Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಉಳ್ಳಾಲ

ಡಾ. ಅಮೃತ್ ಸೋಮೇಶ್ವರ್ ಅವರಿಗೆ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಪ್ರಧಾನ

UllalaVaniBy UllalaVaniMarch 25, 2019Updated:March 25, 2019No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

UN NETWORKS

ಉಳ್ಳಾಲ : ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್, ಶ್ರೀಮತಿ ಟಿ.ವಿಮಲಾ ವಿ. ಪೈ ಪ್ರಾಯೋಜಿತ, ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಈ ಸಾಲಿನ ಪ್ರಶಸ್ತಿಯನ್ನು ಜನಪದ ವಿದ್ವಾಂಸ , ಯಕ್ಷಗಾನ ಸಂಶೋಧಕ , ಸಾಹಿತಿ ಡಾ. ಅಮೃತ್ ಸೋಮೇಶ್ವರ್ ಅವರಿಗೆ ತಮ್ಮ ಸ್ವಗೃಹ ಸೋಮೇಶ್ವರದ `ಒಲುಮೆ’ಯಲ್ಲಿ ಶನಿವಾರ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಪ್ರಧಾನ ಮಾಡಿದ ಮಾಹೆ ಸಹಕುಲಾಧಿಪತಿ ಡಾ.ಹೆಚ್,ಎಸ್ ಬಲ್ಲಳ್ ಮಾತನಾಡಿ , ಹಲವು ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಡಾ. ಸೋಮೇಶ್ವರ ಅವರ ಸಾಹಿತ್ಯ ಸೇವೆಯನ್ನು ಗುರುತಿಸಿ ಬಹಳಷ್ಟು ಪ್ರಶಸ್ತಿ ಸಂದಿದ್ದರೂ, ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಪ್ರಶಸ್ತಿ ಉಲ್ಲೇಖನೀಯ. ಈ ಮೂಲಕ ಪ್ರಶಸ್ತಿಯ ಗರಿಮೆಯನ್ನು ಹೆಚ್ಚಿಸಿದೆ. ಮಾಹೆ ಕೇವಲ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಮಾತ್ರ ಗಮನಹರಿಸದೆ ಕಲೆ ಮತ್ತು ಸಾಹಿತ್ಯ ಕ್ಷೇತ್ರವನ್ನು ಬೆಳೆಸುವ ಉದ್ದೇಶದಿಂದ ಕಲೆ, ಸಾಹಿತ್ಯ ಕ್ಷೇತ್ರದ ಸಾಧಕರನ್ನು ಗುರುತಿಸಿ ಟಿ.ವಿ ಮೋಹನದಾಸ್ ಪೈ ಪ್ರಾಯೋಜಿತ ಶ್ರೀಮತಿ ಟಿ.ವಿಮಲಾ ವಿ. ಪೈ ಅವರ ಹೆಸರಿನಲ್ಲಿ ಪ್ರತಿವರ್ಷ ಪ್ರಶಸ್ತಿ ನೀಡಲಾಗುತ್ತಿದೆ. ಈಗಾಗಲೇ ಖ್ಯಾತ ಸಾಹಿತಿಗಳಾದ ಶ್ರೀನಿವಾಸ ಗಿತ್ತಿ, ನಿಸಾರ್ ಅಹಮ್ಮದ್, ಸುರೇಂದ್ರ ರಾವ್ ಹಾಗೂ ಕೆ.