UN NETWORKS
ಮಂಗಳೂರು: SKSSF ದೇರಳಕಟ್ಟೆ ಶಾಖೆ ಇದರ ಆಶ್ರಯದಲ್ಲಿ ಜನವರಿ 19 ಶನಿವಾರ ರಾತ್ರಿ 07:00 ಕ್ಕೆ ಶಂಸುಲ್ ಉಲಮಾ ಮೌಲಿದ್ ವಾರ್ಷಿಕ ಹಾಗೂ ಶೈಖುನಾ ಮಿತ್ತಬೈಲ್ ಜಬ್ಬಾರ್ ಉಸ್ತಾದ್ ರವರ ಅನುಸ್ಮರಣಾ ಸಂಗಮವು ದೇರಳಕಟ್ಟೆ ಗ್ರೀನ್ ಗ್ರೌಂಡ್ ನಲ್ಲಿ ನಡೆಯಲಿದೆ.
ದ.ಕ ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಉಸ್ತಾದರ ಅದ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಣಕ್ಕಾಡ್ ಸಯ್ಯದ್ ಹಾರಿಸಲಿ ಶಿಹಾಬ್ ತಂಗಳ್ ದುಆ ಕ್ಕೆ ನೇತೃತ್ವ ನೀಡಲಿದ್ದು.ಖ್ಯಾತ ಪ್ರಭಾಷಣಗಾರ ಬಹು|ಕೀಚೇರಿ ಅಬ್ದುಲ್ ಗಫೂರ್ ಮೌಲವಿ ಮುಖ್ಯ ಪ್ರಭಾಷಣ ಮಾಡಲಿದ್ದು ಕಾರ್ಯಕ್ರಮದಲ್ಲಿ ಹಲವಾರು ಪ್ರಮುಖ ಉಲಮಾಗಳು ನೇತಾರರು ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ.


