UN NETWORKS
ಯೆನೆಪೋಯ : ಸಮಗ್ರ ತತ್ವಶಾಸ್ತ್ರಗಳನ್ನು ಒಳಗೊಂಡು ಆರೋಗ್ಯ ಕ್ಷೇತ್ರದ ಅಭಿವೃದ್ಧಿ ಜೊತೆಗೆ ಸಮುದಾಯವನ್ನು ಶೈಕ್ಷಣಿಕ ಅಭಿವೃದ್ಧಿಗೊಳಿಸುತ್ತಿರುವ ಯೆನೆಪೋಯ ಸಂಸ್ಥೆಯ ಜೊತೆಗಿನ ಒಪ್ಪಂದ ಹೊಸ ಮೈಲಿಗಲ್ಲು ಸ್ಥಾಪಿಸಿದೆ ಎಂದು ಆಸ್ಟ್ರೇಲಿಯಾದ ಕಿ ್ವೀನ್ಸ್ ಲ್ಯಾಂಡ್ ವಿಶ್ವವಿದ್ಯಾನಿಲಯದ ದಂತ ವಿಭಾಗದ ಮುಖ್ಯಸ್ಥೆ ಪ್ರೊ. ಪೌಲೀನ್ ಫೋರ್ಡ್ ಅಭಿಪ್ರಾಯಪಟ್ಟರು.
ಅವರು ಪರಸ್ಪರ ಶೈಕ್ಷಣಿಕ ಹಾಗೂ ಸಂಶೋಧನಾ ಸಹಭಾಗಿತ್ವಕ್ಕಾಗಿ ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ವಿಶ್ವವಿದ್ಯಾನಿಲಯದೊಂದಿಗೆ ಯೆನೆಪೋಯ (ಪರಿಗಣಿತ) ವಿಶ್ವವಿದ್ಯಾಲಯದೊಂದಿಗೆ ಪರಸ್ಪರ ಒಡಂಬಡಿಕೆಯ ತಿಳುವಳಿಕೆ ಪತ್ರಕ್ಕೆ ಗುರುವಾರ ದೇರಳಕಟ್ಟೆಯ ಯೆನೆಪೋಯ ದಂತ ಕಾಲೇಜು ಆಡಿಟೋರಿಯಂನಲ್ಲಿ ಜರಗಿದ ಸಮಾರಂಭದಲ್ಲಿ ಸಹಿ ಹಾಕಿ ಮಾತನಾಡಿದರು.ಅದ್ಭುತವಾದ ಮೂಲಸೌಕರ್ಯಗಳನ್ನು ಒದಗಿಸುತ್ತಿರುವ ಯೆನೆಪೋಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ವಿ.ವಿ ಜತೆಗಿನ ಒಪ್ಪಂದದ ಮೂಲಕ ಪರಸ್ಪರ ಜ್ಞಾನವನ್ನು ಹಂಚಿಕೊಳ್ಳಲು ಸಾಧ್ಯ. ಆರೋಗ್ಯ ಕ್ಷೇತ್ರದ ಸುಧಾರಣೆಗೆ ಪರಸ್ಪರ ಒಪ್ಪಂದ ಸಹಕಾರಿ. ಈ ಮೂಲಕ ನಾವೀನ್ಯತೆಯನ್ನು ಕಂಡುಕೊಳ್ಳುವ ಸಂಶೋಧಕರಿಗೆ ತಮ್ಮೊಳಗಿರುವ ಸಮಸ್ಯೆಗಳನ್ನು ಹಂಚಿಕೊಳ್ಳಲು ಸಿಗುವಂತಹ ಅವಕಾಶವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯೆನೆಪೋಯ (ಪರಿಗಣಿತ) ವಿಶ್ವವಿದ್ಯಾಲಯ ಕುಲಾಧಿಪತಿ ಯೆನೆಪೋಯ ಅಬ್ದುಲ್ಲಾ ಕುಂಞÂ ಮಾತನಾಡಿ ಜ್ಞಾನವಿನಿಮಯಕ್ಕೆ ಉತ್ತಮ ವೇದಿಕೆ. ಯೆನೆಪೋಯ ಸಂಸ್ಥೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಜ್ಞಾನ ವೃದ್ಧಿಸುವುದರ ಜತೆಗೆ ತಮ್ಮ ಭವಿಷ್ಯವನ್ನು ಯಶಸ್ವಿಯಾಗಿ ರೂಪಿಸಿಕೊಳ್ಳಲು ಸಾಧ್ಯ ಎಂದರು. ಈ ಸಂದರ್ಭ ಕುಲಪತಿ ಡಾ.ಎಂ.ವಿಜಯಕುಮಾರ್, ಉಪಕುಲಪತಿ ಡಾ.ಸಿ.ವಿ ರಘುವೀರ್, ಕುಲಸಚಿವ ಡಾ.ಗಂಗಾಧರ ಸೋಮಯಾಜಿ, ಇಸ್ಲಾಮಿಕ್ ಅಕಾಡೆಮಿ ಆಫ್ ಎಜ್ಯುಕೇಷನ್ ಇದರ ಕಾರ್ಯದರ್ಶಿ ಡಾ. ಅಖ್ತರ್ ಹುಸೈನ್ , ಉಪಸ್ಥಿತರಿದ್ದರು.ಯೆನೆಪೋಯ ದಂತ ವೈದ್ಯಕೀಯ ಕಾಲೇಜಿನ ಡೀನ್ ಡಾ| ಬಿ.ಹೆಚ್ ಶ್ರೀಪತಿ ರಾವ್ ಸ್ವಾಗತಿಸಿದರು. ಡಾ. ಅರುಣ್ ಭಾಗವತ್ ಒಪ್ಪಂದದ ಮಹತ್ವ ತಿಳಿಸಿದರು. ದಂತ ಕಾಲೇಜು ಉಪಪ್ರಾಂಶುಪಾಲ ಡಾ. ಶ್ಯಾಂ ಎಸ್ ಭಟ್ ವಂದಿಸಿದರು.
ಡಾ.ಅಖ್ತರ್ ಹುಸೈನ್ ಅವರು ರಚಿಸಿದ ಮಂಗಳೂರು ಕಲೆ ಕಂಬಳದ ಓಟದ ಚಿತ್ರವನ್ನು ಪ್ರೊ.ಪೌಲಿನ್ ಫೋರ್ಡ್ ಅವರಿಗೆ ಗೌರವಾರ್ಪಣೆಯಾಗಿ ನೀಡಿದರು.


