UN NETWORKS
ಕೊಣಾಜೆ: ಮಂಗಳೂರು ವಿಶ್ವವಿದ್ಯಾಲಯದ ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಂಶೋಧನಾರ್ಥಿಯಾಗಿದ್ದ ಯಶುಕುಮಾರ್ ಡಿ ಇವರು ಪ್ರೊ. ಅಭಯ ಕುಮಾರ ಕೆ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ “ತುಳು ನಾಡಿನ ಅವಳಿವೀರರ ಆರಾಧನೆ” : ಸಾಮಾಜಿಕ ಸಂಬಂಧಗಳು ಮತ್ತು ಚಾರಿತ್ರಿಕತೆ” ಎಂಬ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿಯನ್ನು ನೀಡಿದೆ. ಇವರು ಬಂಟ್ವಾಳ ತಾಲೂಕು ಅಮ್ಟೂರು ಗ್ರಾಮದ ಕೃಷ್ಣಾಪುರ ನಿವಾಸಿ ಹಾಗೂ ಬಿ ಎಸ್ ಎನ್ ಎಲ್ ಉದ್ಯೋಗಿ ದೇವದಾಸ ಮತ್ತು ಸುಂದರಿ ಇವರ ಪುತ್ರ. 


