ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ದೇರಳಕಟ್ಟೆ: ನಿಟ್ಟೆ ಉಷಾ ಶೂಶ್ರೂಷ ಸಂಸ್ಥೆಯ ವತಿಯಿಂದ ವಿಶ್ವ ಶೂಶ್ರೂಷಕರ ದಿನಾಚರಣೆಯನ್ನು ಕೆ.ಎಸ್.ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ ಸೆಮಿನಾರ್ ಹಾಲ್ನಲ್ಲಿ ಆಚರಿಸಲಾಯಿತು. ದೇಶದ ಆರೋಗ್ಯದ ಮೂಲ ಸಂಪತ್ತು ದಾದಿಯರು ಎಂದು ಲಕ್ಷ್ಮಿ ಕಾಲೇಜ್ ಆಪ್ ನರ್ಸಿಂಗ್ ಉಪಪ್ರಾಂಶುಪಾಲರಾದ ಡಾ|ಥೆರೆಜಾ, ಎಲ್, ಮೆಂಡೂನ್ಸಾ ಮುಖ್ಯ ಅತಿಥಿಯಾಗಿ ಉಪನ್ಯಾಸ ನೀಡಿದರು.
ಕಾಲೇಜು ಪ್ರಾಂಶುಪಾಲೆ ಡಾ.ಫಾತಿಮಾ ಡಿಸಿಲ್ವ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸ್ಕೂಲ್ ಆಪ್ ನರ್ಸಿಂಗ್ ಪ್ರಾಂಶುಪಾಲರಾದ ಕ್ಲೀಟ ಪಿಂಟೋ, ನರ್ಸಿಂಗ್ ಮೇಲ್ವಿಚಾರಕಿ ಸುನಿತಾ ವೇಗಸ್, ಅರುಣಿ ಉಪಸ್ಥಿತರಿದ್ದರು.
ಅರುಣಿ.ಜಿ ಸ್ವಾಗತಿಸಿದರು. ಅನ್ಸಿಲ್ಲಾ ರೀನಾ ರೋಜ್ ವಂದಿಸಿದರು. ಅಶ್ವಿನಿ ಕೆ.ವಿ ಕಾರ್ಯಕ್ರಮ ನಿರ್ವಹಿಸಿದರು.


