UN NETWORKS
ಕೊಣಾಜೆ : ಕೊಣಾಜೆ ಸಪ್ತಸ್ವರ ಕಲಾ ತಂಡದ ನೂತನ ಅಧ್ಯಕ್ಷರಾಗಿ ರಾಮಚಂದ್ರ ಎಂ. ಆಯ್ಕೆಯಾಗಿದ್ದಾರೆ.ಸುರೇಂದ್ರ ಪೂಜಾರಿ ಬೊಳ್ಳೆಕುಮೇರು ಇವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾ ಸಭೆಯಲ್ಲಿ 2018- 2019ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು.
ಉಪಾಧ್ಯಕ್ಷರಾಗಿ ಹರಿದಾಸ್ ಬಿ, ಪ್ರಧಾನ ಕಾರ್ಯದರ್ಶಿಯಾಗಿ ಶರತ್ ಆಚಾರ್ಯ, ಜೊತೆ ಕಾರ್ಯದರ್ಶಿಯಾಗಿ ಕೃಷ್ಣಪ್ಪ ಬಿ, ಕೋಶಾಧಿಕಾರಿಯಾಗಿ ಶೇಖರ್ ಕೊಪ್ಪಳ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರಿತೇಶ್ ಶೆಟ್ಟಿ ಹೊಸಮನೆ, ಕ್ರೀಡಾ ಕಾರ್ಯದರ್ಶಿಯಾಗಿ ಮಂಜುನಾಥ ಕಲ್ಲಿಮಾರು ಹಾಗೂ ಭಜನಾ ಸಂಚಾಲಕರಾಗಿ ಮಂಜುನಾಥ ಪುಳಿಂಚಾಡಿ ಆಯ್ಕೆಮಾಡಲಾಯಿತು.


