Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
ಗ್ರಾಮ

ತೊಕ್ಕೊಟ್ಟು : ಮಾ. 30ರಂದು ಗಟ್ಟಿ ಸಮಾಜಭವನದಲ್ಲಿ ಬಿಜೆಪಿ ಪೇಜ್ ಪ್ರಮುಖ್, ಪ್ರಬುದ್ಧರ ಸಮಾವೇಶ

UllalaVaniBy UllalaVaniMarch 28, 2019No Comments3 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

UN NETWORKS

ತೊಕ್ಕೊಟ್ಟು : ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಮಂಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಅವರನ್ನು‌ ಮೂರು‌ ಲಕ್ಷಕ್ಕೂ ಅಧಿಕ ಮತಗಳಿಂದ ಗೆಲ್ಲಿಸುವ ಸಲುವಾಗಿ ವರಿಷ್ಠರ ನಿರ್ದೇಶನದಂತೆ ನೂತನ ಕಾರ್ಯತಂತ್ರಗಳನ್ನು ಪಕ್ಷದ ಕಾರ್ಯಕರ್ತರಿಗೆ ತಿಳಿಸುವ ಸಲುವಾಗಿ ಕಾರ್ಯಕರ್ತರು ಹಾಗೂ ಪೇಜ್ ಪ್ರಮುಖರ ಸಮಾವೇಶ ಮಾ. 30ರಂದು ಗಟ್ಟಿ ಸಮಾಜಭವನದಲ್ಲಿ ನಡೆಯಲಿದೆ ಎಂದು ಬಿಜೆಪಿ ಮಂಗಳೂರು ಕ್ಷೇತ್ರ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು ಹೇಳಿದರು.

ತೊಕ್ಕೊಟ್ಟು ಕಾಪಿಕಾಡಿನ ಚುನಾವಣಾ ಕಾರ್ಯಾಲಯದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು‌ ಮತ್ತೊಮ್ಮೆ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಆಡಳಿತ ನಡೆಸುವುದು‌ ಶತಸಿದ್ಧ. ಅದಕ್ಕಾಗಿ ತಳಮಟ್ಟದಿಂದ ಬಿಜೆಪಿ ರಾಷ್ಟ್ರಾಧ್ಯಕ್ಷರ ತನಕ ನಿತ್ಯ ನಿರಂತರ ಕಾರ್ಯತಂತ್ರಗಳು ನಡೆಯುತ್ತಾ ಇದೆ. ಕಳೆದ ಬಾರಿ ಮಂಗಳೂರು‌ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು‌ ಅವರು ಜಿಲ್ಲೆಯಲ್ಲಿ ಏಳು ಕಾಂಗ್ರೆಸ್ ಶಾಸಕರ ಪ್ರಾಬಲ್ಯದ ನಡುವೆಯೂ 1,53,000ಮತಗಳ ಅಂತರದ ಗೆಲವು ದಾಖಲಿಸಿದ್ದರು. ಈ ಬಾರಿ‌ ಏಳು‌ ಬಿಜೆಪಿ‌ ಶಾಸಕರು ಇರುವುದರಿಂದಾಗಿ ಕನಿಷ್ಠ ಮೂರು‌ ಲಕ್ಷ ಮತಗಳ ಅಂತರದಿಂದ ಗೆಲವು‌ ದಾಖಲಿಸಬೇಕೆಂಬ ಕಾರ್ಯಯೋಜನೆ ಇದೆ. ಲೋಕಸಭಾ ಚುನಾವಣೆಯಲ್ಲಿ ಭಾಜಪಕ್ಕೆ ಮಂಗಳೂರು ಕ್ಷೇತ್ರದಲ್ಲಿ ಮತಗಳ ಅಂತರ ಹೆಚ್ಚಿಸಬೇಕಿದ್ದು ಆ ನಿಟ್ಟಿನಲ್ಲಿ ಸಾಂಘಿಕ‌ ಪ್ರಯತ್ನ ಯಶಸ್ವಿಯಾಗಲಿದೆ ಎಂದರು.ಮಾ. 30ರಂದು ನಡೆಯುವ ಪೇಜ್ ಪ್ರಮುಖರ ಕಾರ್ಯಕರ್ತರ ಜೊತೆಯಲ್ಲಿ ಪ್ರಬುದ್ಧರು, ಫಲಾನುಭವಿಗಳ ಸಮಾವೇಶ ನಡೆಯಲಿದೆ. ಜಿಲ್ಲಾ ಸಮಿತಿ ನಿರ್ದೇಶನದಂತೆ ಅನುಭವಿಗಳು, ಹಿರಿಯರು, ಕಿರಿಯರನ್ನು ಚುನಾವಣ ಸಮಿತಿಯಲ್ಲಿ ಸೇರಿಸಿಕೊಂಡು ಜವಬ್ದಾರಿ ಕೊಡಲಾಗಿದೆ. ಪೇಜ್ ಪ್ರಮುಖ್, ಗ್ರಾಮ ಸಮಿತಿ, ಬೂತ್ ಸಮಿತಿ, ಶಕ್ತಿ ಕೇಂದ್ರ, ಮಹಾ ಶಕ್ತಿ ಕೇಂದ್ರ ಅದರ ಜವಬ್ದಾರಿ ನಿರ್ವಹಿಸಿದೆ ಎಂದು ನುಡಿದರು.

