ಉಳ್ಳಾಲ್ ನ್ಯೂಸ್ ಡೆಸ್ಕ್
ಉಳ್ಳಾಲ: ಹರಿದರ್ಶನಕ್ಕೆಂದು ತೆರಳಿದ ಉಳ್ಳಾಲದ ಮಹಿಳೆಯೊಬ್ಬರು ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯವಾಗಿ ವಿಽವಶರಾದ ಘಟನೆ ಭಾನುವಾರ ದೆಹಲಿಯಲ್ಲಿ ನಡೆದಿದ್ದು ಮೃತರ ಪಾರ್ಥಿವ ಶರೀರವನ್ನು ದೆಹಲಿಯಂದ ಮಂಗಳೂರಿಗೆ ವಿಮಾನದ ಮೂಲಕ ಕರೆತರುವಲ್ಲಿ ಸಚಿವ ಯು.ಟಿ. ಖಾದರ್ ಅವರು ಮಾನವೀಯತೆ ಮೆರೆದಿದ್ದಾರೆ. ಸಚಿವರ ಹೃದಯವಂತಿಕೆಗೆ ಉಳ್ಳಾಲದ ಸುಮಾನ ಪೈ ಅವರ ಕುಟುಂಬ ಕೃತಜ್ಞತೆ ಸಲ್ಲಿಸಿದೆ. 
ಮಂಗಳೂರಿನಿಂದ ಹರಿದ್ವಾರಕ್ಕೆಂದು ಶ್ರೀಕರಕಿಣಿಯವರ ನೇತೃತ್ವದಲ್ಲಿ ತೆರಳಿದ್ದ ೧೫ಮಂದಿಯ ತಂಡದಲ್ಲಿದ್ದ ಉಳ್ಳಾಲದ ಸುಮಾನಾ ಪೈ(೬೦) ಅವರು ಕಳೆದ ವಾರ ಪ್ರಯಾಣ ಹೊರಟಿದ್ದು ದೆಹಲಿಯ ವಾತಾವರಣಕ್ಕೆ ಒಗ್ಗಿಕೊಳ್ಳದೆ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯವಾದ ಹಿನ್ನೆಲೆಯಲ್ಲಿ ವಿಽವಶರಾಗಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಕುಟುಂಬದವಾರ ಸುಮನಾ ಪೈ ಅವರಿಗೆ ಪ್ರಯಾಣದಲ್ಲಿ ದೆಹಲಿಯ ಆಹಾರ ಪಥ್ಯವಾಗಿಲ್ಲ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದ್ದು ಅದೇ ಹಿನ್ನೆಲೆಯಲ್ಲಿ ಜ್ವರವೂ ಬಂದಿತ್ತು ಎನ್ನಲಾಗಿದೆ. ಆರೋಗ್ಯ ಹದೆಗೆಡುತ್ತಿದ್ದಂತೆಯೇ ದೆಹಲಿಯ ರಾಜೇಂದರ್ ನಗರದ ಸರ್ ಗಂಗಾರಾಮ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅದಾಗಲೇ ಆಸ್ಪತ್ರೆಗೆ ಸಾಗಿಸುವಾಗಲೇ ಕೊನೆಯುಸಿರೆಳೆದಿದ್ದರು ಎನ್ನಲಾಗಿದೆ.
ಪಾರ್ಥಿವ ಶರೀರವನ್ನು ಸೋಮವಾರ ಬೆಳಗ್ಗೆ ೧೧.೩೦ಕ್ಕೆ ದೆಹಲಿಯಿಂದ ಏರ್ ಇಂಡಿಯಾ ವಿಮಾನ ಮೂಲಕ ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣಕ್ಕೆ ಕರೆ ತರಲಾಗಿದ್ದು ಸಂಜೆ ಉಳ್ಳಾಲ ಅಬ್ಬಕ್ಕ ಸರ್ಕಲ್‌ನಲ್ಲಿರುವ ಮನೆಯಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ.


