UN NETWORKS
ಮುಡಿಪು : ಮುಡಿಪಿನ ಕುರ್ನಾಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ಅಂತರ್ ಕಾಲೇಜು ಮಟ್ಟದ ಒಂದು ದಿನದ ಕಾರ್ಯಗಾರ ಮುಡಿಪು ಶ್ರೀ ಗೋಪಾಲಕೃಷ್ಣ ಸಂಭಾಗಣದಲ್ಲಿ ನಡೆಯಿತು.
ಮಂಗಳೂರಿನ ಸಹ್ಯಾದ್ರಿ ತಾಂತ್ರಿಕ ಹಾಗೂ ಆಡಳಿತಾತ್ಮಕ ಕಾಲೇಜಿನ ವಿದ್ಯಾರ್ಥಿ ಸಮಾಲೋಚಕ ಅಂಕಿತ್ ಎಸ್. ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು.ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ಗಿರಿಧರ್ ರಾವ್ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿರುವಾಗಲೇ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು. ರೆಡ್ ಕ್ರಾಸ್ ಸಂಚಾಲಕ ಮಾಳವಿಕ ಕ್ಯಾತರಿನ್ ಸ್ವಾಗತಿಸಿದರು.
ಡಾ. ರಿತೇಶ್ ಡಿ ಕುನ್ಹಾ ಪ್ರಥಮ ಚಿಕಿತ್ಸೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.ಅಂತರ್ ಕಾಲೇಜು ಮಟ್ಟದ ರಸ ಪ್ರಶ್ನೆ ಹಾಗೂ ಬೀದಿ ನಾಟಕ ಸ್ಪರ್ಧೆಗಳು ನಡೆಯಿತು. ರಂಗಭೂಮಿ ಹಾಗೂ ಚಲನ ಚಿತ್ರನಟ ದೀಕ್ಷಿತ್ ಕೆ, ಉಪನ್ಯಾಸಕ ಪ್ರದೀಪ್ ಬಂಗೇರ ಹಾಗೂ ಅರ್ಥಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಶೋಭಾಮಣಿ ಬೀದಿ ನಾಟಕ ಸ್ಪರ್ಧೆಯ ತೀರ್ಪುಗಾರರಾಗಿ ಸಹಕರಿಸಿದರು.ವಿದ್ಯಾರ್ಥಿಗಳಾದ ಪ್ರಮೀಳಾ ಡಿಸೋಜ ಪರಿಚಯಿಸಿದರು. ಅಫ್ವಾನ್‍ರವರು ಕಾರ್ಯಕ್ರಮ ನಿರೂಪಿಸಿದರು.ಶಾಕೀರ್ ರವರು ವಂದಿಸಿದರು.