ವಿ ತಿರುಮಲೇಶ್ ಅವರಿಗೆ ಪ್ರದಾನ ಮಾಡಲಾಗಿದೆ. ಐದನೇ ಪ್ರಶಸ್ತಿಯನ್ನು ಪ್ರೊ.ಅಮೃತ ಸೋಮೇಶ್ವರ ಅವರಿಗೆ ಸಂದಿದೆ. ವಿಶ್ವವಿದ್ಯಾನಿಲಯದಲ್ಲಿ ಕಲಿಯುವ ವಿದ್ಯಾರ್ಥಿಗಳು ವೈದ್ಯಕೀಯ, ಇಂಜಿನಿಯರಿಂಗ್, ಸಂಶೋಧನೆ ವಿಚಾರದ ಜತೆಯಲ್ಲಿ ನಶಿಸಿ ಹೋಗುತ್ತಿರುವ ಕಲೆ, ಸಾಹಿತ್ಯ ಉಳಿಸುವ ಮತ್ತು ಬೆಳೆಸುವ ಪ್ರಯತ್ನ ಮಾಡುತ್ತಿದೆ. ಸಂಶೋಧನಾ ಕೇಂದ್ರದಲ್ಲಿರುವ ಎಲ್ಲಾ ಗ್ರಂಥಗಳನ್ನು ಡಿಜಿಟಲೀಕರಣ ಮಾಡಲಾಗುವುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಖ್ಯಾತ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಮಾತನಾಡಿ, ರಾಷ್ಟ್ರಕವಿ ಗೋವಿಂದ ಪೈಯವರ ಲೇಖನದ ಸಂಪುಟವೊಂದನ್ನು ಎಂಜಿಎಂ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮೆರವಣಿಗೆಯಲ್ಲಿ ಪಲ್ಲಕ್ಕಿಯಲ್ಲಿ ಇರಿಸಿ ತಂದು ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಂದ ಲೋಕಾರ್ಪಣೆಗೊಳಿಸಲಾಗಿತ್ತು. ಅಂತಹ ಮಹಾನ್ ಸಾಹಿತಿಯ ಹೆಸರನ್ನು ಚಿರಸ್ಮರಣೀಯ ಮಾಡುವ ನಿಟ್ಟಿನಲ್ಲಿ ಮಾಹೆ ಶ್ಲಾಘನೀಯ ಕಾರ್ಯ ಮಾಡಿದೆ. ಹಾಗೆಯೇ ಮಂಜೇಶ್ವರದಲ್ಲಿರುವ ರಾಷ್ಟ್ರಕವಿ ಗೋವಿಂದ ಪೈ ಅವರ ಗಿಳಿವಿಂಡಿನಲ್ಲಿ ಸಾಹಿತ್ಯದ ಗಂಧಗಾಳಿ ಇಲ್ಲದವರೇ ಸದಸ್ಯರಾಗಿದ್ದಾರೆ ಎಂದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ಅಮೃತ ಸೋಮೇಶ್ವರ ಮಾತನಾಡಿ, ಸಾಹಿತ್ಯ ಕ್ಷೇತ್ರದಲ್ಲಿ ಪ್ರಶಸ್ತಿಗಳನ್ನು ಅಪೇಕ್ಷಿಸಿಲ್ಲ. ಈ ಪ್ರಶಸ್ತಿ ಘನತೆ ಗಾಂಭೀರ್ಯ ಹೆಚ್ಚಿಸಿಲ್ಲ. ಹಿಂದಿನಂತೆಯೇ ವಿನಯಶೀಲನಾಗಿ ಎಲ್ಲರ ಜತೆಗೆ ಬೆರೆಯುತ್ತೇನೆ. ವರ್ಚಸ್ಸು ಮೀರಿ ಬದುಕುವ ಜಾಯಮಾನ ನನ್ನದಲ್ಲ. ಮೈಸೂರು ವಿಶ್ವವಿದ್ಯಾನಿಲಯ ಆ ಕಾಲದಲ್ಲಿ ಗೌರವ ಡಾಕ್ಟರೇಟ್ ಕೊಟ್ಟಿರುವುದನ್ನು ನಯವಾಗಿ ತಿರಸ್ಕರಿಸಿದ ಶ್ರೇಷ್ಟ ಸಾಹಿತಿ ಗೋವಿಂದ ಪೈ ಅವರ ಹೆಸರಿನಲ್ಲಿ ಸ್ವೀಕರಿಸಿದ ಪ್ರಶಸ್ತಿ ಅಭಿಮಾನ ಹೆಚ್ಚಿಸಿದೆ, ಹೆಮ್ಮೆಯ ಸಂಗತಿ ಎಂದರು.

