UN NETWORKS
ಉಳ್ಳಾಲ: ಅಯ್ಯಪ್ಪ ಮಾಲಾಧಾರಿಯಾಗಿ ಕಳೆದ 25ವರ್ಷಗಳಿಂದ ಶಬರಿಮಲೆ ಕ್ಷೇತ್ರಕ್ಕೆ ತೆರಳಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುತ್ತಾ ಬಂದಿರುವ, ಭಾರತೀಯ ತೀಯಾ ಸಮಾಜದ ರಾಜೇಶ್ ಸ್ವಾಮಿ ಕುಂಪಲ ಅವರು ತನ್ನ 25ನೇ ವರ್ಷದ ಯಾತ್ರೆಯನ್ನು ಶಾಶ್ವತವಾಗಿ ನಪಿಸಿಕೊಳ್ಳುವ ದೃಷ್ಟಿಯಿಂದ ಈ ಬಾರಿ ಶ್ರೀ ಶಿರಡಿ ಕ್ಷೇತ್ರದಿಂದ ಸುಮಾರು 1500ಕಿ.ಮೀ. ದೂರದ ಶಬರಿಮಲೆ ಕ್ಷೇತ್ರಕ್ಕೆ ಕಾಲ್ನಡಿಗೆಯಲ್ಲಿ ಪ್ರಯಾಣ ನಡೆಸುವ ಸಂಕಲ್ಪ ಮಾಡಿದ್ದು, ಅದರಂತೆ ಪಾದಯಾತ್ರೆ ಮಾಡುತ್ತಾ ಬುಧವಾರ ಶ್ರೀ ಮಂಗಳಾದೇವಿ ಸನ್ನಿಧಿಗೆ ತಲುಪಿದ್ದಾರೆ.
ಈ ಸಂದರ್ಭ ಭಾರತೀಯ ತೀಯಾ ಸಮಾಜದ ಮುಖಂಡರು ಸ್ಥಳಕ್ಕೆ ಆಗಮಿಸಿ ಅವರ ಪ್ರಯತ್ನ ಶ್ಲಾಘಿಸಿ, ಶಾಲು ಹೊದಿಸಿ ಫಲಪುಷ್ಪ ಸ್ಮರಣಿಕೆ ನೀಡಿ ಗೌರವಿಸಿ ತಮ್ಮ ಸಮುದಾಯಯದವರೇ ಆದ ರಾಜೇಶ್ ಸ್ವಾಮಿ ಕಳೆದ ಎರಡು ವರ್ಷಗಳಿಂದ ಪಾದಯಾತ್ರೆ ಮೂಲಕ ಶಬರಿಮಲೆಗೆ ತೆರಳುತ್ತಿದ್ದು ಅವರ ಮುಂದಿನ ಯಾತ್ರೆ ಸುಖಕರವಾರಲಿ ಎಂದು ಶುಭ ಹಾರೈಸಿದರು.
ಭಾರತೀಯ ತೀಯಾ ಸಮಾಜ ಕೇಂದ್ರ ಸಮಿತಿಯ ಉಪಾಧ್ಯಕ್ಷ ರಾಜಗೋಪಾಲ್ ಜೆಪ್ಪು, ಉಳ್ಳಾಲ ವಲಯ ಅಧ್ಯಕ್ಷ ಎಂ. ದಿನೇಶ್ ಕುಂಪಲ, ಉಪಾಧ್ಯಕ್ಷ ನಾಗಪ್ಪ ಅಡ್ಯಾರ್, ಕೋಶಾಧಿಕಾರಿ ಸುರೇಶ್ ಭಟ್ನಗರ, ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದ ಮೊಕ್ತೇಸರರುಗಳಾದ ದಾಮೋದರ ಉಳ್ಳಾಲ್, ಮಾಧವ ಸುವರ್ಣ ಒಂಬತ್ತುಕೆರೆ ಹಾಗೂ ದೇವದಾಸ್ ಕೊಲ್ಯ, ತೀಯಾ ಸೇವಾ ಸಹಕಾರ ಸಂಘದ ನಿರ್ದೇಶಕ ರಾಜೀವ ಒಂಬತ್ತುಕೆರೆ, ಕಾರ್ಯದರ್ಶಿ ಯಶವಂತಿ ಉಚ್ಚಿಲ್, ಮಧು ಭಟ್ನಗರ, ಸುನಂದ, ರಜನಿ, ಹಾಗೂ ಸುರೇಂದ್ರ ಉಪಸ್ಥಿತರಿದ್ದರು.


