Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
ಗ್ರಾಮ

ಮಂಗಳೂರಿನ ಪ್ರಪ್ರಥಮ ಸುಸಜ್ಜಿತ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ತಲಪಾಡಿಯಲ್ಲಿ ಜ.13 ಕ್ಕೆ ಲೋಕಾರ್ಪಣೆ

UllalaVaniBy UllalaVaniJanuary 11, 2019Updated:January 11, 2019No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

UN NETWORKS

ತಲಪಾಡಿ: ನಗರದ ಪ್ರಥಮ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ಉದ್ಘಾಟನಾ ಕಾರ್ಯಕ್ರಮ ಜ. 13ರಂದು ತಲಪಾಡಿ ದೇವಿನಗರದಲ್ಲಿರುವ ಶಾರದಾ ಆಯುರ್ಧಾಮ ಕ್ಯಾಂಪಸ್‍ನಲ್ಲಿ ನಡೆಯಲಿದೆ ಎಂದು ಶಾರದಾ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ಹೇಳಿದರು.

ತಲಪಾಡಿ ದೇವಿನಗರದ ಶಾರದಾ ಆಯುರ್ಧಾಮದಲ್ಲಿ ಶುಕ್ರವಾರ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದರು.
ಮಾಹೆ ಮಾಜಿ ಉಪಕುಲಪತಿ ಪದ್ಮಭೂಷಣ ಡಾ.ಬಿ.ಎಂ.ಹೆಗ್ಡೆ ಉದ್ಘಾಟಿಸಲಿದ್ದಾರೆ. . ಮಂಗಳೂರು ಕೆಎಂಸಿಯ ಮಾಜಿ ಪ್ರಾಚಾರ್ಯ ಡಾ.ಕೆ.ಆರ್.ಶೆಟ್ಟಿ ಮುಖ್ಯಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದರು. ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ರಾಜೇಶ್ ಪಾದೇಕಲ್ ಮಾತನಾಡಿ, ಭಾರತೀಯ ವೈದ್ಯಪದ್ಧತಿಯ ಸಮಗ್ರ ಚಿಕಿತ್ಸಾ ಸೌಲಭ್ಯವನ್ನು ಒದಗಿಸುವ ಸುಸಜ್ಜಿತ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಕೊರತೆ ಇರುವುದನ್ನು ಮನಗಂಡ ತುಳುನಾಡು ಎಜ್ಯುಕೇಶನ್ ಟ್ರಸ್ಟ್ ಈ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ ಎಂದು ವಿವರಿಸಿದರು.
ಪ್ರಕೃತಿ ಚಿಕಿತ್ಸೆಯು ಆಧುನಿಕ ವೈದ್ಯವಿಧಾನದ ಹಲವು ದೃಷ್ಟಿಕೋನ ಮತ್ತು ಸಾಂಪ್ರದಾಯಿಕ ಚಿಕಿತ್ಸಾ ಕ್ರಮಗಳನ್ನು ಸೇರಿಸಿಕೊಂಡಿದ್ದು, ಸೂಜಿಚಿಕಿತ್ಸೆಯಿಂದ ಹಿಡಿದು ಗಿಡಮೂಲಿಕೆ, ಪೌಷ್ಟಿಕತೆಯಂಥ ಅಂಶಗಳನ್ನೂ ಸಮಗ್ರವಾಗಿ ಒಳಗೊಂಡಿದೆ. ಪ್ರಕೃತಿ ಚಿಕಿತ್ಸೆಯ ದೃಷ್ಟಿ ನಿರ್ದಿಷ್ಟ ರೋಗವನ್ನು ಗುಣಪಡಿಸುವುದು ಮಾತ್ರವಲ್ಲದೇ ಇಡೀ ವ್ಯಕ್ತಿಯ ಸಮಗ್ರ ಆರೋಗ್ಯ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಚಿಕಿತ್ಸೆ ನೀಡುವುದಾಗಿದೆ. ಅಸ್ವಸ್ಥತೆಯ ಮೂಲ ಕಾರಣವನ್ನು ಪತ್ತೆ ಮಾಡಿ ವ್ಯಕ್ತಿಯ ಸಾಮಾನ್ಯ ಸುಕ್ಷೇಮ ಮತ್ತು ಸ್ವಾಸ್ಥ್ಯವನ್ನು ಸುಧಾರಿಸುವಂತೆ ಮಾಡುವುದು ಈ ಚಿಕಿತ್ಸಾ ವಿಧಾನದ ವಿಶೇಷ.

