UN NETWORKS
ಕೊಣಾಜೆ: ಕೊಣಾಜೆ ಗ್ರಾಮದ ಬೊಳ್ಮ ಉಳ್ಳಾಲ್ತಿ ಅಮ್ಮನವರ ಕ್ಷೇತ್ರ ಸಂಪರ್ಕ ರಸ್ತೆ ಕಾಂಕ್ರೀಟ್ ಕಾಮಗಾರಿಗೆ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ ಸೋಮವಾರ ಶಿಲಾನ್ಯಾಸಗೈದರು.
ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು ಆ ನಿಟ್ಟಿನಲ್ಲಿ ಸಚಿವರಲ್ಲಿ ಮಾಡಿದ ಮನವಿ ಮೇರೆಗೆ ತಕ್ಷಣ ಅನುದಾನ ನೀಡಿರುವುದರಿಂದ ಗುದ್ದಲಿ ಪೂಜೆ ನೆರವೇರಿಸಲಾಗಿದ್ದು ಹತ್ತು ಲಕ್ಷ ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ. ಸಚಿವರು ಜಾತ್ಯಾತೀತ ನೆಲೆಯಲ್ಲಿಕಾರ್ಯಾಚರಿಸುತ್ತಿದ್ದು ಮಸೀದಿ, ಚರ್ಚ್, ದೇವಸ್ಥಾನಗಳಿಗೆ ಅನುದಾನ ನೀಡಿದ್ದಾರೆ. ಉಳ್ಳಾಲ್ತಿ ಅಮ್ಮನವರ ಕ್ಷೇತ್ರದ ಕೆಲಸಕ್ಕಾಗಿ ಐದು ಲಕ್ಷ ರೂ. ಅನುದಾನದ ಜೊತೆಗೆ ಮರದ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ ಎಂದರು.
ಉಳ್ಳಾಲ್ತಿ ಅಮ್ಮನವರ ಕ್ಷೇತ್ರ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್, ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ರವೀಂದ್ರ ರೈ ಕಲ್ಲಿಮಾರ್, ಕೋಶಾಕಾರಿ ರವೀಂದ್ರ ಬಂಗೇರ, ಕೊಣಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ನಝರ್ ಷಾ ಪಟ್ಟೋರಿ, ಮಾಜಿ ಅಧ್ಯಕ್ಷ ಶೌಕತ್ ಅಲಿ, ಅಚ್ಚುತ ಗಟ್ಟಿ, ಮಾಜಿ ಉಪಾಧ್ಯಕ್ಷ ರಾಜಾರಾಮ ರೈ, ಇಕ್ಬಾಲ್, ಮುತ್ತು ಶೆಟ್ಟಿ, ಗುಲಾಬಿ ಶೆಟ್ಟಿಗಾರ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಕೋಡಿಜಾಲ್, ಸಂಘಟನಾ ಕಾರ್ಯದರ್ಶಿ ಸಲೀಂ ಮೆಗಾ, ಪ್ರಮುಖರಾದ ದೇವಣ್ಣ ಶೆಟ್ಟಿ, ದಾಸರಮೂಲೆ ವನಜಾಕ್ಷಿ, ಹರೀಶ್ ಪೂಜಾರಿ, ರಾಘವ ಪೂಜಾರಿ, ಪದ್ಮನಾಭ ಗಟ್ಟಿ ಹಾಗೂ ಎಂಜಿನಿಯರ್ ನಿತಿನ್ ಉಪಸ್ಥಿತರಿದ್ದರು.


