UN NETWORKS
ತಲಪಾಡಿ:ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಅಂತರಶಾಲಾ ಕಾಲೇಜು ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ತಲಪಾಡಿ ಕೆ.ಸಿ.ರೋಡ್‌ನ ಫಲಾಹ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಪಂದ್ಯಾವಳಿಯ ವಿವಿಧ ವಿಭಾಗಗಳಲ್ಲಿ ಹಲವು ಪದಕಗಳನ್ನು ಗೆದ್ದುಕೊಂಡಿದ್ದಾರೆ.
ಶಾಲೆಯ ಏಳನೇಯ ತರಗತಿ ವಿದ್ಯಾರ್ಥಿ ಅಬ್ದುಲ್ ಸಯೀಮ್ (ಕಟಾ 1 ಬೆಳ್ಳಿ, ಕುಮಿಟೆ 1 ಚಿನ್ನ), ಮುಹಮ್ಮದ್ ಇಸ್ಮಾಯೀಲ್ ಫಝಲ್ (ಕಟಾ 1 ಕಂಚು), ಎರಡನೇ ತರಗತಿಯ ಫಾತಿಮಾ ತುಹ್ಫ (ಕುಮಿಟೆ 1 ಬೆಳ್ಳಿ, ಕಟಾ 1 ಕಂಚು) ಹಾಗೂ ನಾಲ್ಕನೇ ತರಗತಿಯ ಮುಹಮ್ಮದ್ ಫೌಝಾನ್ (ಕಟಾ 1 ಕಂಚು) ಪದಕಗಳನ್ನು ಗೆದ್ದುಕೊಂಡಿದ್ದಾರೆ ಎಂದು ಸಂಸ್ಥೆಯ ಪ್ರಾಂಶುಪಾಲ ಅಬ್ದುಲ್ ಖಾದರ್ ಹುಸೈನ್ ತಿಳಿಸಿದ್ದಾರೆ.