ರಾಜಕೀಯದಲ್ಲೂ ಸತ್ಯಕ್ಕೆ ಬೆಲೆ ಇದ್ದರೂ ರಾಜಕೀಯ ಧರ್ಮ ಬಿಟ್ಟು ಜೆಡಿಎಸ್ ಕಾಂಗ್ರೆಸ್ ಸಾಮಾಜಿಕ‌ ಜಾಲತಾಣಗಳಲ್ಲಿ ತಪ್ಪು ಸಂದೇಶ ರವಾನಿಸುತ್ತಿದೆ. ಕಾಂಗ್ರೆಸ್ ಅಭ್ಯರ್ಥಿಯ ಇತಿಹಾಸ ನಮಗೆ ಗೊತ್ತಿದೆ. ಅವರ ರಾಜಕೀಯ ಅನುಭವ, ಹಿರಿಯರಿಗೆ ಮಾಡಿದ ದ್ರೋಹ ಗೊತ್ತಿದೆ. ಹಾಗೆಯೇ ಕಾಂಗ್ರೆಸ್ಸಿಗರು ಆರೋಪಿಸುವ ಭರದಲ್ಲಿ ಐಟಿ ದಾಳಿ ಮೋದಿ ಮಾಡಿಸಿದ್ದು ಎಂಬ ಉತ್ತರ ಕೊಡುತ್ತಿದ್ದು ಸರ್ಜಿಕಲ್ ಸ್ಟೆವೈಕ್ ಮೋದಿ ಮಾಡಿಸಿದ್ದಲ್ಲ ಎಂದೂ‌ ಹೇಳ್ತಾರೆ. ಸಂಸದರ ವಿರುದ್ಧ ಕಾಂಗ್ರೆಸ್ ಜೆಡಿಎಸ್ ಒಟ್ಟಾಗಿ ಆರೋಪಿಸುತ್ತಿದ್ದು ಸತ್ಯ ಫಲಿತಾಂಶ ಹೊರಬಂದಾಗ ಜಗತ್ತಿಗೆ ತಿಳಿಯಲಿದೆ ಎಂದರು.ದಿ. ಯು.ಟಿ. ಫರೀದ್ ಅವರು ಶಾಸಕರಾಗಿದ್ದ ಅವಧಿಯಲ್ಲಿ ಒಂಬತ್ತು ಕೆರೆಯಲ್ಲಿರುವ ಸ್ಕೆಲೆಟಿನ್ ನಂತಹ ವಾಸಯೋಗ್ಯವಲ್ಲದ ನಾಲ್ಕುನೂರು ಮನೆಯನ್ನು ನಿರ್ಮಿಸಿ‌ದ್ದು ಆ ಬಗ್ಗೆ ಯಾರೂ ಕೂಡಾ ಚಕಾರ ಎತ್ತುತ್ತಿಲ್ಲ. ಅದರಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಯಾರೂ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಹಾಕೋದಿಲ್ಲ. ಅಲ್ಲಿ ವಾಸಿಸಲು ಸಾಧ್ಯವೇ ಇಲ್ಲ. ಹಂದಿ ಕೋಳಿ ಗೂಡು ಸಹ ಆ ರೀತಿ ಇರದು ಎಂದರು.ಎಡಿಬಿ ಕುಡಿಯುವ ನೀರಿನ‌ ಅವ್ಯವಹಾರ ಯಾರೂ ಮಾತು ಆಡುತ್ತಿಲ್ಲ.ನಾಲ್ಕು ಬಾರಿ ಯು.ಟಿ. ಫರೀದ್ ಹಾಗೂ ನಾಲ್ಕು ಬಾರಿ ಯು.ಟಿ. ಖಾದರ್ ಅವರು ಶಾಸಕರಾದರೂ ಸಮಸ್ಯೆ ಪರಿಹರಿಸದೆ ನಮ್ಮ ಸಂಸದರ ವಿರುದ್ಧ ಆರೋಪಿಸುತ್ತಾರೆ. ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಇನ್ನೂ ಆಗಿಲ್ಲ. ಒಂದು ವೇಳೆ ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬಂದರೆ ದೇಶದಲ್ಲಿ‌ ಎನ್ ಡಿಎ ಬಂದರೆ ಶಾಶ್ವತ ಪರಿಹಾರ ಕೊಡುತ್ತೇವೆ ಎಂದು ನುಡಿದರು.ಕೆರೆಬೈಲ್ ನಗರಸಭೆಯಲ್ಲಿ ಕ್ರಿಯಾಯೋಜನೆಯಾಗಿ ಅನುಮತಿ ಪತ್ರ ಸಿಕ್ಕಿ ಗುದ್ದಲಿ ಪೂಜೆ ಆಗಿದ್ದರೂ ರಾಜಕೀಯ ಮಾಡಿದ ಶಾಸಕರು ಅಲ್ಲಿಗೆ ಮಂಜೂರಾಗಿದ್ದ 60ಲಕ್ಷ ರೂ. ಬೇರೆ ಕಡೆ ಸ್ಥಳಾಂತರಿಸಿದ್ದಾರೆ. ಯುಜಿಡಿ 62ಕೋಟಿ ರೂ. ಮಂಜೂರಾಗಿದ್ದರೂ ಅದರೊಳಗಿನ ಅವ್ಯವಹಾರ ಮಾಧ್ಯಮ, ಅಧಿಕಾರಿಗಳಿಗೂ ಗೊತ್ತಿದ್ದರೂ ಸತ್ಯ ಹೊರಗೆ ಬಂದಿಲ್ಲ.