ರಾಸಾಯನಿಕ ಹಾಗೂ ಕೀಟನಾಶಕಯುಕ್ತವಾದ ಆಹಾರ ಸೇವನೆ, ಹೆಚ್ಚುತ್ತಿರುವ ಮಾಲಿನ್ಯ ಹಾಗೂ ಜಾಗತಿಕ ತಾಪಮಾನದ ಕಾರಣದಿಂದ ಜನರ ಸಾಮಾನ್ಯ ಆರೋಗ್ಯಸ್ಥಿತಿಗೆ ಅಪಾಯ ಎದುರಾಗಿರುವ ಹಿನ್ನೆಲೆಯಲ್ಲಿ ಯೋಗ ಹಾಗೂ ಪ್ರಕೃತಿ ಚಿಕಿತ್ಸೆಯಂಥ ನಿಸರ್ಗದತ್ತವಾದ ವಿಧಾನಗಳು ಹಿಂದೆಂದಿಗಿಂತಲೂ ಹೆಚ್ಚಿನ ಮಹತ್ವ ಪಡೆದಿವೆ.ತಲಪಾಡಿಯಿಂದ ಅನತಿ ದೂರದ ದೇವಿನಗರದ ಸ್ವಚ್ಛ, ಸುಂದರ ಪರಿಸರದಲ್ಲಿ ಈ ಸುಸಜ್ಜಿತ ಕೇಂದ್ರ ಅಭಿವೃದ್ಧಿಪಡಿಸಲಾಗಿದೆ. ಉಪವಾಸ ಹಾಗೂ ಪಥ್ಯ ಚಿಕಿತ್ಸೆ, ಮಣ್ಣು ಚಿಕಿತ್ಸೆ, ಹೈಡ್ರೊಥೆರಪಿ, ಮಸಾಜ್ ಥೆರಪಿ, ಅಕ್ಯುಪಂಕ್ಚರ್, ಕ್ರೊಮೊಥೆರಪಿ, ಆಯಸ್ಕಾಂತ ಚಿಕಿತ್ಸೆ, ಯೋಗ ಚಿಕಿತ್ಸೆ, ಫಿಜಿಯೊಥೆರಪಿಯಂಥ ಸೌಲಭ್ಯಗಳು ಇಲ್ಲಿವೆ. ಅನೀಮಿಯಾ, ಆ್ಯಸಿಡಿಟಿ ಸಂಬಂಧಿತ ರೋಗಗಳು, ಶ್ವಾಸಕೋಶದ ಆಸ್ತಮಾ, ಅಲರ್ಜಿ, ಉದ್ವೇಗ, ಬೆಲ್ಸ್ ಪಾಲ್ಸಿ (ಪಾಶ್ರ್ವವಾಯು), ಬೆನ್ನು ನೋವು, ಕತ್ತು ನೋವು (ಸೆರ್ವಿಕಲ್ ಸ್ಪಾಂಡಿಲೋಸಿಸ್), ಮಧುಮೇಹ, ಚರ್ಮರೋಗ, ಖಿನ್ನತೆ, ಇಸುಬು, ಭುಜದ ಸಮಸ್ಯೆ, ಸಂಧಿವಾತ, ಮೂತ್ರಕೋಶದ ಕಲ್ಲು, ಅಧಿಕ ರಕ್ತದ ಒತ್ತಡ, ಹೈಪರ್ ಟೆನ್ಷನ್, ಡಿಸ್ಕ್ ಸಮಸ್ಯೆ, ಸಂತಾನಹೀನತೆ, ಕೀಲು ನೋವು, ನಿದ್ರಾಹೀನತೆ, ಋತುಸ್ರಾವದ ಸಮಸ್ಯೆ, ಮೈಗ್ರೇನ್ ತಲೆನೋವು, ಬೊಜ್ಜು, ಎಲುಬು ಸಾಂದ್ರತೆ ಕಡಿಮೆಯಾಗುವುದು, ಸೊರಿಯಾಸಿಸ್ ಮತ್ತಿತರ ರೋಗಗಳಿಗೆ ಅತ್ಯಾಧುನಿಕ ಹಾಗೂ ಸಮಗ್ರ ಚಿಕಿತ್ಸಾ ಸೌಲಭ್ಯವನ್ನು ತಜ್ಞವೈದ್ಯರು ನೀಡುತ್ತಾರೆ.ಪ್ರಕೃತಿ ಚಿಕಿತ್ಸೆ ಮತ್ತು ಯೋಗವಿಜ್ಞಾನದಲ್ಲಿ ಎರಡು ದಶಕಗಳಿಗೂ ಹೆಚ್ಚು ಅನುಭವ ಇರುವ ಮುಖ್ಯ ವೈದ್ಯಾಧಿಕಾರಿ ಡಾ.ರಾಜೇಶ್ ಪಾದೇಕಲ್ ಹಾಗೂ ಡಾ.ವಿಜಯಲಕ್ಷ್ಮಿ ರಾಜೇಶ್ ನೇತೃತ್ವದ ಅನುಭವಿ ವೈದ್ಯರು ಮತ್ತು ನುರಿತ ಚಿಕಿತ್ಸಾ ಸಹಾಯಕರ ತಂಡದ ಸೇವೆ ಲಭ್ಯವಿದೆ. ಸಂಪೂರ್ಣ ಹವಾನಿಯಂತ್ರಿತ ಹಾಗೂ ಸಾಮಾನ್ಯ ಕೊಠಡಿಗಳು, ಜನರಲ್ ವಾರ್ಡ್ ಸೇರಿದಂತೆ 100ಕ್ಕೂ ಅಧಿಕ ಬೆಡ್ ಸೇವೆ ಈ ಸುಸಜ್ಜಿತ ಕೇಂದ್ರದಲ್ಲಿದೆ.

