UN NETWORKS
ಉಳ್ಳಾಲ: ಸಮುದ್ರತೀರಕ್ಕೆ ಗೆಳೆಯನ ಜತೆಗೆ ವಿಹಾರಕ್ಕೆಂದು ಬಂದು ಸಮುದ್ರಪಾಲಾಗಿದ್ದ ಬೆಂಗಳೂರು ಶಿವಾಜಿನಗರ ಮೂಲದ ರಿಝ್ವಾನ್ (40) ಮೃತದೇಹ ಸೋಮವಾರ ರಾತ್ರಿ ಉಳ್ಳಾಲ ಬೀಚ್ ತೀರದಲ್ಲಿ ಪತ್ತೆಯಾಗಿದೆ.

ಗೆಳೆಯನ ಜತೆಗೆ ಸಮುದ್ರದ ನೀರಿನಲ್ಲಿ ಆಟವಾಡುತ್ತಿದ್ದಾಗ ಅಲೆ ಅಪ್ಪಳಿಸಿ ರಿಝ್ವಾನ್ ಸಮುದ್ರಪಾಲಾಗಿದ್ದರು. ಮೃತದೇಹಕ್ಕಾಗಿ ಸ್ಥಳೀಯ ಶಿವಾಜಿ ಈಜುರಕ್ಷಕ ಸಂಘದ ಸದಸ್ಯರು, ಸ್ಥಳೀಯರು ಹಾಗೂ ಪೊಲೀಸರು ಶೋಧ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಸೋಮವಾರ ಸಂಜೆ ಮೃತದೇಹ ದಡ ಸೇರಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


