ವರದಿ: ಆರೀಫ್ ಕಲ್ಕಟ್ಟ
ಉಳ್ಳಾಲ: ಉಳ್ಳಾಲ ಅಳೇಕಲದ ಸುನ್ನೀ ವಿದ್ಯಾರ್ಥಿ ಸಂಘ (ಎಸ್ವಿಎಸ್) ಇದರ ವತಿಯಿಂದ ಉಳ್ಳಾಲ ಹಾಗೂ ಮಂಜನಾಡಿ ಪರಿಸರದ ಅರ್ಹ ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ಅಳೇಕಲ ಸುನ್ನೀ ಸೆಂಟರ್ನಲ್ಲಿ ನಡೆಯಿತು.
ಎಸ್ಸೆಸ್ಸೆಫ್ ಮಂಜನಾಡಿ ಸೆಕ್ಟರ್ ಅಧ್ಯಕ್ಷ ಇಬ್ರಾಹೀಂ ಅಹ್ಸನಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಿದರು. ಎಸ್.ವಿ.ಎಸ್ ಅಧ್ಯಕ್ಷ ಸಿ.ಎಮ್ ಅಶ್ರಫ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಎಸ್.ವಿ.ಎಸ್ ಅಳೇಕಲ ಉಪಾಧ್ಯಕ್ಷ ಫಾಝಿಲ್ ಅಳೇಕಲ, ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ಪ್ರ.ಕಾರ್ಯರ್ದರ್ಶಿ ಜಾಫರ್ ಯು.ಎಸ್ , ಎಸ್ಸೆಸ್ಸೆಫ್ ಅಳೇಕಲ ಶಾಖೆಯ ಅಧ್ಯಕ್ಷ ಸಂಶುದ್ದೀನ್ ಜಝೀರ್, ಎಸ್ಸೆಸ್ಸೆಫ್ ಅಳೇಕಲ ಶಾಖೆಯ ಕೋಶಾಧಿಕಾರಿ ಜಂಶೀರ್ ಅಳೇಕಲ, ಅನ್ಸಾರ್ ಅಳೇಕಲ, ಸಿ.ಎಮ್ ಫಝಲ್, ಅಬ್ದುಲ್ ಸತ್ತಾರ್ ಮೇಲಂಗಡಿ ಮುಂತಾದವರು ಉಪಸ್ಥಿತರಿದ್ದರು.