ಸುದ್ಧಿಗೋಷ್ಠಿಯಲ್ಲಿ ಶಾರದಾ ಆಯುರ್ವೇದ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ರವಿಗಣೇಶ್, ಆಡಳಿತಾಧಿಕಾರಿ ಡಾ.ವಿವೇಕ್ ತಂತ್ರಿ ಉಪಸ್ಥಿತರಿದ್ದರು.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಹಿದಾಯತ್ ನಗರ ಇಹ್ಸಾನುಲ್ ವಹ್ಹಾಬ್ ಅಲ್ ಮದ್ರಸತುಲ್ ಹಿದಾಯ ಶೇ 100 ಫಲಿತಾಂಶ

March 4, 2026

ಪ್ರೇಮ ವೈಫಲ್ಯ ಹಿನ್ನೆಲೆ; ಒಮಾನ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸೋಮೇಶ್ವರದ ಯುವಕ

March 4, 2026

ಉಳ್ಳಾಲ ಮಸೀದಿ ವಿರುದ್ಧ ಕಮೆಂಟ್ ಮಾಡಿದ ಆರೋಪಿ ಬಂಧನ…..!

March 4, 2026
Leave A Reply

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025
suddi

ಹಿದಾಯತ್ ನಗರ ಇಹ್ಸಾನುಲ್ ವಹ್ಹಾಬ್ ಅಲ್ ಮದ್ರಸತುಲ್ ಹಿದಾಯ ಶೇ 100 ಫಲಿತಾಂಶ

By UllalaVaniMarch 4, 20260

ಉಳ್ಳಾಲ:ಕೋಟೆಕಾರ್ ಇಹ್ಸಾನುಲ್ ವಹ್ಹಾಬ್ ಅಲ್ ಮದ್ರಸತುಲ್ ಹಿದಾಯ ಹಿದಾಯತ್ ನಗರ ಸುನ್ನೀ ವಿಧ್ಯಾಭ್ಯಾಸ ಬೋರ್ಡ್ ನಡೆಸಿದ ಪಬ್ಲಿಕ್ ಪರೀಕ್ಷೆ ಯಲ್ಲಿ…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಪ್ರೇಮ ವೈಫಲ್ಯ ಹಿನ್ನೆಲೆ; ಒಮಾನ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸೋಮೇಶ್ವರದ ಯುವಕ

March 4, 2026

ಉಳ್ಳಾಲ ಮಸೀದಿ ವಿರುದ್ಧ ಕಮೆಂಟ್ ಮಾಡಿದ ಆರೋಪಿ ಬಂಧನ…..!

