UN NETWORKS
ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಪಿ. ದಯಾನಂದ ಪೈ ಮತ್ತು ಶ್ರೀ ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರವು ಶ್ರೀಧವಲಾ ಮಹಾವಿದ್ಯಾಲಯ ಮೂಡುಬಿದಿರೆ ಇವರ ಸಹಯೋಗದೊಂದಿಗೆ ಜನವರಿ 19, 2019 ಶನಿವಾರದಂದು ಶ್ರೀಧವಳಾ ಮಹಾವಿದ್ಯಾಲಯದ ಸಭಾಂಗಣದಲ್ಲಿ ಯಕ್ಷಗಾನದಲ್ಲಿ ಹಾಸ್ಯ ಎಂಬ ವಿಷಯದ ಕುರಿತು ರಾಷ್ಟ್ರೀಯ ವಿಚಾರಸಂಕಿರಣವನ್ನು ಆಯೋಜಿಸಿದೆ.
ಈ ವಿಚಾರಸಂಕಿರಣದಲ್ಲಿ ಉದ್ಘಾಟನಾ ಸಮಾರಂಭದ ಬಳಿಕ ಕನ್ನಡ ಸಾಹಿತ್ಯ ಮತ್ತು ಯಕ್ಷಗಾನದ ಹಾಸ್ಯ, ಯಕ್ಷಗಾನ ಹಾಸ್ಯ ಪರಂಪರೆ ಮತ್ತು ವರ್ತಮಾನ, ಯಕ್ಷಗಾನ ಮತ್ತು ಇತರ ಕಲಾಪ್ರಕಾರಗಳಲ್ಲಿ ಹಾಸ್ಯಾಭಿವ್ಯಕ್ತಿ ಹಾಗೂ ಯಕ್ಷಗಾನದ ಹಾಸ್ಯದಲ್ಲಿ ನುಡಿವಿಶಿಷ್ಟತೆ ಎಂಬ ವಿಷಯಗಳ ಕುರಿತು ವಿದ್ವಾಂಸರಿಂದ ವಿಚಾರ ಮಂಡನೆ ನಡೆಯಲಿದೆ. ಅಪರಾಹ್ನ ಸಂಶೋಧಕರಿಂದ ಪ್ರಬಂಧಮಂಡನೆ ನಡೆಯಲಿದ್ದು, ಯಕ್ಷಗಾನದ ಹಾಸ್ಯಪಾತ್ರಗಳ ವೇಷಭೂಷಣಗಳು, ಯಕ್ಷಗಾನದ ಹಾಸ್ಯ ಪಾತ್ರಗಳ ಕುಣಿತ ಮತ್ತು ಅಭಿನಯ, ಹಾಸ್ಯ ಪಾತ್ರಗಳ ಭಾಷೆ, ಪೂರ್ವರಂಗದ ಹಾಸ್ಯ ವಿವೇಚನೆ, ಯಕ್ಷಗಾನದ ಪ್ರಮುಖ ಹಾಸ್ಯಗಾರರು, ಯಕ್ಷಗಾನ ಪ್ರಸಂಗಗಳಲ್ಲಿ ಹಾಸ್ಯ, ಯಕ್ಷಗಾನದ ಹಾಸ್ಯ ಮತ್ತು ಸಮಕಾಲೀನ ಪ್ರಜ್ಞೆ ಎಂಬ ವಿಷಯಗಳ ಕುರಿತು ಪ್ರಬಂಧಗಳನ್ನು ಸಿದ್ಧಪಡಿಸಬಹುದಾಗಿದೆ.
ಭಾಗವಹಿಸುವ ಪ್ರತಿನಿಧಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ. ಪ್ರಬಂಧವನ್ನು ಜನವರಿ 10, 2019ರೊಳಗಾಗಿ dkumble1975@gmail.com <mailto:dkumble1975@gmail.com> ಈ ವಿಳಾಸಕ್ಕೆ ಕಳುಹಿಸಿಕೊಡಬೇಕು. ಆಯ್ಕೆಗೊಂಡ ಪ್ರಬಂಧಗಳಿಗೆ ಮಂಡನೆಗೆ ಅವಕಾಶ ಹಾಗೂ ಪ್ರಮಾಣ ಪತ್ರವನ್ನು ನೀಡಲಾಗುವುದು. ಮುಂದೆ ಐಎಸ್ಬಿಎನ್ ನಂಬರ್ ಇರುವ ಕೃತಿಯಲ್ಲಿ ಆಯ್ಕೆಗೊಂಡ ಪ್ರಬಂಧಗಳನ್ನು ಪ್ರಕಟಿಸಲಾಗುವುದು. ವಿವರಗಳಿಗೆ 8310300875 ಅಥವಾ 9945249401 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕರಾದ ಡಾ.ಧನಂಜಯ ಕುಂಬ್ಳೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


