UN NETWORKS
ಹರೇಕಳ: ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ದ.ಕ. ಹಾಗೂ ಮಂಗಳೂರಿನ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ನ ಜಂಟಿ ಆಶ್ರಯದಲ್ಲಿ ಎಸ್ಎಸ್ಎಲ್ಸಿಯ ಮಕ್ಕಳಿಗೆ ವಿಷಯವಾರು ತರಬೇತಿ ನಡೆಯಿತು.
ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಟ್ಯಾಲೆಂಟ್ ರಿಸರ್ಚ್ ಫೌಂಡೇಷನ್ನ ಸಲಹೆಗಾರರಾದ ರಫೀಕ್ ಮಾಸ್ಟರ್ ಪರೀಕ್ಷೆ ಎಂದ ತಕ್ಷಣ ಭಯ ಪಡುವ ಅಗತ್ಯವಿಲ್ಲ. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪಾಸಾಗಲು ಪೂರ್ವಸಿದ್ಧತೆ ಬಹಳ ಮುಖ್ಯ. ಓದುವಾಗ ಅರ್ಥಮಾಡಿಕೊಂಡು ಓದುವುದು ಮತ್ತು ಅರ್ಥವಾಗದೇ ಇರುವುದನ್ನು ಹಿಂಜರಿಕೆ ಇಲ್ಲದೆ ಅಧ್ಯಾಪಕರಲ್ಲಿ ಕೇಳುವುದು ಕೂಡ ಅಷ್ಟೇ ಮುಖ್ಯ. ಮುಂದಿನ ಯಾವುದೇ ವಿದ್ಯಾಭ್ಯಾಸಕ್ಕಾಗಲಿ, ವೃತ್ತಿಗಾಗಲೀ ಎಸ್.ಎಸ್.ಎಲ್.ಸಿ ಪಾಸಾಗಲೇ ಬೇಕಾಗುತ್ತದೆ. ಹಾಗಾಗಿ ಇದೊಂದು ಜೀವನವನ್ನು ರೂಪಿಸುವ ಪರೀಕ್ಷೆಯಾಗಿದೆ ಎಂದರು.
ಬಳಿಕ ನಡೆದ ವಿಷಯವಾರು ತರಬೇತಿಯಲ್ಲಿ ದೇರಳಕಟ್ಟೆ ಸರಕಾರಿ ಪ್ರೌಢಶಾಲೆಯ ಗಣಿತ ಅಧ್ಯಾಪಕಿ ನಯನ, ಪಾವೂರು ಸರಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಕರುಣಾ ಹಾಗೂ ದೇರಳಕಟ್ಟೆ ಶಾಲೆಯ ವಿಜಯ ತರಬೇತಿ ನೀಡಿದರು.ಮುಖ್ಯ ಶಿಕ್ಷಕ ಕೆ. ರವೀಂದ್ರ ರೈ ಸ್ವಾಗತಿಸಿದರು.ದೈಹಿಕ ಶಿಕ್ಷಕ ತ್ಯಾಗಂ ಹರೇಕಳ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ರವಿಶಂಕರ್ ವಂದಿಸಿದರು.


