UN NETWORKS
ತಲಪಾಡಿ: ಮಂಗಳೂರು ವಿಶ್ವವಿದ್ಯಾಲಯ ಕಳೆದ ಏಪ್ರಿಲ್-ಮೇ ತಿಂಗಳಲ್ಲಿ ನಡೆಸಿದ ಅಂತಿಮ ವರ್ಷದ ಬಿ.ಎಸ್ಸಿ (ಅನಿಮೇಶನ್ ಆ್ಯಂಡ್ ವಿಶುವಲ್ ಎಫೆಕ್ಟ್) ಪರೀಕ್ಷೆಯಲ್ಲಿ ಕಳೆದ ಐದು ವರ್ಷಗಳಂತೆ ಈ ಬಾರಿಯೂ ಅನುಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ರ್ಯಾಂಕ್‍ಗಳು ಮಂಗಳೂರಿನ ತಲಪಾಡಿಯಲ್ಲಿರುವ ಶಾರದಾ ಕಾಲೇಜಿಗೆ ದೊರೆತಿದೆ.
ರಾಹುಲ್ ಪಿ. ಶೆಟ್ಟಿ(ಪ್ರಥಮ:3,702 ಅಂಕಗಳು), ಸುಮುಖ ಪಿ. ಭಾಸ್ರಿ(ದ್ವಿತೀಯ: 3,555ಅಂಕಗಳು) ಹಾಗೂ ಡೀನಾ ಪೊನ್ನಮ್ಮ ಕೆ. ಪಿ. (ತೃತೀಯ:3,464ಅಂಕಗಳು) ರ್ಯಾಂಕ್ ಪಡೆದಿರುತ್ತಾರೆ. ಶಾರದಾ ಕಾಲೇಜು ನಿರಂತರವಾಗಿ ಬಿ.ಕಾಂ, ಬಿ.ಬಿ.ಎ, ಬಿ.ಸಿ.ಎ. ಮೊದಲಾದ ಎಲ್ಲಾ ಕೋರ್ಸುಗಳ ಅಂತಿಮ ವರ್ಷದಲ್ಲಿ ಅತ್ಯುತ್ತಮ ಫಲಿತಾಂಶವನ್ನು ದಾಖಲಿಸುತ್ತಿದ್ದು, ದೇಶದ ಮೂಲೆಮೂಲೆಯ ವಿದ್ಯಾರ್ಥಿಗಳನ್ನು ತನ್ನೆಡೆಗೆ ಆಕರ್ಷಿಸಿರುವುದು ಮಾತ್ರವಲ್ಲದೆ, ವೈಶಿಷ್ಟ್ಯಪೂರ್ಣ ಶಿಸ್ತುಬದ್ಧ ಶಿಕ್ಷಣಕ್ಕೆ ಸಾಮಾಜಿಕ ಮನ್ನಣೆಯನ್ನು ಪಡೆದಿದೆ. ರ್ಯಾಂಕ್ ಪುರಸ್ಕೃತ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ್ ಹಾಗೂ ಆಡಳಿತ ಮಂಡಳಿ, ಆಡಳಿತಾಧಿಕಾರಿ ವಿವೇಕ ತಂತ್ರಿ, ಪ್ರಾಂಶುಪಾಲ “ಅಷ್ಟಾವಧಾನಿ’ ಡಾ. ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್ ಹಾಗೂ ಉಪನ್ಯಾಸಕರು ಅಭಿನಂದಿಸಿದ್ದಾರೆ.


