UN NETWORKS
ಉಳ್ಳಾಲ: ಉಳ್ಳಾಲ ನಗರದ ವಿವಿಧ ರಸ್ತೆ ಕಾಮಗಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಉಳ್ಳಾಲ ಒಳಪೇಟಿಯಿಂದ ನೇರವಾಗಿ ಮಂಚಿಲಕ್ಕೆ ಸಂಪರ್ಕಿಸುವ ರಸ್ತೆ ಹಾಗೂ ವಿವಿಧ ರಸ್ತೆ ಕಾಮಗಾರಿ ಕುರಿತು ಗುತ್ತಿಗೆದಾರರೊಂದಿಗೆ ಚರ್ಚಿಸಿದರು.
ಲೋಕೋಪಯೋಗಿ ಸಹಾಯಕ ಎಂಜಿನಿಯರ್ ರವಿ ಕುಮಾರ್, ನಗರಸಭೆ ಮಾಜಿ ಸದಸ್ಯ ಮುಸ್ತಾಫ ಅಬ್ದುಲ್ಲಾ, ದಿನೇಶ್ ರೈ ನಗರಸಭೆ ಕೌನ್ಸಿಲರ್ ಯು.ಎ ಇಸ್ಮಾಯಿಲ್, ಅಶ್ರಫ್ ಮಾಸ್ತಿಕಟ್ಟೆ, ಸ್ವಪ್ನಾ ಹರೀಶ್, ವೀಣಾ ಡಿಸೋಜಾ, ಬಾಝಿಲ್ ಡಿಸೋಜ, ಅಯೂಬ್ ಮಂಚಿಲ, ಸ್ಥಳೀಯರಾದ ಯು.ಎಂ. ಜಬ್ಬಾರ್, ಗುತ್ತಿಗೆದಾರ ಅಹಮ್ಮದ್ ಬಾವಾ ಕೊಟ್ಟಾರ, ಅಯೂಬ್ ಮಂಚಿಲ, ರಾಜು ಬಂಡಸಾಲೆ, ಇಸ್ಮಾಯಿಲ್ ಸೀದಿಯಬ್ಬ, ದೀಪಕ್ ಪಿಲಾರ್, ಇಬ್ರಾಹಿಂ ಹೆಜಮಾಡಿ, ಎಂಜಿನಿಯರುಗಳಾದ ಅನ್ಸಾರ್, ಮಜೀದ್ ಹಾಗೂ ಅಫ್ರೀದ್ ಹುಸೈನ್ ಉಪಸ್ಥಿತರಿದ್ದರು.


