UN NETWORKS
ಉಳ್ಳಾಲ: ಸ್ವಚ್ಫ ಸರ್ವೆಕ್ಷಣ 2019ರ ಸಮೀಕ್ಷೆಯಡಿ ಒಂದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ನಗರ ಸ್ಥಳೀಯ ಸಂಸ್ಥೆಗಳ ಪೈಕಿ ಉಳ್ಳಾಲ ನಗರಸಭೆಯು ಕರ್ನಾಟಕ ರಾಜ್ಯಕ್ಕೆ ಏಳನೇ ಸ್ಥಾನವನ್ನು ಪಡೆದುಕೊಂಡಿದೆ.
ರಾಷ್ಟ್ರಮಟ್ಟದಲ್ಲಿ ನಡೆದ ಸ್ವಚ್ಫ ಸರ್ವೆಕ್ಷಣೆ 2019ರ ಸರ್ವೆಯಲ್ಲಿ ನಾಲ್ಕು ಹಂತದ ಸಮೀಕ್ಷೆಗೆ ಒಟ್ಟು 5000 ಅಂಕಗಳನ್ನು ನಿಗದಿಪಡಿಸಿತ್ತು. ಉಳ್ಳಾಲ ನಗರಸಭೆಯು ಕ್ರಮವಾಗಿ ನಾಲ್ಕು ಹಂತಗಳಡಿಯಲ್ಲಿ ನೇರ ವೀಕ್ಷಣೆಯಡಿಯಲ್ಲಿ 1250ರಲ್ಲಿ 1037, ಸೇವಾ ಹಂತದ ಪ್ರಗತಿಯಲ್ಲಿ 1250ರಲ್ಲಿ 369, ಜನಾಭಿಪ್ರಾಯದಲ್ಲಿ 1250ರಲ್ಲಿ 838 ಹಾಗೂ ಪ್ರಮಾಣೀಕರಣ 1250ರಲ್ಲಿ 150 ಒಟ್ಟು 2393 ಅಂಕಗಳನ್ನು ಗಳಿಸಿದೆ. ಈ ಮೂಲಕ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ತಮಿಳುನಾಡು, ಕೇರಳ, ಗೋವಾ ಪಾಂಡಿಚೇರಿ ರಾಜ್ಯಗಳನ್ನೊಳಗೊಂಡ ದಕ್ಷಿಣ ವಲಯದ 1118 ನಗರ ಸ್ಥಳೀಯ ಸಂಸ್ಥೆಗಳ ಪೈಕಿ ಉಳ್ಳಾಲ ನಗರಸಭೆಯು 41ನೇ ಸ್ಥಾನವನ್ನು ಹಾಗೂ ರಾಜ್ಯದ 253 ಸ್ಥಳೀಯ ಸಂಸ್ಥೆಗಳಲ್ಲಿ ಏಳನೇ ಸ್ಥಾನವನ್ನು ಪಡೆದುಕೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಸತತ 2ನೇ ಬಾರಿಗೂ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ ಎಂದು ಉಳ್ಳಾಲ ನಗರಸಭೆ ಪೌರಾಯುಕ್ತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