ಅಭಿನಂದನಾ ಭಾಷಣ ಮಾಡಿದ ಯಕ್ಷಗಾನ ವಿಧ್ವಾಂಸ ಡಾ. ಪ್ರಭಾಕರ ಜೋಷಿ ಮಾತನಾಡಿ, ಕಾರಂತ, ಮಾಸ್ತಿ, ಕುವೆಂಪುರವರ ನಂತರದ ತಲೆಮಾರಿನಲ್ಲಿ ಶ್ರೇಷ್ಟ ಐದು ಸಾಹಿತಿಗಳಲ್ಲಿ ಅಗ್ರಪಂತಿಯಲ್ಲಿರುವ ಅಮೃತ ಸೋಮೇಶ್ವರ, ಪ್ರಾದೇಶಿಕವಾಗಿ ಗುರುತಿಸಿಕೊಂಡಿರುವುದು ದುರಂತ. ಸಾಹಿತ್ಯ ಲೋಕಕ್ಕೆ ಅವರು ಸಲ್ಲಿಸಿದ ಸೇವೆಗೆ ರಾಷ್ಟ್ರಮನ್ನಣೆ ದೊರಕಬೇಕಿದ್ದರೂ ಅದರ ಹಿಂದೆ ಬೆನ್ನತ್ತಿ ಹೋದವರಲ್ಲ ಅಮೃತರು. ಕನ್ನಡದ ಸಾಹಿತ್ಯ ಕೃತಿಗಳಿಗಿಂತ ಕಡಿಮೆಯಿಲ್ಲದ ಸಾಹಿತ್ಯವನ್ನು ಕನ್ನಡ ಕ್ಷೇತ್ರಕ್ಕೆ ಒದಗಿಸಿಕೊಟ್ಟ ಮಹಾನ್ ಮೇಧಾವಿ. ಅನುವಾದ ಕೃತಿಗಳಲ್ಲಿ ಆಂಗ್ಲ ಸಾಹಿತ್ಯ ಲೋಕಕ್ಕಿಂತಲೂ ಮಿಗಿಲಾಗಿರುವುದನ್ನು ಕೊಟ್ಟಿರುವ ನೆಲೆಯಲ್ಲಿ ಗೋವಿಂದ ಪೈ ಅರ್ಹವಾಗಿ ಸಂದಿದೆ ಎಂದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಸಂಯೋಜನಾಧಿಕಾರಿ ಪ್ರೊ. ವರದೇಶ್ ಹಿರೇಗಂಗ್, ಬೇಂದ್ರೆಯವರ ಮೂಲ ಮರಾಠಿಯಾದರೂ ಅವರು ಬರೆದಿರುವುದು ಕನ್ನಡದಲ್ಲಿ, ಮಾಸ್ತಿಯವರ ಮೂಲ ತಮಿಳು ಆಗಿದ್ದರೂ ಅವರು ಬರೆದಿರುವುದು ಕನ್ನಡದಲ್ಲಿ, ಗೋವಿಂದ ಪೈ ಕೊಂಕಣಿಯಾಗಿದ್ದರೂ ಬರೆದಿರುವುದು ಕನ್ನಡದಲ್ಲಿ. ಅದೇ ಸಾಲಿನಲ್ಲಿ ಅಮೃತರು ಕಂಡುಬರುತ್ತಾರೆ ಎಂದರು .ಮಾಹೆ ಆಡಳಿತಾಧಿಕಾರಿ ಡಾ.ಹೆಚ್ ಶಾಂತಾರಾಮ್, ಕುಲಸಚಿವ ಡಾ. ನಾರಾಯಣ ಸಭಾಯಿತ್, ಮಂಗಳೂರು ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಬಸ್ತಿ ವಾಮನ ಶೆಣೈ ಉಪಸ್ಥಿತರಿದ್ದರು. ಭ್ರಮರಿ ಕಾರ್ಯಕ್ರಮ ನಿರೂಪಿಸಿದರು. ಸುಶ್ಮಿತಾ.ಎ ವಂದಿಸಿದರು.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಉಳ್ಳಾಲವಾಣಿ ಬಹಿರಂಗಪಡಿಸಿದ್ದ ಸಮಸ್ಯೆಗೆ ಸ್ಪಂದನೆ: ವಾಣಿಜ್ಯ ಕಟ್ಟಡಗಳಿಗೆ ನೋಟಿಸ್ ಜ್ಯಾರಿ ಮಾಡಿ ಸಭೆ ಕರೆದ ಮುನ್ನೂರು ಗ್ರಾಮ ಪಂಚಾಯತ್

