UN NETWORKS
ಕೊಣಾಜೆ: ಮಂಗಳೂರು ವಿಶ್ವವಿದ್ಯಾಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಮಂಗಳ ಸಭಾಂಗಣದಲ್ಲಿ ನಡೆದ ಯಕ್ಷಮಂಗಳ ಪ್ರಶಸ್ತಿ ಸಮಾರಂಭದಲ್ಲಿ ಯಕ್ಷಮಂಗಳ ವಿದ್ಯಾರ್ಥಿ ತಂಡದಿಂದ `ಮೋಹಿನೀ ಏಕಾದಶಿ’ ಯಕ್ಷಗಾನ ಪ್ರದರ್ಶನ ನಡೆಯಿತು.

ದೀವಿತ್ ಎಸ್.ಕೆ. ಪೆರಾಡಿ ಅವರು ನಿರ್ದೇಶನ ನೀಡಿದ್ದು, ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀನಿವಾಸ ಬಳ್ಳಮಂಜ, ಚೆಂಡೆಯಲ್ಲಿ ಸವಿನಯ ನೆಲ್ಲಿತೀರ್ಥ, ಮದ್ದಳೆಯಲ್ಲಿ ಮಯೂರ ನಾಯ್ಗ ಮಾಡೂರು, ಚಕ್ರತಾಳದಲ್ಲಿ ಯಜ್ಞೇಶ್ ರೈ ಕಟೀಲು ಸಹಕರಿಸಿದ್ದರು. ಮುಮ್ಮೇಳದಲ್ಲಿ ಯಕ್ಷಮಂಗಳ ವಿದ್ಯಾರ್ಥಿಗಳಾದ ವಿನುತ ಎಂ.ಎಸ್(ಕನ್ನಡ), ಅಭಿಷೇಕ್(ಭೌತಶಾಸ್ತ್ರ), ನಿಖಿತಾ ಕಿಣಿ(ಗಣಕ ವಿಜ್ಞಾನ), ಬೇಬಿ ಎಸ್.(ಇತಿಹಾಸ), ಗ್ರೀಷ್ಮ ಆರ್.(ಭೌತಶಾಸ್ತ್ರ), ಜ್ಯೋತಿ(ಸಮಾಜ ಕಾರ್ಯ), ಸಂಜನಾ(ಸಮಾಜ ಕಾರ್ಯ), ಶ್ರೀ ಹರಿ(ಪ್ರಾಣಿಶಾಸ್ತ್ರ), ಸುರೇಖಾ(ಸಮಾಜ ಕಾರ್ಯ), ಸಮೀಕ್ಷಾ ಶೆಟ್ಟಿ(ಗಣಕ ವಿಜ್ಞಾನ), ಶ್ರೇಯಾ ಶೆಟ್ಟಿ(ಗಣಕ ವಿಜ್ಞಾನ), ಸಹನಾ ಶೆಟ್ಟಿ(ಪ್ರಾಣಿಶಾಸ್ತ್ರ), ಭಾರತಿ ಕೆ.(ಭೌತಶಾಸ್ತ್ರ), ಸೌಭಾಗ್ಯ ಬಿ. ಶೆಟ್ಟಿ(ಭೌತಶಾಸ್ತ್ರ), ಅರ್ಚನ(ರಸಾಯನಶಾಸ್ತ್ರ), ಸಂಪತ್ ಎಂ. ಆರ್(ಫುಡ್ ಸೈನ್ಸ್), ಅಂಜನ್ ಎಂ(ಫುಡ್ ಸೈನ್ಸ್), ಸೌಂದರ್ಯ ಡಿ.(ಕನ್ನಡ), ಕಾವ್ಯ ಎ. ಆರ್.(ಕನ್ನಡ), ದಿವ್ಯ ಪಿ.(ಅರ್ಥಶಾಸ್ತ್ರ), ಪ್ರಿಯಾಂಕ(ಅರ್ಥಶಾಸ್ತ್ರ), ವಿಕೇಶ್ ವಿ.ಕೋಟ್ಯಾನ್(ರಸಾಯನಶಾಸ್ತ್ರ), ರಾಘವೇಂದ್ರ ಶೆಟ್ಟಿ( ಪತ್ರಿಕೋದ್ಯಮ), ಮೇಘಶ್ರೀ(ವಾಣಿಜ್ಯ),ಮುಖೇಶ್(ಪತ್ರಿಕೋದ್ಯಮ),ನಿಶಾಂತ್ ಶೆಟ್ಟಿ(ವಾಣಿಜ್ಯ) ಪುರುಷೋತ್ತಮ(ಭೌತಶಾಸ್ತ್ರ), ರಂಜಿತಾ ಬಿ.ಎನ್(ಗಣಕ ವಿಜ್ಞಾನ), ಯಶಸ್ವಿ(ಬಿ.ಬಿ.ಎ), ಶಿಲ್ಪಾ(ಪ್ರಾಣಿಶಾಸ್ತ್ರ),ಶಿಲ್ಪಾ ಕೃಷ್ಣ ಶೆಟ್ಟಿಗಾರ್(ಗಣಕ ವಿಜ್ಞಾನ), ಶ್ರೀನಾಥ್(ಎಂ.ಕಾಂ), ಸಾಗರ್(ಸಾಗರ ಭೂ ವಿಜ್ಞಾನ), ಶ್ರೀಮುಖ್(ಬಿ.ಕಾಂ), ನವೀನ್ ದೇವಾಡಿಗ(ಗಣಕ ವಿಜ್ಞಾನ) ಅವರು ಭಾಗವಹಿಸಿದ್ದರು. ಬಳಿಕ ವಿದ್ಯಾರ್ಥಿಗಳನ್ನು ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಗೌರವಿಸಲಾಯಿತು.


