UN NETWORKS
ತೊಕ್ಕೊಟ್ಟು : ತೊಕ್ಕೊಟ್ಟು ಪೆರ್ಮನ್ನೂರು ಸೈಂಟ್ ಸೆಬೆಸ್ಟಿಯನ್ ಧರ್ಮಕೇಂದ್ರದ ವಾರ್ಷಿಕ ಹಬ್ಬದ ತಯಾರಿಯಾಗಿ ಪರಮಪ್ರಸಾದ ಮೆರವಣಿಗೆ ಆಡಂಕುದ್ರುವಿನ ಸಂತ ಸೆಬೆಸ್ಟಿಯನ್ ಸ್ಮಾರಕದಿಂದ ಪೆರ್ಮನ್ನೂರು ಧರ್ಮಕೇಂದ್ರದ ವರೆಗೆ ವಿಜೃಂಭಣೆಯಿಂದ ಭಾನುವಾರ ನಡೆಯಿತು.
ಸುಮಾರು 3,000 ಕ್ಕೂ ಅಧಿಕ ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದರು. ಪ್ರಧಾನ ಧರ್ಮಗುರು ಬೊನಿಫಾಸ್ ಪಿಂಟೋ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಚರ್ಚ್ ಪ್ರಧಾನ ಧರ್ಮಗುರು ಜೆ.ಬಿ.ಸಲ್ದಾನ್ಹ, ಸಹಾಯಕ ಧರ್ಮಗುರುಗಳಾದ ಸ್ಟ್ಯಾನಿ ಪಿಂಟೋ, ಲೈಝಿಲ್ ಡಿಸೋಜ, ರೂಪೇಶ್ ಮಾಡ್ತಾ, ವೆಲೇರಿಯನ್ ಪಿಂಟೋ, ಪೀಟರ್ ಸೆರಾವೋ ಉಪಸ್ಥಿತರಿದ್ದರು.


