UN NETWORKS
ಕಲ್ಲಾಪು: ಕಾರು ಢಿಕ್ಕಿ ಹೊಡೆದು ಮಹಿಳೆ ಸಾವನ್ನಪ್ಪಿರುವ ಘಟನೆ ರಾ.ಹೆ.66ರ ಕಲ್ಲಾಪು ಸಮೀಪ ಇಂದು ನಸುಕಿನ ಜಾವ ಸಂಭವಿಸಿದೆ.ಉಳ್ಳಾಲ ಹೊಯ್ಗೆ ನಿವಾಸಿ ಡೋರತ್ ಪೌಲ್ ಎಂಬವರ ಪತ್ನಿ ಫ್ಲೋರಿನ್ ಡಿಸೋಜ(48) ಮೃತರು. ದೇರಳಕಟ್ಟೆ ಶಾಗಿಲ್ ವಾಚ್ ಕಂಪೆನಿಯಲ್ಲಿ ಉದ್ಯೋಗಿ ಆಗಿರುವ ಇವರು ಕೆಲಸಕ್ಕೆಂದು ತೆರಳುವ ಸಂದರ್ಭ ಘಟನೆ ಸಂಭವಿಸಿದೆ.

ಕಲ್ಲಾಪು ಸಮೀಪ ಹೆದ್ದಾರಿ ದಾಟುವ ಸಂದರ್ಭ ತೊಕ್ಕೊಟ್ಟು ಕಡೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ. ತಲೆಗೆ ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಢಿಕ್ಕಿ ಹೊಡೆದ ಕಾರು ಚಾಲಕ ನೇರವಾಗಿ ಕಾರನ್ನು ಮಂಗಳೂರು ಗರೋಡಿಯಲ್ಲಿರುವ ಸಂಚಾರಿ ಠಾಣೆಗೆ ಕೊಂಡೊಯ್ದು ಇರಿಸಿದ್ದಾರೆ. ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ. ಮೃತರು ಪತಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.