ಸಂಸದರು 16ಸಾವಿರ ಕೋಟಿ ರೂ. ಜಿಲ್ಲೆಗೆ ನುದಾನ ತಂದಿದ್ದಾರೆ. ಆ ಅಭಿವೃದ್ದಿ ಅಭ್ಯರ್ಥಿ ಗೆಲುವಿಗೆ ಪೂರಕವಾಗುತ್ತದೆ ಎಂದರು.‌
ಬಿಜೆಪಿ ಮಂಗಳೂರು ಕ್ಷೇತ್ರದಲ್ಲಿ‌ ಹಂತಹಂತವಾಗಿ ಗಟ್ಟಿಯಾಗಿ ತಳವೂರಿದ್ದು ಈ ಚುನಾವಣೆಯಲ್ಲಿ ಮೋದಿಯವರು ಮತ್ತೆ ಪ್ರಧಾನಿ‌ ಆಗಲಿದ್ದಾರೆ. ರಾಜ್ಯದಲ್ಲಿ‌ ಮೈತ್ರಿ ಸರಕಾರ ಉರುಳಲಿದೆ. ಮುಂದಿನ ವಿಧಾನ ಸಭೆ ಚುನಾವಣೆಗೂ ಇದು ನಾಂದಿ ಹಾಡಲಿದೆ. ಎಡಿಬಿ ಯೋಜನೆ, ಸಮುದ್ರ ಕೊರೆತಕ್ಕೆ ಶಾಶ್ವತ ಪರಿಹಾರ ರೂಪವಾಗಿ 500ಕೋಟಿ ರೂ. ಅನುದಾನ ಮಂಜೂರಾತಿ ಯತ್ನ ಎಲ್ಲವೂ ಹಳೆಯ ಯೋಜನೆ. ಶಾಸಕ ಯು.ಟಿ. ಖಾದರ್ ಅವರು ತಂದಿರುವ ಹೊಸ ಯೋಜನೆ ಯಾವುದೂ ಇಲ್ಲ ಎಂದು ಮಾಜಿ‌ ಶಾಸಕ ಕೆ. ಜಯರಾಮ‌ ಶೆಟ್ಟಿ ಅರೋಪಿಸಿದರು.ಈ ಸಂದರ್ಭ ಮಾಜಿ ಶಾಸಕ ಕೆ. ಜಯರಾಮ ಶೆಟ್ಡಿ ,ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು,ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ ಹಾಗೂ ನಮಿತಾ ಶ್ಯಾಂ, ಕ್ಷೇತ್ರ ಮಾಜಿ‌ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್, ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್ ಕೆ. ಅರ್. ಹಾಗೂ ಮನೋಜ್ ಆಚಾರ್ಯ ಹಾಗೂ ಮಾಧ್ಯಮ ಸಂಚಾಲಕ ಜೀವನ್ ಕುಮಾರ್ ತೊಕ್ಕೊಟ್ಟು, ಉಪಸ್ಥಿತರಿದ್ದರು.

