UN NETWORKS
ಅಸೈಗೋಳಿ : ತುಳುನಾಡು ಎಂದರೆ ದೈವ ದೇವರ ನೆಲೆವೀಡು ಹಾಗೂ ಪುಣ್ಯದ ನಾಡು. ಇತ್ತೀಚೆಗೆ ತುಳುನಾಡಿನಲ್ಲಿ ದೈವ ದೇವಸ್ಥಾನ ದ ಜೀರ್ಣೋದ್ಧಾರದ ಕಾರ್ಯ ಹೆಚ್ಚೆಚ್ಚು ನಡೆಯುತ್ತಿದ್ದು ಇಂತಹ ಕೆಲಸಗಳಲ್ಲಿ ಪ್ರತಿಯೊಬ್ಬರು ತೊಡಗಿಸಿಕೊಳ್ಳಬೇಕು ಎಂದು ಉದ್ಯಮಿ ವಿವೇಕ್ ಶೆಟ್ಟಿ ಬೊಳ್ಯಗುತ್ತು ಅವರು ಹೇಳಿದರು.

ಅವರು ಅಸೈಗೋಳಿಯ ಶ್ರೀ ಅಯ್ಯಪ್ಪ ಮಂದಿರದ ಬ್ರಹ್ಮಕಲಶೋತ್ಸವ ದ ಅಂಗವಾಗಿ ಶನಿವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶೈಕ್ಷಣಿಕ ಸಂಸ್ಥೆಯಾಗಲಿ, ದೇವಸ್ಥಾನ ಕಟ್ಟುವ ಕಾರ್ಯವಾಗಲೀ ಬಹಳ ಕಷ್ಟದ ಕಾರ್ಯ ಹಾಗೆಯೇ ಪುಣ್ಯದ ಕೆಲಸವೂ ಹೌದು. ನಾವು ಮನುಷ್ಯನಾಗಿ ಹುಟ್ಟಿದ ನಂತರ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು.
ಅಲ್ಲದೆ ಇತ್ತೀಚೆಗೆ ಮಹಿಳೆಯರು ಕೂಡ ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಕುಟುಂಬದ ಮಹಿಳೆ ಶೈಕ್ಷಣಿಕವಾಗಿ, ಧಾರ್ಮಿಕ ವಾಗಿ ಮುನ್ನಡೆದರೆ ಅದರ ಫಲ ಕುಟುಂಬದವರೆಲ್ಲರಿಗೂ ದೊರೆತಂತೆ ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಾಜಿ ಸಚಿವ ರಮಾನಾಥ ರೈ ಅವರು, ಪ್ರತಿಯೊಬ್ಬರೂ ಹೃದಯ ಶ್ರೀಮಂತಿಕೆಯುಳ್ಳವರಾಗಿರಬೇಕು. ದೇವಾಸ್ಥಾನಗಳು ನಮ್ಮಲ್ಲಿ ಧಾರ್ಮಿಕ ಮನೋಭಾವವನ್ನು ಬೆಳೆಸುವುದರೊಂದಿಗೆ ನಮ್ಮಲ್ಲಿರುವ ಕೆಟ್ಟತನವನ್ಬು ದೂರಗೊಳಿಸಿ ಒಳ್ಳೆಯತನವನ್ನು ಬೆಳೆಸುವಂತಾಗಬೇಕು ಎಂದು ಹೇಳಿದರು.
ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ರವಿಶಂಕರ್ ಶೆಟ್ಟಿ ಅವರು ಮಾತನಾಡಿ ಭಕ್ತಿಯನ್ನು ನಾವು ಹಣಕೊಟ್ಟು ಪಡೆದುಕೊಳ್ಳಲು ಸಾದ್ಯವಿಲ್ಲ. ದೇವಾಲಯದ ಜೀರ್ಣೋದ್ಧಾರ ಕೆಲಸಗಳಲ್ಲಿ ನಾವು ತೊಡಗಿಸಿಕೊಂಡರೆ ಧಾರ್ಮಿಕ ವಾಗಿ ಹಾಗೂ ಸಾಮಾಜಿಕವಾಗಿ ಮುನ್ನಡೆಯಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಧಾರ್ಮಿಕ ಮುಖಂಡರಾದ ಬಾಬು ಶ್ರೀ ಶಾಸ್ತ ಕಿನ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಚಿಲಿಂಬಿ ಶ್ರೀ ಶಿರ್ಡಿ ಸಾಯಿಬಾಬ ಮಂದಿರದ ಆಡಳಿತ ಮೊಕ್ತೇಸರ ವಿಶ್ವಾಸ್ ದಾಸ್, ಅಸೈಗೋಳಿ ಶ್ರೀ ಗುಳಿಗ ಕೊರಗಜ್ಜ ಸೇವಾ ಸಮಿತಿಯ ಅಧ್ಯಕ್ಷ ಬಾಸ್ಕರ ಗುಡ್ಡೆಮಾರ್, ಮಂಗಳೂರು ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಸದಾನಂದ ಪೂಂಜ, ತಾ.ಪಂ.ಸದಸ್ಯೆ ಪದ್ಮಾವತಿ ಪೂಜಾರಿ, ಬೆಳ್ಮ ಬರಿಕೆ ಶ್ರೀ ಅರಸು ಪೈಂದೋಷ್ಣಯ ಪೊಸಭೂತ ಬಂಟ ದೇವಸ್ಥಾನದ ಆಡಳಿತ ಮೊಕ್ತೇಸರ ಅಶೋಕ್ ರೈ ಭಂಡಾರಮನೆ, ಸಂಕಪ್ಪ ಕರ್ಕೇರ ಮೊದಲಾದವರು ಮುಖ್ಯ ಅತಿಥಿಗಳಾಗಿದ್ದರು.
ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ರಘುರಾಮ ಕಾಜವ ಪಟ್ಟೋರಿ,
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸೀತಾರಾಮ ಶೆಟ್ಟಿ ದಡಸ್, ಗೌರವಾಧ್ಯಕ್ಷ ಸುರೇಶ್ ಚೌಟ ಕಕ್ಕೆಮಜಲು, ಪ್ರಶಾಂತ್ ಕಾಜವ, ಆರ್ಥಿಕ ಸಮಿತಿ ಸಂಚಾಲಕ ಮಂಜುನಾಥ ಆಳ್ವ, ಕಾರ್ಯಾಧ್ಯಕ್ಷ ವಿಶ್ವನಾಥ ನಾಯ್ಕ್, ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಪಟ್ಟೋರಿ, ಸಂಚಾಲಕ ಆನಂದ ಕೆ.ಅಸೈಗೋಳಿ, ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕ ತ್ಯಾಗಂ ಹರೇಕಳ ಉಪಸ್ಥಿತರಿದ್ದರು.

ಬ್ರಹ್ಮಕಲಶೋತ್ಸವ ಸಮಿತಿಯ ಸಂಚಾಲಕ ಶ್ರೀನಿವಾಸ ಶೆಟ್ಟಿ ಪುಲ್ಲು ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ತ್ಯಾಗಂ ಹರೇಕಳ ಸ್ವಾಗತಿಸಿದರು. , ರಾಮಕೃಷ್ಣ ಪಟ್ಟೋರಿ ವಂದಿಸಿದರು. ಬಾಸ್ಕರ ಮಂಜನಾಡಿ ಕಾರ್ಯಕ್ರಮ ನಿರೂಪಿಸಿದರು.


