UN NETWORKS
ಉಳ್ಳಾಲ: ಕೇರಳ ಭಾಗದಿಂದ ಗಾಂಜಾ ಖರೀದಿಸಿ ಮಂಗಳೂರು ಕಡೆಗೆ ಮಾರಾಟ ನಡೆಸಲೆಂದು ತರುತ್ತಿರುವ ಖಚಿತ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ದ್ವಿಚಕ್ರ ವಾಹನ ಸೇರಿದಂತೆ ಆರೋಪಿಯನ್ನು ಗಡಿಪ್ರದೇಶ ತಲಪಾಡಿಯಿಂದ ಬಂಧಿಸಿದ್ದಾರೆ.
ಕೆ.ಸಿ ರೋಡು ನಿವಾಸಿ ಮುನಾವರ್ (32) ಬಂಧಿತ. ಈತನ ಬಳಿಯಿದ್ದ ಒಂದು ಕೆ.ಜಿ 50 ಗ್ರಾಂ ಗಾಂಜಾ ಸಹಿತ ಸಾಗಾಟಕ್ಕೆ ಬಳಸಿದ ಏವಿಯೇಟರ್ ಸ್ಕೂಟರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿತ ಕೇರಳ ಭಾಗದಿಂದ ಗಾಂಜಾ ಖರೀದಿಸಿ ಮಂಗಳೂರು ಕಡೆಯತ್ತ ಮಾರಾಟ ನಡೆಸಲೆಂದು ಸಾಗಾಟ ನಡೆಸುವಾಗ ಬಂಧಿಸಲಾಗಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಳ್ಳಾಲ ಠಾಣಾಧಿಕಾರಿ ಗೋಪಿಕೃಷ್ಣ ಕೆ.ಆರ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಎಸ್.ಐ ಗುರುವಪ್ಪ ಕಾಂತಿ ಹಾಗೂ ಸಿಬ್ಬಂದಿಗಳಾದ ದಯಾನಂದ, ಶರೀಫ್, ಪ್ರಶಾಂತ್, ಲಿಂಗರಾಜು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.


