UN NETWORKS
ಉಳ್ಳಾಲ: ಹಿರಾ ಮಹಿಳಾ ಕಾಲೇಜು, ಬಬ್ಬುಕಟ್ಟೆ ಇದರ ವತಿಯಿಂದ ಮೌಲ್ಯ ಶಿಕ್ಷಣ ವಿಭಾಗದಿಂದ ಶವಸಂಸ್ಕಾರ ( ಮಯ್ಯತ್) ಎಂಬ ವಿಷಯದ ಕುರಿತು ಮಾಹಿತಿ ಕಾರ್ಯಕ್ರಮ ಹಿರಾ ಸಭಾಂಗಣದಲ್ಲಿ ನಡೆಸಲಾಯಿತು.
ಮುಖ್ಯ ಅತಿಥಿಯಾಗಿ ಶಾಂತಿ ಎಜುಕೇಶನಲ್ ಟ್ರಸ್ಟ್ ನ ಟ್ರಸ್ಟಿ ಹಾಗೂ ಅನುಪಮ ಮಹಿಳಾ ಮಾಸಿಕದ ಸಂಪಾದಕ ಮಂಡಳಿಯ ಸದಸ್ಯೆ ಸಾಜಿದಾ ಮೂಮಿನ್ ಇವರು ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಉತ್ತಮ ಮಾಹಿತಿಯನ್ನು ನೀಡಿದರು. ಶವ ಸಂಸ್ಕಾರವು ಪ್ರತಿಯೊಬ್ಬ ಸತ್ಯವಿಶ್ವಾಸಿಯ ಕಡ್ಡಾಯ ಕರ್ಮವಾಗಿದೆ. ಅದರಲ್ಲಿ ಉತ್ತಮ ರೀತಿಯಲ್ಲಿ ಪಾಲ್ಗೊಂಡು ಪ್ರತಿಫಲವನ್ನು ಗಳಿಸಲು ಶ್ರಮಿಸಬೇಕು. ಇದನ್ನು ಪ್ರತಿಯೊಬ್ಬರು ಕಲಿಯಲು ಪ್ರಯತ್ನಿಸಬೇಕು ಎಂದು ಉಪದೇಶಿಸಿದರು.
ಕಾರ್ಯಕ್ರಮದಲ್ಲಿ ಹಿರಾ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಭಾರತಿ ಎಂ.ಆರ್. ಹಾಗೂ ಮೌಲ್ಯ ಶಿಕ್ಷಣ ವಿಭಾಗದ ಮುಖ್ಯಸ್ಥೆ ಸಿಹಾನ ಬಿ.ಎಂ. ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಫಾತಿಮತ್ ಝವೀದ ಮತ್ತು ಶರೀಫ ಅಫ್ರ ಕಿರಾತ್ ಪಠಿಸಿದರು. ವಿದ್ಯಾರ್ಥಿನಿ ಫಾತಿಮತ್ ರಹೀಮ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.


