UN NETWORKS
ತೊಕ್ಕೊಟ್ಟು : ತೊಕ್ಕೊಟ್ಟು ಚೆಂಬುಡ್ಡೆಯಲ್ಲಿ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಅನಧಿಕೃತ ಮೀನಿನ ಅಂಗಡಿಗಳನ್ನು ಲೋಕೋಪಯೋಗಿ ಇಲಾಖೆ ಗುರುವಾರ ತೆರವುಗೊಳಿಸಿದೆ.
ಐದಕ್ಕೂ ಅಧಿಕ ಅಂಗಡಿಗಳು ಚೆಂಬುಗುಡ್ಡೆ ರಸ್ತೆಬದಿಯಲ್ಲಿ ಕಾರ್ಯಾಚರಿಸುತಿತ್ತು. ಇದರಿಂದ ವಾಹನ ಸವಾರರಿಗೆ ಅಡ್ಡಿಯುಂಟಾಗುತ್ತಲೇ ಇತ್ತು. ಸಾರ್ವಜನಿಕರು ಪೊಲೀಸರು, ಸ್ಥಳಿಯಾಡಳಿತಕ್ಕೆ ದೂರು ನೀಡಿದರೂ, ಯಾವುದೇ ಸ್ಪಂಧನೆ ದೊರೆತಿರಲಿಲ್ಲ. ಲೋಕೋಪಯೋಗಿ ಇಲಾಖೆಯವರು ಜೆಸಿಬಿ ಮೂಲಕ ಸ್ಥಳಕ್ಕಾಗಮಿಸಿ ಎಲ್ಲಾ ಅಂಗಡಿಗಳನ್ನು ತೆರವುಗೊಳಿಸಿದ್ದಾರೆ.


