UN NETWORKS
ತೊಕ್ಕೊಟ್ಟು: ಆದಿ ಕ್ರಿಯೇಷನ್ಸ್ ಪ್ರಸ್ತುತಿಯ ಲಿಟ್ಲ್ ಚ್ಯಾಂಪ್ ಕಾರ್ಯಕ್ರಮವನ್ನು ಶ್ರೀ ಚೀರುಂಭ ಭಗವತಿ ಕ್ಷೇತ್ರದ ಆಡಳಿತ ಮೊಕ್ತೇಸರ ಗಂಗಾಧರ ಉಳ್ಳಾಲ್, ಧರ್ಮದರ್ಶಿ ಭಾಸ್ಕರ ಐತಾಳ್, ನಟಿ ಕರೀಷ್ಮಾ ಅಮೀನ್ ಉದ್ಘಾಟಿಸಿದರು.
ಉದ್ಯಮಿ ಸೌಂದರ್ಯ ರಮೇಶ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶಿಕ್ಷಣ ಪ್ರೇಮಿ ಬೊಂಡಾಲ ಸಚ್ಚಿದಾನಂದ ಶೆಟ್ಟಿ, ಉದ್ಯಮಿಗಳಾದ ದುರ್ಗಾದಾಸ್, ಯೋಗೀಶ್ ಸಾಲ್ಯಾನ್ , ಲಿಟ್ಲ್ ಚ್ಯಾಂಪ್ ತೀರ್ಪುಗಾರರಾದ ರಾಜೇಶ್ ಕಣ್ಣೂರು, ಇಸ್ಮಾಯಿಲ್, ರೋಶಲ್ ಸಿಂಫೋನಿ, ಸೂರಜ್ ಶೆಟ್ಟಿ, ಬಾಲ ನಟಿಯರಾದ ಸಪ್ತಾ ಪಾವೂರು, ವಂಶಿ ರತ್ನಕುಮಾರ್, ಆರ್.ಜೆ.ರಶ್ಮಿ ಉಳ್ಳಾಲ್ ಹಾಗೂ ಚಿತ್ರನಟಿ ಶೈಲಶ್ರೀ ಮಧುರಾಜ್ ಭಾಗವಹಿಸಿದ್ದರು.ಹಣಾಹಣಿಯ ರಿಯಾಲಿಟಿ ಶೋ ನಡೆಯಿತು. ಒಟ್ಟು15ತಂಡಗಳು ಸ್ಪರ್ಧೆಯಲ್ಲಿ ಪಾಲ್ಗೊಂಡವು.
ನಂತರ ನಡೆದ ಅಬ್ಬಕ್ಕ ಟಿವಿ ವಾರ್ಷಿಕೋತ್ಸವದಲ್ಲಿ ಹೆಸರಾಂತ ಭಾಗವತ ಪಟ್ಲ ಸತೀಶ್ ಶೆಟ್ಟಿ, ಸ್ವಾವಲಂಬಿ ಮಹಿಳೆ ಕುಸುಮಾ ಎಚ್. ದೇವಾಡಿಗ, ಪಾರಂಪರಿಕ ವೈದ್ಯ ಬ್ರದರ್ ಎಲ್ಡೋ, ಪ್ರತಿಭಾವಂತ ಕಲಾವಿದೆ ವಸುಂಧರಾ ಹರೀಶ್, ಅಂತರಾಷ್ಟ್ರೀಯ ಕ್ರೀಡಾಪಟು ಶ್ರೀಮಾ ಪ್ರಿಯದರ್ಶಿನಿ, ಮಾಧ್ಯಮ ಕ್ಷೇತ್ರದಲ್ಲಿ ವಸಂತ ಕೊಣಾಜೆ, ಶಿಕ್ಷಣ ಕ್ಷೇತ್ರದಲ್ಲಿ ಸಚಿನ್ ಗಟ್ಟಿ ಪೊಯ್ಯತ್ತಬೈಲ್ ಅವರನ್ನು ಸನ್ಮಾನಿಸಲಾಯಿತು.
ಕಂಕನಾಡಿ ಗರೋಡಿ ಕ್ಷೇತ್ರದ ಅಧ್ಯಕ್ಷ ಚಿತ್ತರಂಜನ್, ಧಾರ್ಮಿಕ ಮುಂದಾಳು ಚಂದ್ರಹಾಸ್ ಉಳ್ಳಾಲ್, ಒಬಿಸಿ ಮೋರ್ಚಾ ಕೇರಳ ರಾಜ್ಯ ಸಮಿತಿ ಸದಸ್ಯ ನ್ಯಾಯವಾದಿ ನವೀನ್ ರಾಜ್ ಕೆ. ಜೆ, ಹರೇಕಳ ಶ್ರೀ ರಾಮಕೃಷ್ಣ ಶಿಕ್ಷಣ ಸಂಸ್ಥೆಯ ಮುಖ್ಯ ಶಿಕ್ಷಕ ಕೆ. ರವೀಂದ್ರ ರೈ ಹರೇಕಳ, ಭಾರತ ದೇಶದ ಪ್ಯಾರ ಕಮಾಂಡೋ ಶನೀಸ್ ಉಪ್ಪಳ, ಬಿಜೆಪಿ ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಕೋಟೆಕಾರು ಪಟ್ಟಣ ಪಂಚಾಯಿತಿ ಸದಸ್ಯೆ ಜಯಶ್ರೀ ಪ್ರಫುಲ್ಲದಾಸ್, ಚಂದ್ರಹಾಸ ಅಡ್ಯಂತಾಯ, ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಲಿಟ್ಲ್ ಚ್ಯಾಂಪ್ನ ನಿರ್ದೇಶಕ ಪ್ರಕಾಶ್ ಸಿಂಫೋನಿ, ನಿರ್ಮಾಪಕಿ ಸವಿತಾ ಜಗದೀಶ್, ಮಿಥುನ್ ಶೆಟ್ಟಿ ಮುಡಿಪು, ಸುಧೀಶ್ ಶೆಟ್ಟಿ ಉಪಸ್ಥಿತರಿದ್ದರು.
ಆಡಳಿತ ನಿರ್ದೇಶಕ ಶಶಿಧರ್ ಪೊಯ್ಯತ್ತಬೈಲ್ ಸ್ವಾಗತಿಸಿದರು.ಅರುಣ್ ಉಳ್ಲಾಲ್ ಕಾರ್ಯಕ್ರಮ ನಿರೂಪಿಸಿದರು.ನಿರ್ದೇಶಕ ಸುಪ್ರೀತ್ ಭಂಡಾರಿ ವಂದಿಸಿದರು.


