UN NETWORKS
ಕಣಚೂರು: ದಾದಿಯರನ್ನು ವೈದ್ಯರೇ ನಿಯಂತ್ರಿಸುತ್ತಾರೆ ಅನ್ನುವ ತಪ್ಪು ಮಾಹಿತಿಯಿದೆ. ಆದರೇ ಜ್ಞಾನ ಸಂಪಾದನೆಯಿಂದ , ತಮ್ಮ ಕರ್ತವ್ಯದ ಅರಿವು ಇದ್ದಲ್ಲಿ ಯಾರನ್ನೂ ಅನುಸರಿಸುವ ಅಗತ್ಯ ದಾದಿಯರಿಗೆ ಇರುವುದಿಲ್ಲ ಎಂದು ನಿಟ್ಟೆ ಉಷಾ ನರ್ಸಿಂಗ್ ವಿಜ್ಞಾನ ಸಂಸ್ಥೆಗಳ ಪ್ರಾಂಶುಪಾಲೆ ಡಾ. ಫಾತಿಮಾ ಡಿಸಿಲ್ವಾ ಎಂದು ಅಭಿಪ್ರಾಯಪಟ್ಟರು.
ಅವರು ಕಣಚೂರು ಕಾಲೇಜು ನರ್ಸಿಂಗ್ ವಿಜ್ಞಾನ ಸಂಸ್ಥೆ ಆಶ್ರಯದಲ್ಲಿ ನಾಟೆಕಲ್ ಕಣಚೂರು ಸಂಸ್ಥೆಯಲ್ಲಿ ಜರಗಿದ ‘ ರಿಸರ್ಚ್ ಮೆಥಡಾಲಜಿ: ಕರೆಂಟ್ ಸಿನಾರಿಯೊ ಆಂಡ್ ಅಪರ್ಚುನಿಟೀಸ್ ‘ ಕುರಿತ ರಾಜ್ಯಮಟ್ಟದ ಕಾರ್ಯಗಾರವನ್ನು ಉದ್ಘಾಟಿಸಿದರು.ಇತಿಹಾಸದಲ್ಲಿ ಯುದ್ಧ ಸಂದರ್ಭ ಸೈನಿಕರ ಶುಶ್ರೂಷೆಗೆ ಶ್ರಮಿಸಿದ ದೀದಿಯರ ಕಾರ್ಯವೈಖರಿ ಯಿಂದಾಗಿ ಹುದ್ದೆಯೆ ಪ್ರತಿಷ್ಠೆ ಹೆಚ್ಚಿತ್ತು. ಆ ಬಳಿಕ ದೀದಿಯರ ತರಬೇತು ಕ್ಷೇತ್ರದಲ್ಲಿ ಪರಿಣಾಮಕಾರಿಯಾದ ಸಾಧನೆಗಳು ಮುಂದುವರಿದಿದೆ. ದೀದಿಯರ ವಿವಿಧ ತರಬೇತಿಗಳಿಗೆ ಸಂಶೋಧನೆಗಳು ಈಗಲೂ ನಡೆಯುತ್ತಿವೆ. ದೀದಿಯರ ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧಿಸಿ ಡಿಪ್ಲೋಮಾ ಮಾತ್ರ ಸಾಕಾಗದು, ಇನ್ನಷ್ಟು ಅಭಿವೃದ್ಧಿ ಆಗಬೇಕು ಅನ್ನುವ ಉದ್ದೇಶದಿಂದ ಉನ್ನತ ಶೈಕ್ಷಣಿಕ ವಿಭಾಗಗಳು ಆರಂಭವಾಗಲು ಸಂಶೋಧನೆಗಳು ಸಹಕಾರಿಯಾಯಿತು. ಆದರೂ ಕ್ಷೇತ್ರದಲ್ಲಿ ಸಂಶೋಧನೆಗಳಲ್ಲಿ ತೊಡಗಿಸುವವರ ಸಂಖ್ಯೆ ಕಡಿಮೆಯಿದೆ. ತಾಂತ್ರಿಕವಾಗಿ ಬೆಳೆಯುತ್ತಿರುವ ವೈದ್ಯಕೀಯ ಕ್ಷೇತ್ರದಲ್ಲಿ ದಾದಿಯರಿಗೆ ಬಹಳ ಶ್ರಮ ಇರುತ್ತದೆ. ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸುವವರು ದಾದಿಯರಾಗಿರುತ್ತಾರೆ. ರೋಗಿಗಳಿಗೆ ಪ್ರಥಮವಾಗಿ ಎದುರಾಗುವುದು ದಾದಿಯರು, ಈ ನಿಟ್ಟಿನಲ್ಲಿ ಎಲ್ಲರ ಜತೆ ಸೇರಿ ಜ್ಞಾನ ಹಂಚಿಕೆ ಮತ್ತು ಹೆಚ್ಚಿನ ಅಧ್ಯಯನದಿಂದ ಕಾರ್ಯದಲ್ಲಿ ಸಾಧಿಸಲು ಸಾಧ್ಯ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ನಿರ್ದೇಶಕ ಅಬ್ದುಲ್ ರಹಿಮಾನ್ ಮಾತನಾಡಿ ಸಂಶೋಧನೆಗಳಿಗೆ ಹೆಚ್ಷಿನ ಅನುದಾಗಳಿಲ್ಲ , ಆದರೆ ಖಾಸಗಿ ಸಂಸ್ಥೆ ಗಳ ಒಗ್ಗೂಡುವಿಕೆಯ ನಿರ್ಧಾರದ ಮೂಲಕ ದೇಶದ ಆಡಳಿತವನ್ನು ಹೆಚ್ಚಿನ ಅನುದಾನಗಳಿಗೆ ಒತ್ತಾಯಿಸಬಹುದು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಅಗತ್ಯವಿದೆ. ಸಂಸ್ಥೆಯ ಆಡಳಿತ ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸುವುದರಿಂದ ಸಾಧ್ಯ. ದಾದಿಯರು ಮೂಲ ಜ್ಞಾನವನ್ನು ಪಡೆಯುವುದು ಅಗತ್ಯ. ರೋಗಿಗಳಿಗಾಗಿ ತಾವು ತಮ್ಮನ್ನು ವೃದ್ಧಿಸುವ ಮೂಲಕ ವೈದ್ಯರು ಗೌರವಿಸುವ ಕಾರ್ಯ ಮಾಡುತ್ತಾರೆ. ಈ ಮೂಲಕ ಎಲ್ಲರೂ ಹುದ್ದೆಯನ್ನು ಗೌರವಿಸಲು ಮುಂದಾಗುತ್ತಾರೆ ಎಂದರು.
ವೈದ್ಯಕೀಯ ಅಧೀಕ್ಷಕ ಡಾ.ದೇವಿ ಪ್ರಸಾದ್, ಸಮುದಾಯ ವಿಭಾಗದ ಮುಖ್ಯಸ್ಥ ಡಾ. ಕಿರಣ್ , ಕೆಎಂಸಿ ಆಸ್ಪತ್ರೆಯ ಜಾನೆಟ್ ಮಿರಾಂಡ, ಕಣಚೂರು ಫಿಸಿಯೋಥೆರಪಿ ಕಾಲೇಜು ಪ್ರಾಂಶುಪಾಲ ಡಾ. ಸುಹೈಲ್, ಡಾ. ಜೊಹೈದ್ ಖಾನ್ ಉಪಸ್ಥಿತರಿದ್ದರು. ಕಣಚೂರು ನರ್ಸಿಂಗ್ ಕಾಲೇಜು ಪ್ರಾಂಶುಪಾಲೆ ರೆನಿಲ್ಡಾ ಶಾಂತಿ ಲೋಬೊ ಸ್ವಾಗತಿಸಿದರು. ನರ್ಸಿಂಗ್ ಕಾಲೇಜು ಪ್ರೊ. ಮಾಲತಿ ಕೆ ವಂದಿಸಿದರು.


