UN NETWORKS
ಉಳ್ಳಾಲ: ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವ ಸಲುವಾಗಿ ಹಿಂದುಳಿದ ವರ್ಗ, ದಲಿತರು ಮುಂದೆ ನಿಂತು ಕೆಲಸ ಮಾಡುವ ಮೂಲಕ ಸಮರ್ಪಕ ತೀರ್ಮಾನವನ್ನು ಕೈಗೊಂಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು.
ಅವರು ಕೆ.ಸಿ ರೋಡಿನಲ್ಲಿ ಸೋಮವಾರ ಲೋಕಸಭಾ ಚುನಾವಣೆ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.










ಕಾನೂನು ಮೂಲಕ ಸಮಾಜದ ಪಿಡುಗುಗಳನ್ನು ನಿರ್ಮೂಲನೆ ಮಾಡಲು ಅಸಾಧ್ಯ. ಧಾರ್ಮಿಕ ಮುಖಂಡರ, ಉಲೇಮಾಗಳ ಚಿಂತನೆಗಳಿಂದ ಸಮಾಜದ ಬದಲಾವಣೆ ಸಾಧ್ಯ. ಅವರ ಮಾರ್ಗದರ್ಶನ ಪಡೆದುಕೊಂಡು ಎಲ್ಲಾ ಧರ್ಮವನ್ನು ಪ್ರೀತಿಸಿಕೊಂಡು ಹೋಗುವಂತಹ ವಾತಾವರಣ ನಿರ್ಮಾಣವಾಗಬೇಕಿದೆ. ಉಳ್ಳಾಲ ಕ್ಷೇತ್ರದಲ್ಲಿ ತನಗೆ ಸಿಕ್ಕ ಮತಗಳಿಗಿಂತ ದುಪ್ಪಟ್ಟು ಲೀಡ್ ಮಿಥುನ್ ರೈ ಗೆ ಸಿಗಬೇಕಿದೆ ಎಂದ ಅವರು ಚುನಾವಣೆ ಪೂರ್ವ ನೀರಿನ ಸಮಸ್ಯೆ ಈಡೇರಿಸುವ ಭರವಸೆ ನೀಡಿದ್ದೆ. ಅದರಂತೆ ನಗರಾಭಿವೃದ್ಧಿ ಸಚಿವ ಸ್ಥಾನ ಸಿಗುತ್ತಿದ್ದಂತೆ 250 ಕೋಟಿ ರೂ. ಅನುದಾನಗಳಲ್ಲಿ ಡ್ಯಾಂ ಕಟ್ಟುವ ಮುಖೇನ ಇಡೀ ಕ್ಷೇತ್ರಕ್ಕೆ ಕುಡಿಯುವ ನೀರಿನ ಯೋಜನೆ ಜಾರಿಗೆ ಬರಲಿದೆ. ಎರಡು ತಿಂಗಳಲ್ಲಿ ಕಾಮಗಾರಿ ಆರಂಭವಾಗಲಿದೆ. ಬಡವರಿಗೆ ಸಹಾಯ ಮಾಡುವಂತಹ ಕೆಲಸದೊಂದಿಗೆ ರಾಜಕೀಯ ಮಾಡಿ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಇನ್ನೊಬ್ಬರನ್ನು ಅವಹೇಳನಗೈದು ರಾಜಕೀಯ ಮಾಡದಿರಿ ಎಂದರು.
