UN NETWORKS
ಉಳ್ಳಾಲ: ಕ್ರಿಸ್‍ಮಸ್ ಹಬ್ಬದ ಪ್ರಯುಕ್ತ ತೊಕ್ಕೊಟ್ಟು ಸಮೀಪದ ಸಿ.ಎಸ್.ಐ ಬಿಷಪ್ ಸಾಜೆಂಟ್ ಸ್ಮಾರಕ ಚರ್ಚ್‍ಗೆ ಭೇಟಿ ನೀಡಿದ ಸೋಶಿಯಲ್‍ಅಚೀವ್‍ಮೆಂಟ್ ಪಾರ್ಮ್‍ನ ಸದಸ್ಯರು ಚರ್ಚ್‍ನ ಸಭಾಪಾಲಕರಾದ ರೆ.ಜಯಕುಮಾರ್ ಕೋಟ್ಯಾನ್ ರವರಿಗೆ ಹೂಗುಚ್ಛ ನೀಡಿ ಕ್ರಿಸ್‍ಮಸ್ ಹಬ್ಬದ ಶುಭಾಶಯ ಕೋರಿದರು.
ಈ ಸಂದರ್ಭ ಸಭಾ ಪಾಲಕ ಜಯಕುಮಾರ್ ಕೋಟ್ಯಾನ್ ಅವರು, ಕ್ರಿಸ್‍ಮಸ್ ಹಬ್ಬ ಸೌಹಾರ್ದತೆಯನ್ನೇ ಬಯಸುತ್ತದೆ. ಏಸು ಜನತೆಗೆ ಶಾಂತಿಯ ಸಂದೇಶವನ್ನೇ ಸಾರಿದ್ದಾರೆ. ಎಲ್ಲಾ ಧರ್ಮಗಳು ಶಾಂತಿಯನ್ನೇ ಸಾರಿವೆ. ನಾವು ಅದನ್ನು ಪಾಲಿಸೋಣ ಎಂದು ಸಂದೇಶ ನೀಡಿದರು.
ಸೋಶಿಯಲ್‍ಅಚೀವ್‍ಮೆಂಟ್ ಫಾರ್ಮ್‍ನ ಅಧ್ಯಕ್ಷ ನಾಸಿರ್ ಸಾಮಣಿಗೆ, ಸ್ಥಾಪಕ ಅಧ್ಯಕ್ಷ ನಿಯಾಝ್ ಸಾಮಣಿಗೆ, ಕಾರ್ಯದರ್ಶಿ ಇಬ್ರಾಹಿಂ ಖಲೀಲ್, ಪದಾಧಿಕಾರಿಗಳಾದ ಯೆನೆಪೋಯ ಕಾಲೇಜಿನ ಪ್ರಾದ್ಯಾಪಕ ನಿಯಾಝ್, ಕೋಶಾಧಿಕಾರಿ ಅಮೀರ್ ಶಾಫಿ, ಮೊಹಿದಿನ್ ಮಂಜನಾಡಿ, ಹನೀಫ್ ಕುತ್ತಾರ್, ಮನ್ಸೂರ್ ಸಾಮಣಿಗೆ, ರಹ್ಮಾನ್ ಕೊಣಾಜೆ, ನಶಾತ್ ಹಾಗೂ ಚರ್ಚ್‍ನ ಯುವಜನ ಅನ್ಯೋನ್ಯ ಕೂಟದ ಅಧ್ಯಕ್ಷ ಕೀರ್ತನ್ ಸೋನ್ಸ್, ಕಾರ್ಯದರ್ಶಿ ಪ್ರಶಾಂತ್ ಕೋಟಿಯನ್, ಕೋಶಾಧಿಕಾರಿ ಶೈಲೇಶ್ ಪಾಲನ್ನ ಮತ್ತು ಸಲಹೆಗಾರರಾದ ಸ್ಟೀವನ್ ಸೋನ್ಸ್ ಮೊದಲಾದವರು ಉಪಸ್ಥಿತರಿದ್ದರು.


