UN NETWORKS
ಕೋಟೆಕಾರ್: ವಿದ್ಯಾರ್ಥಿಗಳು ಎಲ್ಲಾ ಚಟುವಟಿಕೆಗಳಿಗೆ ಉತ್ತಮ ರೀತಿಯಲ್ಲಿ ಭಾಗವಹಿಸಿ ಬಹುಮಾನ ಪಡೆದರು. ಬಹುಮಾನ ಸಿಗದವರು ಬೇಸರ ಮಾಡದೇ ಇನ್ನು ಮುಂದಿನ ಚಟುವಟಿಕೆಯಲ್ಲಿ ಭಾಗವಹಿಸಿ ಬಹುಮಾನ ಪಡೆಯಬೇಕು ಎಂದು ಕೊಣಾಜೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮತ್ತು ಹಳೇ ವಿದ್ಯಾರ್ಥಿ ಸವಿತಾ ಗಟ್ಟಿ ಹೇಳಿದರು.
ಅವರು,ಸಾರಸ್ವತ ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ಗುರುವಾರ ನಡೆದ ಕೋಟೆಕಾರ್ ಆನಂದಾಶ್ರಮ ಪ್ರೌಢ ಶಾಲೆಯಲಿ ಶಾಲಾ ವಾರ್ಷಿಕೋತ್ಸವ ಸಂಭ್ರಮ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.ಶಾಲಾ ವಾರ್ಷಿಕೋತ್ಸವ ಮಕ್ಕಳಿಗೆ ಒಂದು ಸಂಭ್ರಮದ ದಿನ. ವಿವಿಧ ಸ್ಪರ್ಧೆಗಳು ಮಕ್ಕಳಿಗೆ ಖುಷಿ ಕೊಡುತ್ತದೆ. ಶಿಕ್ಷಣ ಸಂಸ್ಥೆಯ ಮೇಲೆ ಪ್ರೀತಿ ಕೂಡಾ ಮೂಡುತ್ತದೆ. ಉತ್ತಮ ರೀತಿಯಲ್ಲಿ ನಡೆಯಲಿ ಎಂದು ಮುರಳೀಧರ ರಾವ್ ಹೇಳಿದರು .ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ತಾಂತ್ರಿಕಾಧಿಕಾರಿ ಮತ್ತು ಶಾಲಾ ಹಳೆ ವಿದ್ಯಾರ್ಥಿ ತಾರನಾಥ್ ಗಟ್ಟಿ ಮಾತನಾಡಿದರು.
ಪ್ರತಿಭ ಪುರಸ್ಕಾರ ಮತ್ತು ಸಾಂಸ್ಕøತಿಕ ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನ ವಿತರಣೆ ಮಾಡಲಾಯಿತು.ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜೀವನ್ ಸೋಮೇಶ್ವರ , ಉಪಾಧ್ಯಕ್ಷ ಶಕುಂತಲ, ಗೌರವಾಧ್ಯಕ್ಷ ಕೃಷ್ಣಪ್ಪ ಅಡ್ಕ ಮೊದಲಾದವರು ಉಪಸ್ಥಿತರಿದ್ದರು.ಗಾಯತ್ರಿ ಅದ್ಯಪಾಡಿ ಸ್ವಾಗತಿಸಿದರು. ಪ್ರದೀ ಕುಮಾರ್ ಮತ್ತು ಗಣೇಶ್ ಬಹುಮಾನ ವಿತರಣೆ ಮಾಡಿದರು. ಶ್ರೀನಿವಾಸ್ ಶೆಣೈ ವಂದಿಸಿದರು.


