UN NETWORKS
ದೇರಳಕಟ್ಟೆ: ನಿಟ್ಟೆ ಉಷಾ ಇನ್ಸಿಟ್ಯೂಟ್ ಆಫ್ ನರ್ಸಿಂಗ್ ಸಾಯನ್ಸ್, ನಿಟ್ಟೆ ಮಕ್ಕಳ ಶುಶ್ರೂಷ ವಿಭಾಗದ ವತಿಯಿಂದ ಎಸಿಸ್ಮೆಂಟ್ ರಿಸಸಿಟೇಷನ್ ಆ್ಯಂಡ್ ಸ್ಟೆಬಿಲೈಜೇಷನ್ ಎಂಬ ರಾಜ್ಯಮಟ್ಟದ ಕಾರ್ಯಗಾರ ಜಸ್ಟಿಸ್ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಚಿಂತನ ಸೆಮಿನಾರ್ ಹಾಲ್ನಲ್ಲಿ ನಡೆಯಿತು.
ಡಾ. ಸಂದೀಪ್ ರೈ ಕಾರ್ಯಕ್ರಮ ಉದ್ಘಾಟಿಸಿದರು.ಮಕ್ಕಳ ಶಸ್ತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಪ್ರೊ. ಡಾ. ಸಂದೀಪ್ ರೈ, ಕೆ.ಎಂ.ಸಿ ವೀಕ್ಷಕರಾದ ಪ್ರೊ. ಶಾಂತಿ ಎಸ್., ಕಾರ್ಯಗಾರ ಸಂಯೋಜಕಿ ಸುಜಾತ ಆರ್., ಕಾರ್ಯದರ್ಶಿ ಜೀವಿತಾ ಆಳ್ವ, ಉಪನ್ಯಾಸಕಿ ಹರ್ಷಾ ತೋಮಸ್, ಸಂಪನ್ಮೂಲ ವ್ಯಕ್ತಿಗಳಾಗಿ ನಿಟ್ಟೆ ಮಕ್ಕಳ ಶುಶ್ರೂಷ ವಿಭಾಗದವರು ಉಪಸ್ಥಿತರಿದ್ದರು.ಬೆನಿಟಾ ಸನ್ನಿ ಕಾರ್ಯಕ್ರಮ ನಿರೂಪಿಸಿದರು.