*ಮಂಗಳೂರಿನಲ್ಲಿ ಬಿಜೆಪಿ ಮುಖಂಡರು ಎರಡು ಲಕ್ಷ ಮತಗಳ ಅಂತರದ ಗೆಲವು ಎನ್ನುತ್ತಿದ್ದು ಉಳ್ಳಾಲದಲ್ಲಿ ಪ್ರಮುಖರು ಮೂರು ಲಕ್ಷ ಅಂತರ ಹೇಳುತ್ತಿದ್ದು ಬಿಜೆಪಿ ಸರಿಯಾದ ಆಂತರಿಕ ಸಮೀಕ್ಷೆ ಏನು‌ ಹೇಳುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಂತೋಷ್ ಬೋಳಿಯಾರ್ ಸಮೀಕ್ಷೆಗಳು ರಾತ್ರಿ ದಿನಬೆಳಗಾಗುವುದರೊಳಗೆ ಬದಲಾಗುತ್ತಿರುವುದನ್ನು‌ ಗಮನಿಸಬೇಕು ಎಂದರು.

*ಖಾದರ್ ಅವರು ಉಳ್ಳಾಲ ತಾಲೂಕು ತಂದಿರುವುದು ಸಂತಸದ ವಿಷಯ, ಕೇಂದ್ರ ಮಾತ್ರ ಎಲ್ಲರಿಗೂ ಅನುಕೂಲವಾಗುವ ಜಂಕ್ಷನ್ ನಲ್ಲಿದ್ದರೆ ನಮ್ಮ ಸಹಮತವಿದೆ.
ಸಂತೋಷ್ ಬೋಳಿಯಾರ್

‌* ರಾಷ್ಟ್ರಲಾಂಛನದ ಮೇಲೆ ಯೂತ್ ಕಾಂಗ್ರೆಸ್ ಧ್ವಜ ಹಾಕಿರುವ ವ್ಯಕ್ತಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ರಾಷ್ಟ್ರಭಕ್ತಿ ಇಲ್ಲದ ಅಭ್ಯರ್ಥಿಯನ್ನು ಮತದಾರರು ಸೋಲಿಸಲಿದ್ದಾರೆ.
ಮೋಹನ್ ರಾಜ್ ಕೆ.ಆರ್

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಕಿನ್ಯದಲ್ಲಿ ಮಾ 30ರಿಂದ ಎ.9ವರೆಗೆ ಕೂಟು ಝಿಯಾರತ್ ಕಾರ್ಯಕ್ರಮ

March 28, 2026

ರಾಮನವಮಿ ಉತ್ಸವ; ದಕ್ಷ ಯುವ ಬಳಗ ವತಿಯಿಂದ ಅರ್ಹ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

March 28, 2026

ತೊಕ್ಕೊಟ್ಟುವಿನಲ್ಲಿ ಹತ್ಯೆ ನಡೆಸಿ ಬೆಂಗಳೂರಿಗೆ ತೆರಳಿದ್ರಾ ಹಂತಕರು…?!

March 27, 2026
Leave A Reply

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025
suddi

ಈಶ್ವರನ ಹೂದೋಟವೆನಿಸಿದ ಪದ್ಯಾಣದಲ್ಲಿ ಬ್ರಹ್ಮಕಲಶೋತ್ಸವ, ಮಾರ್ಚ್30ರಿಂದ ಏ.7ರವರೆಗೆ ಕಾರ್ಯಕ್ರಮ

By UllalaVaniMarch 28, 20260

ಮಂಗಳೂರು: ಈಶ್ವರನ ಹೂದೋಟ ಎಂದೇ ಬಣ್ಣಿಸಲಾಗುವ ಪ್ರಶಾಂತ, ಪ್ರಕೃತಿಯ ಸೊಬಗು, ಹಸಿರು ಸಿರಿಯ ಮಧ್ಯೆ ಇರುವ ದಕ್ಷಿಣ ಕನ್ನಡ ಜಿಲ್ಲೆಯ…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಕಿನ್ಯದಲ್ಲಿ ಮಾ 30ರಿಂದ ಎ.9ವರೆಗೆ ಕೂಟು ಝಿಯಾರತ್ ಕಾರ್ಯಕ್ರಮ

