UN NETWORKS
ಉಳ್ಳಾಲ : ಇಲ್ಲಿನ ಮೊಗವೀರಪಟ್ಣ ಬೀಚ್ ಬಳಿ ಸಮುದ್ರ ಪಾಲಾಗುತ್ತಿದ್ದ ಮೈಸೂರು ಮೂಲದ ಇಬ್ಬರು ಮಹಿಳೆಯರನ್ನು ಜೀವರಕ್ಷಏಕ ಈಜುಗಾರರ ಸಂಘದ ಸದಸ್ಯರು ರಕ್ಷಿಸಿದ್ದು, ಅಸ್ವಸ್ಥಗೊಂಡ ಮಹಿಳೆಯರನ್ನು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಲಾಗಿದೆ.



ಉಳ್ಳಾಲ ದರ್ಗಾ ವೀಕ್ಷಣೆಗೆಂದು ಆಗಮಿಸಿದ್ದ ಮೈಸೂರು ಮೂಲದ ಕುಟುಂಬದ ಸದಸ್ಯರು ಸಂಜೆ ಉಳ್ಳಾಲ ಮೊಗವೀರಪಟ್ಣ ಬೀಚ್ ಬಳಿ ಸಮುದ್ರದ ಅಲೆಗಳೊಂದಿಗೆ ಆಟವಾಡುತ್ತಿದ್ದರು. ಈ ಸಂದರ್ಭದಲ್ಲಿ ಸ್ಥಳೀಯ ಜೀವರಕ್ಷಕ ಈಜುಗಾರರ ಸಂಘದ ಸದಸ್ಯರು ಸಮುದ್ರದ ಅಲೆಗಳೊಂದಿಗೆ ಅಪಾಯಕಾರಿಯಾಗಿ ಆಟವಾಡಬೇಡಿ ಎಂದು ಎಚ್ಚರಿಕೆ ನೀಡಿದ್ದರೂ ನಿರ್ಲಕ್ಷಿಸಿ ಸಮುದ್ರದ ಅಲೆಗಳೊಂದಿಗೆ ಆಟವಾಡುತ್ತಿದ್ದಾಗ ದೊಡ್ಡದೊಮದು ಅಲೆಗೆ ಸಿಲುಕಿ ಇಬ್ಬರು ಮಹಿಳೆಯರು ಸಮುದ್ರಪಾಲಾದರು. ಪ್ರವಾಸಿಗರ ಬೊಬ್ಬೆ ಕೇಳಿ ಆಗಮಿಸಿದ ಕರಾವಳಿ ನಿಯಂತ್ರಣ ದಳದ ಪ್ರಸಾದ್ ಸುವರ್ಣ, ಜೀವರಕ್ಷಕ ಸಂಘದ ಶಶಿಧರ್ ಕರ್ಕೇರ, ನವೀನ್ ಅಮೀನ್, ಜಿತೇಂದ್ರ ಬಂಗೇರ ಮೋಹನ್ ಪುತ್ರನ್ , ಸುರೇಶ್ ತಂಡ ಇಬ್ಬರನ್ನು ರಕ್ಷಿಸಿದ್ದು ಅಸ್ವಸ್ಥಗೊಂಡ ಮಹಿಳೆಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ.


