UN NETWORKS
ಅಸೈಗೋಳಿ: ಆಕಾಶದಿಂದ ಚಂದ್ರನನ್ನು ಭೂಮಿಗೆ ತಂದು ನಿಲ್ಲಿಸುತ್ತೇವೆ ಎನ್ನುವ ರೀತಿಯಲ್ಲಿ ಪ್ರಧಾನಿ ನೀಡಿದ್ದ ಪೊಳ್ಳು ಭರವಸೆಗಳಿಂದ ಬೇಸತ್ತ ಜನ ಪಂಚರಾಜ್ಯ ಚುನಾವಣೆಯ ಮೂಲಕ ತಕ್ಕಪಾಠ ಕಲಿಸಿದ್ದು, ರಾಹುಲ್ ಗಾಂಧಿ ದೇಶದ ಮುಂದಿನ ಪ್ರಧಾನಿಯಾಗುವುದಕ್ಕೆ ಫಲಿತಾಂಶ ಮುನ್ಸೂಚನೆಯಾಗಿದೆ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ ಅಭಿಪ್ರಾಯಪಟ್ಟರು.
ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಹಿನ್ನೆಲೆಯಲ್ಲಿ ಬುಧವಾರ ಅಸೈಗೋಳಿ ಜಂಕ್ಷನ್ನಲ್ಲಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ವಿಜಯೋತ್ಸವದಲ್ಲಿ ಮಾತನಾಡಿದರು.ದೇಶದಲ್ಲಿ ನೋಟ್ ನಿಷೇಧ ಬಳಿಕ ಜನಸಾಮಾನ್ಯರ ಜೀವನ ಸಂಕಷ್ಟಕ್ಕೆ ಸಿಲುಕಿದ್ದು, ಚುನಾವಣೆಯ ಫಲಿತಾಂಶದ ಮೂಲಕ ಸಾಬೀತಾಗಿದೆ. ಪ್ರಧಾನಿ ಮೋದಿ ಕೇವಲ ಭರವಸೆಗಳಿಂದಲೇ ಜನರನ್ನು ಮೋಸ ಮಾಡಿದ್ದಾರೆ ಎಂದು ಹೇಳಿದರು.ಉಪಾಧ್ಯಕ್ಷ ಮುಸ್ತಫಾ ಮಲಾರ್ ಮಾತನಾಡಿ, ಕಳೆದ ನಾಲ್ಕುವರೆ ವರ್ಷದ ಆಡಳಿತದಲ್ಲಿ ಕೇಂದ್ರ ಸರ್ಕಾರ ವೈಫಲ್ಯ ಅನುಭವಿಸಿದೆ, ದೇಶದ ಅಭಿವೃದ್ಧಿ ಕಾಂಗ್ರೆಸ್ನಿಂದ ಮಾತ್ರ ಸಾಧ್ಯ ಎನ್ನುವ ಸತ್ಯ ಅರಿತ ಮತದಾರರು ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಬೆಂಬಲ ನೀಡಿದ್ದಾರೆ ಎಂದು ತಿಳಿಸಿದರು.
ತಾಲೂಕು ಪಂಚಾಯಿತಿ ಸದಸ್ಯರಾದ ಅಬೂಬಕ್ಕರ್ ಸಿದ್ದೀಕ್ ಕೊಳಂಗೆರೆ, ಸುರೇಖ ಚಂದ್ರಹಾಸ್, ಪದ್ಮಾವತಿ ಪೂಜಾರಿ, ಕೊಣಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ನಝರ್ ಷಾ ಪಟ್ಟೋರಿ, ಡಿಸಿಸಿ ಸದಸ್ಯ ಶ್ರೀನಿವಾಸ ಶೆಟ್ಟಿ ಪುಲ್ಲು, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಕೋಡಿಜಾಲ್, ಸಂಘಟನಾ ಕಾರ್ಯದರ್ಶಿ ಸಲೀಂ ಮೇಘಾ, ಮುಖಂಡರಾದ ಗಣೇಶ್ ಶೆಟ್ಟಿ ತಲಪಾಡಿ, ಜಮಾಲ್ ಅಜ್ಜಿನಡ್ಕ, ಸಿದ್ದೀಕ್ ಹರೇಕಳ, ಅಹ್ಮದ್ ಅಜ್ಜಿನಡ್ಕ, ಲವೀಶ್ ಶೆಟ್ಟಿ, ಕಿಶೋರ್ ಗಟ್ಟಿ, ಪದ್ಮನಾಭ ಗಟ್ಟಿ, ಅಚ್ಚುತ ಗಟ್ಟಿ, ದೇವಣ್ಣ ಶೆಟ್ಟಿ, ಮುಹಮ್ಮದ್ ಅಡ್ಕರೆ, ಗುಲಾಬಿ, ಲತಾ ಕಡೆಮುಗೇರು, ಚಂದ್ರಹಾ ಕೊಣಾಜೆ, ಮನ್ಸೂರ್, ಕರೀಂ, ಬಾಝಿಲ್ ಡಿಸೋಜ, ಯು.ಎ.ಇಸ್ಮಾಯಿಲ್, ಬೆನೆಡಿಕ್ಟ್, ವಿನ್ಸೆಂಟ್ ಮೊದಲಾದವರು ಭಾಗವಹಿಸಿದ್ದರು.
`ಬಿಜೆಪಿ ಮಖಂಡರು ಹಾಗೂ ಪ್ರಧಾನಿ ರಾಹುಲ್ ಗಾಂಧಿ ಬಗ್ಗೆ ಲಘುವಾಗಿ ಮಾತನಾಡಿದರೂ ಪಂಚರಾಜ್ಯಗಳ ಮತದಾರರು ಮುಂದಿನ ಬಾರಿ ರಾಹುಲ್ ಪ್ರಧಾನಿಯಾಗಬೇಕು ಎನ್ನುವ ನೆಲೆಯಲ್ಲಿ ಮತ ಚಲಾಯಿಸಿದ್ದಾರೆ’
ಅಬ್ದುಲ್ ರಹ್ಮಾನ್ ಕೋಡಿಜಾಲ್, ಬ್ಲಾಕ್ ಕಾಂಗ್ರೆಸ್ ಪ್ರ.ಕಾ.



