UN NETWORKS
ತಲಪಾಡಿ: ತಾ.ಪಂ.ಸದಸ್ಯ ಸಿದ್ದೀಕ್ ಕೊಳಂಗೆರೆ ಅವರು ಲಕ್ಷ ಅನುದಾನ ನೀಡುವ ಭರವಸೆ ಮೇರೆಗೆ ಎಪಿಎಂಸಿ ಹಾಗೂ ಶಾಸಕರ ವಿಶೇಷ ಅನುದಾನದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ ಅಭಿಪ್ರಾಯಪಟ್ಟರು.
ತಲಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಂಜಳದಲ್ಲಿ ತಾಲೂಕು ಪಂಚಾಯಿತಿ ಹಾಗೂ ಶಾಸಕರ ವಿಶೇಷ ಅನುದಾನದಲ್ಲಿ ನಡೆಯಲಿರುವ ಒಳಚರಂಡಿ ಮತ್ತು ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.ತಲಪಾಡಿ ಕಾಂಗ್ರೆಸ್ ಭದ್ರ ಕೋಟೆಯಾದರೂ ಕೆಲವೊಂದು ಕಾರಣಗಳಿಂದ ಪಂಚಾಯಿತಿ ಆಡಳಿತ ಕೈತಪ್ಪಿದೆ. ಮುಂದಿನ ದಿನಗಳಲ್ಲಿ ಗ್ರಾಮದಲ್ಲಿ ಮತ್ತೆ ಕಾಂಗ್ರೆಸ್ ಗೆ ಬೆಂಬಲ ನೀಡುವ ಮೂಲಕ ಹೆಚ್ಚಿನ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಹೇಳಿದರು.ತಾಲೂಕು ಪಂಚಾಯಿತಿ ಅಧ್ಯಕ್ಷ ಮೊಹಮ್ಮದ್ ಮೋನು ಮಾತನಾಡಿ, ಗಡಿಭಾಗ ತಲಪಾಡಿ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶವಾಗಿದ್ದು ಶಾಸಕರು ಅನುದಾನ ನೀಡಿದರೂ ಸ್ಥಳೀಯ ಜನಪ್ರತಿನಿದಿಗಳ ಅನುದಾನ ಮೀಸಲಿಡಬೇಕು ಎಂದರು.ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮುಸ್ತಫಾ ಮಲಾರ್, ಮುಖಂಡರಾದ ಶ್ರೀನಿವಾಸ ಶೆಟ್ಟಿ ಪುಲ್ಲು ಹಾಗೂ ಗಣೇಶ್ ಶೆಟ್ಟಿ ಮಾತನಾಡಿದರು.
ತಾಲೂಕು ಪಂಚಾಯಿತಿ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಕೊಳಂಗೆರೆ, ಮುಖಂಡರಾದ ಇಕ್ಬಾಲ್ ಸಾಮಾನಿಗೆ, ತಲಪಾಡಿ ಗ್ರಾಮ ಪಂಚಾಯಿತಿ ಸದಸ್ಯರಾದ ಇಬ್ರಾಹಿಂ ತಲಪಾಡಿ, ಮಕ್ಯಾರ್ ಖಾದರ್, ಹಸೈನಾರ್, ಮೊಹಮ್ಮದ್ ಅಶ್ರಫ್, ಝೈಬುನ್ನಿಸಾ, ಲತಾ, ಜಯರಾಮ ಶೆಟ್ಟಿ ತಲಪಾಡಿ, ಮೇಗ ಸಲೀಂ ಅಸೈಗೋಳಿ, ಮಸೀದಿ ಅಧ್ಯಕ್ಷ ಬಾವ, ಗುತ್ತಿಗೆದಾರ ಖಲೀಲ್ ಪಟ್ಟೋರಿ, ಸ್ಥಳೀಯರಾದ ಚಾಂದಿನಿ ಇನ್ನಿತರರು ಉಪಸ್ಥಿತರಿದ್ದರು.ಕೋಟೆಕಾರ್ ಪಟ್ಟಣ ಪಂಚಾಯಿತಿ ಸದಸ್ಯ ಮೊಯಿದ್ದೀನ್ ಬಾವ ಸ್ವಾಗತಿಸಿದರು. ಜಯರಾಂ ಶೆಟ್ಟಿ ವಂದಿಸಿದರು.