June 12, 2026

ಜೂನ್ 14ರಂದು ಕಂಬಳಪದವಿನಲ್ಲಿ ಸುಹಾ ಫರ್ನಿಚರ್ಸ್ ಶುಭಾರಂಭ

June 12, 2026

ಜನಸಂಘದ ಹಿರಿಯ ಕಾರ್ಯಕರ್ತ ವಿಠಲ್ ಕೊಟ್ಟಾರಿ ನಿಧನ..!!

June 12, 2026
Leave A Reply

Advertise
ಸಂಪರ್ಕಿಸಿ

ಕರ್ನಾಟಕದಾದ್ಯಂತ ಆರೋಗ್ಯ ಇಲಾಖೆಯಲ್ಲಿ ಮೆಗಾ ನೇಮಕಾತಿ: ಸಾರ್ವಜನಿಕ ಆರೋಗ್ಯ ಸೇವೆ ಬಲಪಡಿಸಲು ಮಹತ್ವದ ಹೆಜ್ಜೆ

June 11, 2026

ರಾಜ್ಯದಲ್ಲಿ ಖಾಸಗಿ ಅಸ್ಪತ್ರೆಯಲ್ಲಿ ಆಯುಷ್ಮಾನ್ ಯೋಜನೆ ಸಮರ್ಪಕ ಜಾರಿಗೆ ಜ್ಯಾರಿ ಆಗದಿದ್ದರೆ ಜಿಲ್ಲೆಯ ಅರೋಗ್ಯಧಾರಿಗಳ ಮೇಲೆ ಕ್ರಮ :- ಅರೋಗ್ಯ ಸಚಿವ ಯು.ಟಿ ಖಾದರ್

June 9, 2026

ಫೀಲ್ಡ್ ಗೆ ಇಳಿದ ಯು.ಟಿ. ಖಾದರ್ – ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಕ್ಲಾಸ್…!

June 5, 2026

ವೆನ್ಲಾಕ್ ಆಸ್ಪತ್ರೆಯಲ್ಲಿ ಮನೋವೈದ್ಯರು ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್‌ಗಳ ತೀವ್ರ ಕೊರತೆ – ಬಡ ರೋಗಿಗಳ ನಿರ್ಲಕ್ಷ್ಯ ಯಾಕೆ ಎಂದು ಸಾರ್ವಜನಿಕರ ಪ್ರಶ್ನೆ

May 26, 2026
suddi

ಉಳ್ಳಾಲವಾಣಿ ಬಹಿರಂಗಪಡಿಸಿದ್ದ ಸಮಸ್ಯೆಗೆ ಸ್ಪಂದನೆ: ವಾಣಿಜ್ಯ ಕಟ್ಟಡಗಳಿಗೆ ನೋಟಿಸ್ ಜ್ಯಾರಿ ಮಾಡಿ ಸಭೆ ಕರೆದ ಮುನ್ನೂರು ಗ್ರಾಮ ಪಂಚಾಯತ್

By UllalaVaniJune 12, 20260

ಮುನ್ನೂರು, ಜೂನ್ 12: ಹಲವು ದಿನಗಳಿಂದ ಸಾರ್ವಜನಿಕರ ಹಾಗೂ ಶಾಲಾ ಆಡಳಿತ ಮಂಡಳಿಯ ಆತಂಕಕ್ಕೆ ಕಾರಣವಾಗಿದ್ದ ಕುತ್ತಾರು ಪದವು ಪ್ರದೇಶದ…

