UN NETWORKS
ಕೋಟೆಕಾರು: ಬಸ್- ಬೈಕ್ ಅಪಘಾತದಲ್ಲಿ ವ್ಯಕ್ತಿಯೋರ್ವರು ಗಾಯಗೊಂಡಿರುವ ಘಟನೆ ಕೋಟೆಕಾರು ನೂರ್ ಮಹಲ್ ಸಭಾಂಗಣದ ಎದುರುಗಡೆ ಇಂದು ಮಧ್ಯಾಹ್ನ ಸಂಭವಿಸಿದೆ.
ಕೋಟೆಕಾರು ನಿವಾಸಿ ಮೋಹನ್ ಗಾಯಗೊಂಡವರು. ತಲಪಾಡಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ಸು ಪ್ರಯಾಣಿಕರನ್ನು ಹತ್ತಿಸಲೆಂದು ಹಠಾತ್ ಆಗಿ ನಿಲ್ಲಿಸಿದಾಗ ಹಿಂಬದಿಯಿಂದ ತೊಕ್ಕೊಟ್ಟು ಭಾಗಕ್ಕೆ ತೆರಳುತ್ತಿದ್ದ ಬೈಕ್ ಬಸ್ಸಿನ ಹಿಂಭಾಗಕ್ಕೆ ಢಿಕ್ಕಿ ಹೊಡೆದಿದೆ. ಗಾಯಾಳು ಮೋಹನ್ ಅವರನ್ನು ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಲಾಗಿದೆ.