March 4, 2026

ಯುಕೆಟಿಎಲ್ ಪರಿಹಾರ ವಿವಾದ: ಕರ್ನಾಟಕಕ್ಕಿಂತ ಕೇರಳದ ರೈತರಿಗೆ ಹೆಚ್ಚಿನ ಪರಿಹಾರ ಸಿಕ್ಕಿದೆಯೇ? ಇಲ್ಲಿದೆ ಅಸಲಿ ಲೆಕ್ಕಾಚಾರ

March 3, 2026
1 2 3 … 1,820 Next
Automatic YouTube Gallery

ಉಳ್ಳಾಲ ಖಿಲೇರಿಯಾ ರಸ್ತೆ ಕಾಂಕ್ರಿಟೀಕರಣ | ಚರಂಡಿ ನಿರ್ಮಾಣಕ್ಕೆ ಸ್ಪಿಕರ್ ಯು.ಟಿ.ಖಾದರ್ ಶಿಲಾನ್ಯಾಸ

ಉಳ್ಳಾಲ ಖಿಲೇರಿಯಾ ರಸ್ತೆ ಕಾಂಕ್ರಿಟೀಕರಣ ಚರಂಡಿ ನಿರ್ಮಾಣಕ್ಕೆ ಯು.ಟಿ.ಖಾದರ್ ಶಿಲಾನ್ಯಾಸ; ಹಿರಿಯರಾದ ಮಹಮ್ಮದ್ ಮುಕಚ್ಚೇರಿ ಸಮ್ಮುಖದಲ್ಲೇ ಶಂಕು ಸ್ಥಾಪನೆ

ಕಾಮಗಾರಿಗೆ ಅಡ್ಡಿಪಡಿಸಿದ ಜನರ ಬಗ್ಗೆ ಯು.ಟಿ.ಕೆ ಹೇಳಿದ್ದೇನು..?
#ullalavani #news #Utkhader #Road #Ullala
ಉಳ್ಳಾಲ ಖಿಲೇರಿಯಾ ರಸ್ತೆ ಕಾಂಕ್ರಿಟೀಕರಣ | ಚರಂಡಿ ನಿರ್ಮಾಣಕ್ಕೆ ಸ್ಪಿಕರ್ ಯು.ಟಿ.ಖಾದರ್   ಶಿಲಾನ್ಯಾಸ
Now Playing
ಉಳ್ಳಾಲ ಖಿಲೇರಿಯಾ ರಸ್ತೆ ಕಾಂಕ್ರಿಟೀಕರಣ | ಚರಂಡಿ ನಿರ್ಮಾಣಕ್ಕೆ ಸ್ಪಿಕರ್ ಯು.ಟಿ.ಖಾದರ್ ಶಿಲಾನ್ಯಾಸ
ಉಳ್ಳಾಲ ಖಿಲೇರಿಯಾ ರಸ್ತೆ ಕಾಂಕ್ರಿಟೀಕರಣ ಚರಂಡಿ ನಿರ್ಮಾಣಕ್ಕೆ ಯು.ಟಿ.ಖಾದರ್ ...
ಉಳ್ಳಾಲ ಖಿಲೇರಿಯಾ ರಸ್ತೆ ಕಾಂಕ್ರಿಟೀಕರಣ ಚರಂಡಿ ನಿರ್ಮಾಣಕ್ಕೆ ಯು.ಟಿ.ಖಾದರ್ ಶಿಲಾನ್ಯಾಸ; ಹಿರಿಯರಾದ ಮಹಮ್ಮದ್ ಮುಕಚ್ಚೇರಿ ಸಮ್ಮುಖದಲ್ಲೇ ಶಂಕು ಸ್ಥಾಪನೆ

ಕಾಮಗಾರಿಗೆ ಅಡ್ಡಿಪಡಿಸಿದ ಜನರ ಬಗ್ಗೆ ಯು.ಟಿ.ಕೆ ಹೇಳಿದ್ದೇನು..?
#ullalavani #news #Utkhader #Road #Ullala
ಮಾ.4-8ರಂದು ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಕಾರ್ಯಕ್ರಮ
Now Playing
ಮಾ.4-8ರಂದು ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಕಾರ್ಯಕ್ರಮ
ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಬ್ರಹ್ಮಕಲಶೋತ್ಸವ;ಮಾ.4ರಂದು ವಿವಿಧ ಧಾರ್ಮಿಕ ...
ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಬ್ರಹ್ಮಕಲಶೋತ್ಸವ;ಮಾ.4ರಂದು ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಆರಂಭ

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳೀನ್ ಕಟೀಲ್ ಮಾಹಿತಿ

#ullalavani #news #tulunad #ullala #latestnews #breakingnews #package #mangalore #Sasihitlutemple
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d