ಜೂನ್ 14ರಂದು ಬೆಂಗಳೂರಿನಲ್ಲಿ ಸ್ಟೂಡೆಂಟ್ಸ್ ಫಾರ್ಮರ್ಸ್ ವಾಕಥಾನ್

June 12, 2026

ಜೂನ್ 14ರಂದು ಕಂಬಳಪದವಿನಲ್ಲಿ ಸುಹಾ ಫರ್ನಿಚರ್ಸ್ ಶುಭಾರಂಭ

June 12, 2026

ಹಿರಿಯ ಪತ್ರಕರ್ತ, ನಿವೃತ್ತ ಪ್ರಾಂಶುಪಾಲ ಪ್ರೊ. ಕೆ. ಬಾಲಕೃಷ್ಣ ಗಟ್ಟಿ ನಿಧನ

June 12, 2026
1 2 3 … 1,964 Next
Automatic YouTube Gallery

ಜಾತಿ-ಧರ್ಮ ಮುಖ್ಯವಲ್ಲ, ಸಚಿವ ಯು.ಟಿ.ಖಾದರ್‌ಗೆ ಬಬ್ಬುಸ್ವಾಮಿ ಅಭಯ ನುಡಿ

ಕಂಬಿಗಾರ ಶ್ರೀ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಭವ್ಯ ಸಿರಿಸಿಂಗಾರ ನೇಮೋತ್ಸವ; ಯು.ಟಿ. ಖಾದರ್ ಪ್ರಯತ್ನದಿಂದ ದೈವಸ್ಥಾನಕ್ಕೆ ಜಾಗ..???!!

ಜಾತಿ-ಧರ್ಮ ಮುಖ್ಯವಲ್ಲ, ಯು.ಟಿ.ಖಾದರ್‌ಗೆ ಬಬ್ಬುಸ್ವಾಮಿ ಅಭಯ ನುಡಿ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ...
ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಜಾತಿ-ಧರ್ಮ ಮುಖ್ಯವಲ್ಲ, ಸಚಿವ ಯು.ಟಿ.ಖಾದರ್‌ಗೆ ಬಬ್ಬುಸ್ವಾಮಿ ಅಭಯ ನುಡಿ
Now Playing
ಜಾತಿ-ಧರ್ಮ ಮುಖ್ಯವಲ್ಲ, ಸಚಿವ ಯು.ಟಿ.ಖಾದರ್‌ಗೆ ಬಬ್ಬುಸ್ವಾಮಿ ಅಭಯ ನುಡಿ
ಕಂಬಿಗಾರ ಶ್ರೀ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಭವ್ಯ ಸಿರಿಸಿಂಗಾರ ನೇಮೋತ್ಸವ; ...
ಕಂಬಿಗಾರ ಶ್ರೀ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಭವ್ಯ ಸಿರಿಸಿಂಗಾರ ನೇಮೋತ್ಸವ; ಯು.ಟಿ. ಖಾದರ್ ಪ್ರಯತ್ನದಿಂದ ದೈವಸ್ಥಾನಕ್ಕೆ ಜಾಗ..???!!

ಜಾತಿ-ಧರ್ಮ ಮುಖ್ಯವಲ್ಲ, ಯು.ಟಿ.ಖಾದರ್‌ಗೆ ಬಬ್ಬುಸ್ವಾಮಿ ಅಭಯ ನುಡಿ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ...
ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಮನೆದೇವ್ರು, ಗಿಣಿರಾಮ, ಹಿಟ್ಲರ್ ಕಲ್ಯಾಣ ಧಾರವಾಹಿ ಖ್ಯಾತಿಯ ನಟ ರಾಮ್‌ಪವನ್ ವಿಶೇಷ ಸಂದರ್ಶನ"
Now Playing
ಮನೆದೇವ್ರು, ಗಿಣಿರಾಮ, ಹಿಟ್ಲರ್ ಕಲ್ಯಾಣ ಧಾರವಾಹಿ ಖ್ಯಾತಿಯ ನಟ ರಾಮ್‌ಪವನ್ ವಿಶೇಷ ಸಂದರ್ಶನ"
"ತೆರೆಯ ಮೇಲಿನ ಖಳನಾಯಕ, ಬದುಕಿನಲ್ಲಿ ಸರಳ ವ್ಯಕ್ತಿ- "ತೆರೆಯ ಮೇಲೆ ಭಯಂಕರ ಖಳನಾಯಕ! ...
"ತೆರೆಯ ಮೇಲಿನ ಖಳನಾಯಕ, ಬದುಕಿನಲ್ಲಿ ಸರಳ ವ್ಯಕ್ತಿ-
"ತೆರೆಯ ಮೇಲೆ ಭಯಂಕರ ಖಳನಾಯಕ!

ನಿಜ ಜೀವನದಲ್ಲಿ ಹೇಗಿದ್ದಾರೆ ರಾಮ್‌ಪವನ್?| Exclusive Interview"

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ...
ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version