಾಲ : ತಾಜುಲ್ ಉಲಮಾ ಮದ್ರಸ ಹಳೆಕೋಟೆ ಇದರ ವಾರ್ಷಿಕ ಮಹಾಸಭೆ ಯೂಸುಫ್ ಹಳೆಕೋಟೆ ರವರ ಅಧ್ಯಕ್ಷತೆಯಲ್ಲಿ ಮದ್ರಸ ಹಾಲ್ ನಲ್ಲಿ ನಡೆಯಿತು.

ಎಸ್ ವೈ ಎಸ್ ಉಳ್ಳಾಲ ಸೆಂಟರ್ ಇದರ ಮಾಧ್ಯಮ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ ದುಆ ನೆರವೇರಿಸಿದರು. ಮದ್ರಸ ಪ್ರಧಾನ ಕಾರ್ಯದರ್ಶಿ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು. 2019 ನೇ ಸಾಲಿನ ಮದ್ರಸದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಗೌರವಾಧ್ಯಕ್ಷರಾಗಿ ಅಬ್ದುಲ್ ರಹ್ಮಾನ್, ಅಧ್ಯಕ್ಷರಾಗಿ ಯೂಸುಫ್ ಹಳೆಕೋಟೆ, ಉಪಾಧ್ಯಕ್ಷರಾಗಿ ಇಸ್ಮಾಯಿಲ್ ತೊಕ್ಕೋಟು, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕರ್ ಹಳೆಕೋಟೆ, ಜೊತೆ ಕಾರ್ಯದರ್ಶಿಯಾಗಿ ಸತ್ತಾರ್ ಹಳೆಕೋಟೆ, ಕೋಶಾಧಿಕಾರಿಯಾಗಿ ಅಶ್ರಫ್ ಹಳೆಕೋಟೆ, ಸಂಚಾಲಕರಾಗಿ ಹಂಝ ಹಳೆಕೋಟೆ ರವರನ್ನು ಆಯ್ಕೆ ಮಾಡಲಾಯಿತು.
ಸ್ವಾಲಿಹ್ ಹಳೆಕೋಟೆ, ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ, ಬಶೀರ್ ಹಳೆಕೋಟೆ, ರಫೀಕ್ ಹಳೆಕೋಟೆ, ಹಮೀದಾಕ ಹಳೆಕೋಟೆ, ಅಬ್ದುಲ್ ರಹೀಂ ಮಂಚಿಲ, ಇರ್ಫಾನ್ ಹಳೆಕೋಟೆ ಇವರುಗಳನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆರಿಸಲಾಯಿತು.


