UN NETWORKS
ಉಚ್ಚಿಲ: ರಾಷ್ಟ್ರೀಯ ದಂತ ವೈದ್ಯರ ದಿನದ ಅಂಗವಾಗಿ ಮಂಗಳೂರಿನ ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ವತಿಯಿಂದ ಉಚ್ಚಿಲಗುಡ್ಡೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಂತ ಆರೋಗ್ಯ ಮಾಹಿತಿ ಶಿಬಿರ ನಡೆಯಿತು.
ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಮುರಲೀ ಮೋಹನ ಚೂಂತಾರು ಅವರು ಮಕ್ಕಳಿಗೆ ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು. ಟೂತ್‍ಬ್ರಷ್, ಟೂತ್ ಪೇಸ್ಟ್ ಗಳ ಬಗ್ಗೆ ಮಾಹಿತಿ ನೀಡಿ, ಮಕ್ಕಳು ಹೇಗೆ ಮತ್ತು ಯಾವ ರೀತಿ ಹಲ್ಲು ಉಜ್ಜಬೇಕು ಎಂಬುದರ ಬಗ್ಗೆ ಉಪದೇಶ ನೀಡಿದರು. ಸುಂದರ, ಸುದೃಡ ಆರೋಗ್ಯವಂತ ಹಲ್ಲುಗಳು ಮಕ್ಕಳ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಶಾಲೆಯ 40ಮಕ್ಕಳಿಗೆ ಉಚಿತವಾಗಿ ಟೂತ್ ಪೇಸ್ಟ್ ಮತ್ತು ದಂತ ಆರೋಗ್ಯ ಮಾಹಿತಿ ಕರಪತ್ರವನ್ನು ಪ್ರತಿಷ್ಠಾನದ ವತಿಯಿಂದ ನೀಡಲಾಯಿತು. ಶಾಲಾ ಶಿಕ್ಷಕಿಯರುಗಳಾದ ಬಬಿತಾ ಹಾಗೂ ಶೋಭಿಕಾ ಉಪಸ್ಥಿತರಿದ್ದರು.


