UN NETWORKS
ಕೊಲ್ಯ : ಕೊಲ್ಯ ಶ್ರೀ ದೇವಿ ಮೂಕಾಂಬಿಕಾ ದೇವಸ್ಥಾನದ 31ನೇ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀ ಸ್ವಾಮಿ ರಮಾನಂದಶ್ರಮ ಹಿರಿಯ ಪ್ರಾಥಮಿಕ ಶಾಲೆಯ ಹಳೆವಿದ್ಯಾರ್ಥಿ ಸಂಘದ ವತಿಯಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.
ಮಂಗಳೂರು ವಿಮಾನ ನಿಲ್ದಾಣ ಪ್ರಾಕಾರದ ನಿವೃತ್ತ ನಿರ್ದೇಶಕ ಎಂ. ಆರ್ ವಾಸುದೇವ ಸಭೆ ಉದ್ಘಾಟಿಸಿದರು.
ನಿವೃತ್ತ ಮುಖ್ಯ ಶಿಕ್ಷಕ ವಿಶ್ವನಾಥ ಕೋಳ್ಯೂರು ಅಧ್ಯಕ್ಷತೆ ವಹಿಸಿದ್ದರು. ಕಿಟ್ಟೆಲ್ ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲ ವಿಠ್ಠಲ. ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮಿ ಗಟ್ಟಿ, ಶ್ರೀ ಕೃಷ್ಣ ಭಜನಾ ಮಂದಿರದ ಅಧ್ಯಕ್ಷ ಸುನೀಲ್ ಗಟ್ಟಿ ಯುವ ಉದ್ಯಮಿ ಪ್ರಶಾಂತ್ ಗಟ್ಟಿ ರಮಾನಂದ ಸ್ವಾಮೀಜಿ ಮಹಾಸಂಸ್ಥಾನಮ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮಹಾಬಲ ಶೆಟ್ಟಿ, ಶಾಲಾ ಮುಖ್ಯ ಶಿಕ್ಷಕಿ ಪದ್ಮಾವತಿ, ಹಳೆ ವಿದ್ಯಾರ್ಥಿಗಳಾದ ವಿಶಾಲಾಕ್ಷಿ ರಾವ್, ನಿಶಿತಾ ಯೋಗೀಶ್, ವಿನಯ ಶೆಟ್ಟಿ ತಲಪಾಡಿ ಹಾಗೂ ಸಂದೀಪ್ ದ್ವಾರಕನಗರ ಉಪಸ್ಥಿತರಿದ್ದರು.ಶಾಲಾ ನಿವೃತ್ತ ಅಧ್ಯಾಪಕ ಸುಂದರ ಭಟ್ ಹಾಗೂ ಧಾರ್ಮಿಕ ಸಾಮಾಜಿಕ ಕಾರ್ಯಕರ್ತ ನಾಗೇಶ ಗಟ್ಟಿ ದ್ವಾರಕನಗರ ಅವರನ್ನು ಸನ್ಮಾನಿಸಲಾಯಿತು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶೈಲೇಶ್ ನಾಯಕ್ ಸ್ವಾಗತಿಸಿದರು. ಪುಷ್ಪರಾಜ್ ಗಟ್ಟಿ ವಂದಿಸಿದರು. ಜಗದೀಶ್ ವರದಿ ವಾಚಿಸಿದರು.
ಕಿರಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಂಗಳೂರಿನ ಅರೆಹೊಳೆ ಪ್ರತಿಷ್ಠಾನದ ಕಲಾವಿದರಿಂದ ಗಾನ ನೃತ್ಯ ವೈಭವ ಪ್ರದರ್ಶನ ನಡೆಯತು.