ಪ್ಲಾಸ್ಟಿಕ್ ವಿಮಾನ ತಯಾರಿಸದ ಅಂಬಾನಿ ಕಂಪೆನಿಗೆ ದೇಶದ ಭದ್ರತೆಯ ರಫೈಲ್ ವಿಮಾನ ನಿರ್ಮಾಣಕ್ಕೆ ಒಪ್ಪಂದ ಮಾಡಿಕೊಂಡರು. ಇದರ ತನಿಖೆಯ ಕುರಿತು ಜಾಯ್ಟ್ ಪಾರ್ಲಿಮೆಂಟ್ ಕಮಿಟಿಗೆ ನೀಡಲು ಬಿಜೆಪಿ ಒಪ್ಪಲಿಲ್ಲ. ನ್ಯಾಯಾಲಯ, ಉಚ್ಛನ್ಯಾಯಾಲಯ ಸಾಕ್ಷಿ ಆಧಾರದಲ್ಲಿ ತೀರ್ಪು ಪ್ರಕಟಿಸುವುದರ ಹಿನ್ನೆಲೆಯಲ್ಲಿ ಸಾಕ್ಷ್ಯವನ್ನೇ ನಾಪತ್ತೆ ಮಾಡಿದರು. ಇದು ಕೇಂದ್ರ ಸರಕಾರದ ಬಹುದೊಡ್ಡ ಸಾಧನೆ. ಸಮುದಾಯದ ರಕ್ಷಣೆಗೆ ಪಕ್ಷದ ಅಗತ್ಯವಿಲ್ಲ. ಸಮುದಾಯದ ವಿಚಾರ ಮುಂದಿಟ್ಟು ಜನರ ಮುಂದೆ ಹೋದರೆ ಬೆಂಬಲ ಅಸಾಧ್ಯ. ಕಾಸರಗೋಡಿನಲ್ಲಿ ಸಿದ್ಧೀಖ್ ಅನ್ನುವ ಯುವಕನಿಗೆ ಕಾಂಗ್ರೆಸ್ ಟಿಕೇಟ್ ನೀಡಿ ಅವರನ್ನು ಸೋಲಿಸಲು ಸಮುದಾಯ ಪರವಾಗಿ ಇರುವಂತಹ ಪಕ್ಷವೇ ಕಾರಣವಾಗಿತ್ತು. ಇದರಿಂದಾಗಿ ಈ ಬಾರಿ ಅಲ್ಪಸಂಖ್ಯಾತ ಅಭ್ಯರ್ಥಿಗೆ ಸೀಟು ಕೊಡುವುದು ಅಸಾಧ್ಯವಾಯಿತು. ಇಂತಹ ನಡೆಗಳಿಂದಾಗಿ ಯಾರು ಅಲ್ಪಸಂಖ್ಯಾತರ ಹಿಮ್ಮೆಟ್ಟಿಸುತ್ತಿದ್ದಾರೆ ಅನ್ನುವುದು ಗೊತ್ತಾಗುತ್ತದೆ. ಪ್ರವಾದಿ ಹೆಸರಿನಲ್ಲಿ ರಾಜಕೀಯ ಮಾಡಲು ಹೋದಲ್ಲಿ ಸರ್ವನಾಶ ಆಗುವುದು ಖಚಿತ . ಉಲೇಮಾಗಳು ಗೌರವಪೂರ್ಣರಾದವರು.ಅವರ ಮಾತಿಗೆ ಅನುಗುಣವಾಗಿ ಬಾಳಿ ಎಂದರು.

ಈ ಸಂದರ್ಭ ಮುಖಮಡರುಗಳಾದ ಇಬ್ರಾಹಿಂ ಕೋಡಿಜಾಲ್, ಯು.ಕಣಚೂರು ಮೋನು, ಕಾಸರಗೋಡು ಡಿಸಿಸಿ ಕಾರ್ಯದರ್ಶಿ ಬಾಲಕೃಷ್ಣ ಪೆರಿಯ, ಉಳ್ಳಾಲ ನಗರಸಭೆ ಮಾಜಿ ಸದಸ್ಯ ದಿನೇಶ್ ರೈ, ಟಿ.ಯಸ್ ಇಸ್ಮಾಯಿಲ್, ತಾ.ಪಂ ಅಧ್ಯಕ್ಷ ಮೋನು ಮಲಾರ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ, ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಕೋಡಿಜಾಲ್, ಎನ್. ಎಸ್ ಕರೀಂ, ಅಬ್ದುಲ್ ಖಾದರ್ ತಲಪಾಡಿ, ಸಿದ್ದೀಖ್ ಕೊಳಂಗೆರೆ ಮುಂತಾದವರು ಉಪಸ್ಥಿತರಿದ್ದರು.


