UN NETWORKS
ಮುಂಬಯಿ: ಮುಲುಂಡ್ ಪೂರ್ವದ ಗಾವನಪಾಡದ ಶಾಂತಿವನ ಅಪಾರ್ಟ್ಮೆಂಟ್ ನಿವಾಸಿ ಉದ್ಯಾವರ ವಿಠಲ ಪೂಜಾರಿ (69.) ಡಿ.27 ರಂದು ಸಂಜೆ ಹೃದಯಾಘಾತದಿಂದ ನಿಧನರಾದರು.
ಮೂಲತಃ ಉಡುಪಿ ಉದ್ಯಾವರ ಮನೆತನದವರಾಗಿದ್ದ ಎಲ್ಐಸಿಯಲ್ಲಿ 25 ವರ್ಷಗಳ ಸೇವೆ ಸಲ್ಲಿಸಿ ನಿವೃತರಾಗಿದ್ದರು. ಎಲ್ಐಸಿ ಕ್ಲಬ್ ಸದಸ್ಯತ್ವದ ಕಾರ್ಯಾಧ್ಯಕ್ಷರು ಆಗಿದ್ದ ಮೃತರು ಪತ್ನಿ, ಒಂದು ಗಂಡು, ಒಂದು ಹೆಣ್ಣು ಸೇರಿದಂತೆ ಬಂಧು-ಬಳಗವನ್ನು ಅಗಲಿದ್ದಾರೆ.


