UN NETWORKS
ಮುಡಿಪು : ಪ್ರವಾದಿ (ಸ.ಅ) ರವರನ್ನು ನಿಂದನೆ ಮಾಡಿದ ಖಾಸಗಿ ಸುದ್ಧಿ ವಾಹಿನಿ ನಿರೂಪಕ ಅಜಿತ್ ಹನುಮಕ್ಕನವರ್ ವಿರುದ್ದ ಎಸ್ಸೆಸ್ಸೆಫ್ ಮುಡಿಪು ಸೆಕ್ಟರ್ ವತಿಯಿಂದ ಕೊಣಾಜೆ ಪೋಲಿಸ್ ಠಾಣೆಗೆ ದೂರು ನೀಡಲಾಗಿದೆ ಎಂದು ಎಸ್ಸೆಸ್ಸೆಫ್ ಮುಡಿಪು ಸೆಕ್ಟರ್ ಅಧ್ಯಕ್ಷ ರಫೀಕ್ ಮದನಿ ಪಾನೆಲ ತಿಳಿಸಿದ್ದಾರೆ.
ಈ ಸಂದರ್ಭ ಎಸ್ಸೆಸ್ಸೆಫ್ ರಾಜ್ಯ ಸಮಿತಿ ಸದಸ್ಯ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು, ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಕೋಶಾಧಿಕಾರಿ ಶರೀಫ್ ಮುಡಿಪು, ಕ್ಯಾಂಪಸ್ ಕಾರ್ಯದರ್ಶಿ ಇಲ್ಯಾಸ್ ಪೊಟ್ಟೊಳಿಕೆ ಮೊದಲಾದವರು ಉಪಸ್ಥಿತರಿದ್ದರು.