March 28, 2026

ರಾಮನವಮಿ ಉತ್ಸವ; ದಕ್ಷ ಯುವ ಬಳಗ ವತಿಯಿಂದ ಅರ್ಹ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

March 28, 2026

ಹಿಟ್ ಅಂಡ್ ರನ್; ಪಾದಚಾರಿಗೆ ಗಂಭೀರ ಗಾಯ, ಕಾರು ವಶಕ್ಕೆ

March 28, 2026
1 2 3 … 1,850 Next
Automatic YouTube Gallery

ಕೌನ್ಸಿಲರ್ ಸುಜಿತ್ ವಿರುದ್ಧ ಸೋಷಿಯಾಲ್ ಮೀಡಿಯಾದಲ್ಲಿ ಬರಹಗಳು ವೈರಲ್

ಸಾಮಾನ್ಯ ಸಭೆಯಲ್ಲಿ ಕೌನ್ಸಿಲರ್ ಸುಜಿತ್ ಮಾಡೂರು ಚರ್ಚಿಸಿದ ಕೊರಗಜ್ಜ ಕ್ಷೇತ್ರದ ಶೀಟ್ ವಿಚಾರ; ಸೋಷಿಯಾಲ್ ಮೀಡಿಯಾದಲ್ಲಿ ಇಲ್ಲಸಲ್ಲದ ಬರಹಗಳು ವೈರಲ್

ಕೊರಗಜ್ಜ ಸಮಿತಿ ಮಾಜಿ ಅಧ್ಯಕ್ಷರುಗಳ ಪ್ರತಿಕ್ರಿಯೆ
📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ...
ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಕೌನ್ಸಿಲರ್ ಸುಜಿತ್ ವಿರುದ್ಧ ಸೋಷಿಯಾಲ್ ಮೀಡಿಯಾದಲ್ಲಿ ಬರಹಗಳು ವೈರಲ್
Now Playing
ಕೌನ್ಸಿಲರ್ ಸುಜಿತ್ ವಿರುದ್ಧ ಸೋಷಿಯಾಲ್ ಮೀಡಿಯಾದಲ್ಲಿ ಬರಹಗಳು ವೈರಲ್
ಸಾಮಾನ್ಯ ಸಭೆಯಲ್ಲಿ ಕೌನ್ಸಿಲರ್ ಸುಜಿತ್ ಮಾಡೂರು ಚರ್ಚಿಸಿದ ಕೊರಗಜ್ಜ ಕ್ಷೇತ್ರದ ...
ಸಾಮಾನ್ಯ ಸಭೆಯಲ್ಲಿ ಕೌನ್ಸಿಲರ್ ಸುಜಿತ್ ಮಾಡೂರು ಚರ್ಚಿಸಿದ ಕೊರಗಜ್ಜ ಕ್ಷೇತ್ರದ ಶೀಟ್ ವಿಚಾರ; ಸೋಷಿಯಾಲ್ ಮೀಡಿಯಾದಲ್ಲಿ ಇಲ್ಲಸಲ್ಲದ ಬರಹಗಳು ವೈರಲ್

ಕೊರಗಜ್ಜ ಸಮಿತಿ ಮಾಜಿ ಅಧ್ಯಕ್ಷರುಗಳ ಪ್ರತಿಕ್ರಿಯೆ
📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ...
ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಮಾ.30ರಿಂದ ಏ.8ರವರೆಗೆ ಕಿನ್ಯದಲ್ಲಿ ಕೂಟು ಝಿಯಾರತ್
Now Playing
ಮಾ.30ರಿಂದ ಏ.8ರವರೆಗೆ ಕಿನ್ಯದಲ್ಲಿ ಕೂಟು ಝಿಯಾರತ್
ಕಿನ್ಯದಲ್ಲಿ ಕೂಟು ಝಿಯಾರತ್ ಕಾರ್ಯಕ್ರಮ; ಮಾ.30ರಿಂದ ಏ.8ರವರೆಗೆ ಧಾರ್ಮಿಕ ಮತ ...
ಕಿನ್ಯದಲ್ಲಿ ಕೂಟು ಝಿಯಾರತ್ ಕಾರ್ಯಕ್ರಮ; ಮಾ.30ರಿಂದ ಏ.8ರವರೆಗೆ ಧಾರ್ಮಿಕ ಮತ ಪಂಡಿತರಿOದ ಉಪನ್ಯಾಸ

ತೊಕ್ಕೊಟ್ಟುವಿನಲ್ಲಿ ಕಿನ್ಯ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಅಬೂಸ್ವಾಲಿ ಹಾಜಿ ಮಾಹಿತಿ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ...
ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d