UN NETWORKS
ಹರೇಕಳ : ಹರೇಕಳ ಗ್ರಾಮದಲ್ಲಿ ನಿವೇಶನ ರಹಿತರಿಗೆ ಮೀಸಲಿಟ್ಟಿದ್ದ ಜಮೀನು ಕಬಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿ ಡಿವೈಎಫ್ಐ ಹರೇಕಳ ಗ್ರಾಮ ಸಮಿತಿಯಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ದೂರು ಸಲ್ಲಿಸಲಾಗಿದೆ.
ಹರೇಕಳ ಗ್ರಾಮದ ಮಲಾರ್ ಎಂಬಲ್ಲಿ ಸರ್ವೇ ನಂಬ್ರ 124/2 ಮತ್ತು 125/1ನ್ನು ಗ್ರಾಮದ ನಿವೇಶನ ರಹಿತರಿಗೆ ಮೀಸಲಿಡಲಾಗಿದೆ. ಆದರೆ ಭಾನುವಾರ ಬೆಳಗ್ಗೆ ಜೆಸಿಬಿ ಯಂತ್ರ ಬಳಸಿ ಜಮೀನು ಸಮತಟ್ಟು ಮಾಡಲಾಗಿದ್ದು ಮನೆ ನಿರ್ಮಾಣಕ್ಕೆ ಪ್ರಯತ್ನಿಸಲಾಗಿದೆ. ಈ ಸಂದರ್ಭ ಸಾರ್ವಜನಿಕರು ತಡೆಯದಿದ್ದಲ್ಲಿ ಜಮೀನು ಅತಿಕ್ರಮಣವಾಗುವ ಭೀತಿಯಿತ್ತು. ಪ್ರಕರಣ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು, ಸರ್ಕಾರಿ ಭೂಮಿ ಸಂರಕ್ಷಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಡಿವೈಎಫ್ಐ ಲಿಖಿತ ಮನವಿ ಮಾಡಿದೆ.


