UN NETWORKS
ಯೇನೆಪೊಯ : ಯೇನೆಪೊಯ ವಿಶ್ವವಿದ್ಯಾನಿಲಯದ ಯೇನೆಪೊಯ ದಂತ ಮಹಾವಿದ್ಯಾಲಯದ ಪ್ರೊಸ್ತೊಡೊಂಟಿಕ್ಸ್ ವಿಭಾಗದ ಆಶ್ರಯದಲ್ಲಿ ಪ್ರೊಸ್ಥೊಡೊಂಟಿಕ್ಸ್ ಡೇ (ಕೃತಕ ದಂತ ವೈದ್ಯಕೀಯ ದಿನ)ವನ್ನು ಆಚರಿಸಲಾಯಿತು.
ಯೇನೆಪೊಯ ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ| ಬಿ. ಹೆಚ್. ಶ್ರೀಪತಿರಾವ್ ಮತ್ತು ಪ್ರೊಸ್ತೊಡೊಂಟಿಕ್ಸ್ ವಿಭಾಗದ ಮುಖ್ಯಸ್ಥ ಡಾ| ಸನತ್ ಶೆಟ್ಟಿ, ಪ್ರಾಧ್ಯಾಪಕರು ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರು, ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿ ಪ್ರೊಸ್ಥೋಡೊಂಟಿಕ್ಸ್ ಡೇ ಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಹಲವಾರು ಬಡರೋಗಿಗಳಿಗೆ ಹಲವು ಬಗೆಯ ಕೃತಕದಂತ ಉಚಿತವಾಗಿ ಚಿಕಿತ್ಸೆಯನ್ನು ನೀಡಲಾಯಿತು.


