UN NETWORKS
ಅಸೈಗೋಳಿ: ಅಸೈಗೋಳಿ ಶ್ರೀ ಧರ್ಮಶಾಸ್ತ ಅಯ್ಯಪ್ಪನ ನೂತನ ವಿಗ್ರಹದ ಎರಕ ಹೊಯ್ಯುವ ಹಾಗೂ ನೂತನ ನಾಗನಕಟ್ಟೆಯ ಭೂಮಿಪೂಜೆ ಮತ್ತು 32ನೇ ವಾರ್ಷಿಕೋತ್ಸವ ಭಾನುವಾರ ನಡೆಯಲಿದೆ. ಕಾರ್ಯಕ್ರಮದ ಹಿನ್ನೆಲೆಯಲ್ಲಿ ಗಣಹೋಮ, ಭಜನಾ ಸಂಕೀರ್ತನೆ, ಅಯ್ಯಪ್ಪ ಸ್ವಾಮಿಯ ನೂತನ ವಿಗ್ರಹದ ಎರಕ, ಧಾರ್ಮಿಕ ಸಭೆ, ಮಹಾಪೂಜೆ, ಸಂಕ್ರಮಣ ಪೂಜೆ ನಡೆಯಲಿದೆ.
ಸಭಾ ಕಾರ್ಯಕ್ರಮ ವಿಶ್ವನಾಥ ಕಾಯರ್ಪಳಿಕೆ ಉದ್ಘಾಟಿಸಲಿದ್ದಾರೆ. ಸಚಿವ ಯು.ಟಿ.ಖಾದರ್, ಪದ್ಮನಾಭ ಕೋಟ್ಯಾನ್, ಜಿತೇಂದ್ರ ಶೆಟ್ಟಿ, ಮಿಥುನ್ ರೈ, ಚಂದ್ರಹಾಸ ಉಳ್ಳಾಲ್, ವಿಶ್ವಾಸ್ ದಾಸ್, ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರ್ಗುತ್ತು, ಹರೀಶ್ ಕುತ್ತಾರ್, ಅನಿಲ್ದಾಸ್, ಶಂಕರ್ ನಾರಾಯಣ ಭಟ್, ಸತೀಶ್ಚಂದ್ರ ಸೆಟ್ಟಿ ಕುಡಾಗುತ್ತು, ಸುರೇಶ್ ಭಟ್ನಗರ, ಅಶೋಕ್ ಭಂಡಾರಿ, ಮಂಜುನಾಥ ಆಳ್ವ, ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹಾ, ರಘುರಾಮ ಕಾಜವ, ಸಂತೋಷ್ ಶೆಟ್ಟಿ, ಬಾಸ್ಕರ ಕೆ., ಶೌಕತ್ ಅಲಿ, ರಾಜಾರಾಮ ರೈ, ಹೇಮಂತ್ ಶೆಟ್ಟಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಮಂದಿರದ ಸಂಚಾಲಕ ಶ್ರೀನಿವಾಸ ಶೆಟ್ಟಿ ಪುಲ್ಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


